Fact Check: ಇದು ಉತ್ತರಾಖಂಡದ ಹಿಮನದಿ ಸ್ಫೋಟದ ವೀಡಿಯೊನಾ?

ಉತ್ತರಾಖಂಡದಲ್ಲಿ ಭಾನುವಾರ ಹಿಮನದಿ ಸ್ಫೋಟಗೊಂಡ ವೀಡಿಯೋವೆಂದು ಬೃಹತ್ ಪ್ರಮಾಣದ ಹಿಮ ಜಾರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೆಬ್ರವರಿ 7 ರಂದು ಹಿಮಪಾತವಾದ ಕಾರಣ ನಂದಾ ದೇವಿ ಹಿಮನದಿ ಪ್ರವಾಹದಂತೆ ಹರಿದು ಜಲವಿದ್ಯುತ್ ಕೇಂದ್ರಗಳು ಮತ್ತು ಮನೆಗಳಿಗೆ ನೀರು ಹೊಕ್ಕು  ಸ್ಫೋಟದಲ್ಲಿ ಇಲ್ಲಿಯವರೆಗೂ ಸುಮಾರು 26 ಮೃತದೇಹಗಳು ಪತ್ತೆಯಾಗಿವೆ. ಇನ್ನು  ತಪೋವನ್ ವಿದ್ಯುತ್ ಯೋಜನೆ ಸ್ಥಳದಲ್ಲಿ ಉತ್ತರ ಪ್ರದೇಶದ ಸುಮಾರು 55 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಹಲವಾರು ಕಾರ್ಮಿಕರು ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಕಾರ್ಮಿಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಉತ್ತರಾಖಂಡದ ಹಿಮನದಿ ಸ್ಫೋಟವನ್ನು ಸೆರೆಹಿಡಿಯಲಾದ ಮೊದಲ ವಿಡಿಯೋ ಇದಾಗಿದೆ ಎಂದು ಕೆಲವು ನೆಟಿಜನ್‌ಗಳು ಈ 30 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಆದರೆ ಈ ವೀಡಿಯೊ ಜನವರಿ 2021 ರಲ್ಲಿ ನೇಪಾಳದ ಕಪುಚೆ ಗ್ಲೇಸಿಯರ್ ಸರೋವರದಲ್ಲಿ ಹಿಮಪಾತವಾದ ದೃಶ್ಯವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಆದ್ದರಿಂದ ಪ್ರಶ್ನೆಯಲ್ಲಿರುವ ವೀಡಿಯೊ ಸುಮಾರು ಒಂದು ತಿಂಗಳ ಹಳೆಯದು ಮತ್ತು ನೇಪಾಳದ ಕಪುಚೆ ಗ್ಲೇಸಿಯರ್ ಸರೋವರದಲ್ಲಿ ಹಿಮಪಾತವಾಗಿರುವ ದೃಶ್ಯ ಇದಾಗಿದೆ ಎಂಬುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights