ಚಿಕಿತ್ಸೆಗೆಂದು ಬಂದ ಮಹಿಳೆಯನ್ನ ಎಳೆದೊಯ್ದು ಹೊರಹಾಕಿದ ಸಿಬ್ಬಂದಿ…!

ಕೊರೊನಾ ಬಂದಾಗಿನಿಂದಲೂ ಒಂದಲ್ಲಾ ಒಂದು ಹೃದಯ ವಿದ್ರಾವಕ ಘಟನೆಗಳು ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿವೆ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲಾ ಆಸ್ಪತ್ರೆಯಿಂದ ಅವಮಾನಕರ ವಿಡಿಯೋ ಹೊರಬಿದ್ದಿದೆ. ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆಗೆ ಬಂದ ಮಹಿಳೆಯನ್ನು ಎಳೆದೊಯ್ದು, ಆಸ್ಪತ್ರೆಯ ಹೊರಗಿನ ರಸ್ತೆಯಿಂದ ಸುಮಾರು 300 ಮೀಟರ್ ದೂರ ಎಳೆದೊಯ್ದಿದ್ದಾರೆ.

ಈ ಘಟನೆ ಗುರುವಾರ ಸಂಜೆ ಸಂಭವಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿವಿಲ್ ಸರ್ಜನ್ ಡಾ. ಗಾರ್ಡ್ ಮಹಿಳೆಯನ್ನು ಆಸ್ಪತ್ರೆಯಿಂದ ಹೊರಗೆ ಎಳೆಯುವಾಗ ಅಲ್ಲಿ ಅನೇಕ ಜನರು ಇದ್ದರೂ ಆಕೆಯ ಸಹಾಯಕ್ಕೆ ಯಾರು ಬಂದಿಲ್ಲ. ಅದನ್ನು ತಡೆಯಲೂ ಯಾರೂ ಪ್ರಯತ್ನಿಸಿಲ್ಲ.

ಆದರೆ, ಯಾವುದೇ ಕಾರಣವಿಲ್ಲದೆ ಮಹಿಳೆ ಆಸ್ಪತ್ರೆಗೆ ಪ್ರವೇಶಿಸಿದ್ದಾಳೆ ಎನ್ನಲಾಗುತ್ತಿದೆ. ಹೊರಗೆ ಹೋಗಲು ಹೇಳಿದಾಗ ಮಹಿಳೆ ನಿರಾಕರಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಇದರ ನಂತರ, ಸಿಬ್ಬಂದಿ ಅವಳನ್ನು ಹಿಡಿದು ಆಸ್ಪತ್ರೆಯ ಆವರಣದಿಂದ ಹೊರಗೆ ಎಳೆದೊಯ್ದಿದ್ದಾರೆ. ಆದರೆ ಅಂತಹ ಯಾವ ಕಾರಣಕ್ಕೆ ಮಹಿಳೆಯನ್ನು ಸಿಬ್ಬಂದಿ ಅಮಾನವೀಯವಾಗಿ ಎಳೆದೊಯ್ದ ಎನ್ನುವ ವಿಚಾರ ಮಾತ್ರ ಖಚಿತವಾಗಿ ತಿಳಿದುಬಂದಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights