ಭಾರತೀಯ ಒಲಿಂಪಿಯನ್‌ ಆಟಗಾರ್ತಿಗೆ ವಿಮಾನ ಹತ್ತಲು ನಿರಾಕರಿಸಿದ ಅಧಿಕಾರಿಗಳು;ನೆರವಿಗೆ ಬಂದ ಕೇಂದ್ರ ಸಚಿವ!

ಒಲಿಂಪಿಯನ್‌ನಲ್ಲಿ ಶೂಟರ್‌ ವಿಭಾಗದ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟು ಶೂಟರ್‌ ಮನು ಭಾಕರ್‌ ಅವರಿಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ವಿಮಾನ ಹತ್ತಲು ಅಧಿಕಾರಿಗಳು ನಿರಾಕರಿಸಿದ್ದು, ಕೇಂದ್ರ ಸಚಿವರ ಸಹಾಯ ಪಡೆದು ಭಾಕರ್‌ ವಿಮಾನ ಹೇರಿದ್ದಾರೆ ಎಂದು ವರದಿಯಾಗಿದೆ.

ಮಧ್ಯಪ್ರದೇಶದ ಶೂಟಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಉದ್ದೇಶದಿಂದ ಭಾಕರ್‌ ಅವರು ದೆಹಲಿಯಿಂದ ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಅದಕ್ಕಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ, ಅವರು ಎರಡು ಗನ್‌ಗಳನ್ನು ಸಾಗಿಸುತ್ತಿರುವುದರಿಂದಾಗಿ ಅವರು 10,200ರೂ ಹಣ ನೀಡಬೇಕು ಎಂದು ಹೇಳಿದ್ದಾರೆ ಎಂದು ಭಾಕರ್‌ ಆರೋಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದ ಭಾಕರ್‌, ನಾನು ದೆಹಲಿ ವಿಮಾನ ನಿಲ್ದಾಣದಲ್ಲಿದ್ದೇನೆ. ನನಗೆ ಏರ್ ಇಂಡಿಯಾ ವಿಮಾನ 437ನ್ನು ಏರಲು ಅನುಮತಿ ನೀಡುತ್ತಿಲ್ಲ. ನನ್ನ ಬಳಿ ಎರಡು ಗನ್ ಹಾಗೂ ಮದ್ದುಗುಂಡುಗಳಿದ್ದವು. ಇದಕ್ಕೆ ಸಂಬಂಧಿಸಿದ ಎಲ್ಲ ಮಾನ್ಯವಿರುವ ದಾಖಲೆಗಳು, ಡಿಜಿಸಿಎ ಅನುಮತಿ ಇದ್ದರೂ ಸಹ 10,200 ರೂ. ನೀಡುವಂತೆ ಕೇಳಿದ್ದಾರೆ. ಗನ್ ಗಳನ್ನು ಸಾಗಿಸಲು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರ ಅನುಮತಿ ಇದೆ. ಮಧ್ಯಪ್ರದೇಶದ ಶೂಟಿಂಗ್ ಅಕಾಡಮಿಯಲ್ಲಿ ನನ್ನ ತರಬೇತಿಗಾಗಿ ಶಸ್ತ್ರಾಸ್ತ್ರಗಳನ್ನು ನಾನು ಕೊಂಡೊಯ್ಯುವ ಅಗತ್ಯವಿದೆ.  ಪ್ರತಿಬಾರಿ ಆಟಗಾರರನ್ನು ಅವಮಾನಿಸಬೇಡಿ ಹಾಗೂ ಹಣಕ್ಕಾಗಿ ದಯವಿಟ್ಟು ಪೀಡಿಸಬೇಡಿ” ಎಂದು ಬರೆದಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಹರ್ದೀಪ್ ಸಿಂಗ್ ಪುರಿಯವರನ್ನು ಟ್ಯಾಗ್‌ ಮಾಡಿದ್ದರು. ಟ್ವೀಟ್ ಗಮನಿಸಿದ ಸಚಿವರು ಅವರಿಗೆ ನೆರವು ನೀಡಿದ್ದು, ವಿಮಾನ ಪ್ರಯಾಣಕ್ಕೆ ಅವಕಾಶ ಮಾಡಿದ್ದಾರೆ. ಅಲ್ಲದೆ, ಮುನುಭಾಕರ್‌, ನೀವು ನಮ್ಮ ಹೆಮ್ಮೆ ಎಂದು ರಿಜಿಜು ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಅಮಿತ್‌ ಶಾ ವಿರುದ್ಧ ಟಿಎಂಸಿ ಸಂಸದರ ಮಾನನಷ್ಟ ಮೊಕದಮೆ; ಗೃಹ ಸಚಿವರಿಗೆ ಸಮನ್ಸ್‌ ನೀಡಿದ ಕೋರ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights