ಸದನದಿಂದ ಕಾಂಗ್ರೆಸ್‌ ಶಾಸಕ ಸಂಗಮೇಶ್‌ ಅಮಾನತು; ಸ್ಪೀಕರ್‌ BJP ಏಜೆಂಟ್‌ ಎಂದ ಶಾಸಕ!

ಇಂದಿನಿಂದ (ಗುರುವಾರ) ಕರ್ನಾಟಕ ರಾಜ್ಯ ಬಜೆಟ್‌ ಅಧಿವೇಶನ ಆರಂಭವಾಗಿದ್ದು, ಕಲಾಪದ ವೇಳೆ ಅಂಗಿ ಬಿಟ್ಟಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಶಾಸಕ ಸಂಗಮೇಶ್ ಅವರನ್ನು ವಿಧಾನಸಭಾ ಸ್ಪೀಕರ್‌ ಕಾಗೇರಿ ಅವರು ಒಂದು ವಾರ ಸದನದಿಂದ ಅಮಾನತು ಮಾಡಿದ್ದಾರೆ.

ನನ್ನ ಮೇಲೆ ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ನನ್ನ ಪುತ್ರ, ತಮ್ಮನ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಇದನ್ನು ವಿರೋಧಿಸಿ ಸದನದಲ್ಲಿ ಶರ್ಟ್ ಬಿಚ್ಚಿ ಅಸಮಾಧಾನ ವ್ಯಕ್ತಪಡಿಸಿದೆ. ಅದಕ್ಕಾಗಿ ನನ್ನನ್ನು ಅಮಾನತು ಮಾಡಲಾಗಿದೆ. ನಾನು ದಿನವೂ ಸದನಕ್ಕೆ ಬರುತ್ತೇನೆ, ನ್ಯಾಯ ಕೇಳುತ್ತೇನೆ ಎಂದು ಭದ್ರಾವತಿ ಶಾಸಕ ಸಂಗಮೇಶ್‌ ಹೇಳಿದ್ದಾರೆ.

ಇವರುಗಳು ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೋಮು ದ್ವೇಷ ಹಬ್ಬುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವ ಇದೆಯಾ? ಸ್ಪೀಕರ್ ಅವರು ಬಿಜೆಪಿ ಏಜೆಂಟ್ ಆಗಿದ್ದಾರಾ? ನನ್ನನ್ನ ಮಾನಸಿಕವಾಗಿ ಕುಗ್ಗಿಸಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಸಂಗಮೇಶ್‌ ಆರೋಪಿಸಿದ್ದಾರೆ.

ಭದ್ರಾವತಿಯಲ್ಲಿ ಬಿಜೆಪಿ ‌ನೆಲಕಚ್ಚಿದೆ. ಅಲ್ಲಿ 15 ವಿಧಾನಸಭಾ ಚುನಾವಣೆ ನಡೆದಿವೆ. ಇಲ್ಲಿವರೆಗೆ ಬಿಜೆಪಿ ತಳವೂರಲು ಸಾಧ್ಯವಾಗಿಲ್ಲ. ಅದಕ್ಕೆ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಕ್ಷೇತ್ರದ ಜನರ ಮನಸ್ಸಲ್ಲಿ ನಾನಿದ್ದೇನೆ. ಜನರ ಸೇವೆಯನ್ನ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ನಮ್ಮ‌ ಮನೆ ಮುಂದೆ 500 ಪೊಲೀಸರನ್ನು ನಿಯೋಜಿಸಿದ್ದಾರೆ. ಅಷ್ಟೊಂದು ಹಣ ಖರ್ಚು ಮಾಡಬೇಕಾ? ಅವರ ಕನಸು ಯಾವತ್ತೂ ಉದ್ಧಾರವಾಗಲ್ಲ, ಬಿಜೆಪಿಯವರಿಗೆ ಭದ್ರಾವತಿಯಲ್ಲಿ ಅಭ್ಯರ್ಥಿಯೇ ಇಲ್ಲ, ಕೋಮುವಾದಿಗಳನ್ನು ಭದ್ರಾವತಿಯವರು ಬೆಂಬಲಿಸುವುದಿಲ್ಲ ಎಂದು ಭದ್ರಾವತಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಶರ್ಟ್ ಬಿಚ್ಚಿ ಭದ್ರಾವತಿ ಶಾಸಕ ಪ್ರತಿಭಟನೆ : ವಿಧಾನಸಭೆ ಕಲಾಪ ಮುಂದೂಡಿಕೆ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights