ರಮೇಶ್ ರಾಸಲೀಲೆ ಕೇಸ್ : ಯಾರಿಂದ ಬಂತು ಸಿಡಿ? : ತಾಳೆಯಾಗದ ದಿನೇಶ್ ಹೇಳಿಕೆ..!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ಹೇಳಿಕೆ ಪೋಲೀಸರಿಗೆ ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಹೌದು.. ಇಂದು ಪೋಲೀಸ್ ವಿಚಾರಣೆಗೆಂದು ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಗೆ ದಿಢೀರ್ ಹಾಜರಾಗಿದ್ದ ದಿನೇಶ್ ರನ್ನು ಕಳೆದ 3 ಗಂಟೆಗಳಿಂದ ವಿಚಾರಣೆ ಒಳಪಡಿಸಲಾಗಿದೆ.

ಮಾರ್ಚ್ 1 ರಂದು ರಾಮಕೃಷ್ಣ ಲಾಡ್ಜ್ ನಲ್ಲಿ ಸ್ನೇಹಿತನ ಮುಖಾಂತರ ರಮೇಶ್ ರಾಸಲೀಲೆ ಸಿಡಿ ಪಡೆದುಕೊಂಡೆ ಎಂದು ದೂರಿನಲ್ಲಿ ಹೇಳಿದ್ದ ದಿನೇಶ್, ಇಂದು ವಿಚಾರಣೆ ವೇಳೆ  ಅಪರಿಚಿತ ವ್ಯಕ್ತಿಯಿಂದ ಸಿಡಿ ಪಡೆದುಕೊಂಡೆ ಎಂದು ಹೇಳಿದ್ದು ಭಾರೀ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಮಾತ್ರವಲ್ಲದೇ ಮಾರ್ಷ್ 1 ರಂದು ಲಾಡ್ಜ್ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರೆ ಇಡೀ ದಿನದ ದೃಶ್ಯಗಳಲ್ಲಿ ದಿನೇಶ್ ಕಂಡು ಬಂದಿಲ್ಲ. ಹೀಗಾಗಿ ದಿನೇಶ್ ಹೇಳಿಕೆ ವಿಚಾರಣೆಯನ್ನು ತೀವ್ರಗೊಳಿಸುವಂತೆ ಮಾಡಿದೆ.

ಈ ಹಿಂದೆ ದೂರು ನೀಡುವ ಸಂದರ್ಭದಲ್ಲಿ ದಿನೇಶ್ ಮಾದ್ಯಮದ ಮುಂದೆ ಮಾತನಾಡಿ, ” ಸಂತ್ರಸ್ತೆಯ ಕುಟುಂಬಸ್ಥರು ಬಂದು ನ್ಯಾಯ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ. ಯುವತಿ ಮಾದ್ಯಮದ ಮುಂದೆ ಬರಲಾಗುವುದಿಲ್ಲ ” ಎಂದು ಹೇಳಿದ್ದರು. ಹೀಗಾಗಿ ದಿನೇಶ್ ಈ ಹಿಂದೆ ನೀಡಿದ ಹೇಳಿಕೆಗೂ ಈಗ ಹೇಳುತ್ತಿರುವ ವಿಚಾರಗಳಿಗೆ ಹೋಲಿಕೆಯಾಗದ ಹಿನ್ನಲೆ ಪೋಲೀಸರು ವಿಚಾರಣೆಯನ್ನು ಇನ್ನೂ ಚುರುಕುಗೊಳಿಸಿದ್ದಾರೆ.

ಜೊತೆಗೆ ದಿನೇಶ್ ತಮಗೆ ಯುವತಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಯುವತಿ ವಾಸವಾಗಿದ್ದಳು ಎಂದು ಹೇಳುವ ಹಾಸ್ಟಲ್ ಗೂ ಕೂಡ ಮಹಿಳಾ ಕಾನ್ಸಸ್ಟೇಬಲ್ ಗಳು ಭೇಟಿ ನೀಡಿ ವಿಚಾರಣೆ ನಡೆಸಿದಾಗಲೂ ಮಹಿಳೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಯುವತಿ ಯಾರು? ಎಲ್ಲಿದ್ದಾಳೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಕೂಡ ಉತ್ತರ ಸಿಕ್ಕಿಲ್ಲ.

ಇದರ ನಡುವೆ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲಾಗಿದೆ. ರಾಜ್ಯ ಮಹಿಳಾ ಆಯೋಗದ ಪ್ರಮೀಳಾ ನಾಯ್ಡು, ” ಮಹಿಳೆಗೆ ಸಂಪೂರ್ಣ ಸುರಕ್ಷತೆ ನೀಡುತ್ತೇವೆ. ನಮ್ಮ ಬಳಿ ಆಕೆ ಮಾತನಾಡಬಹುದು. ಯಾವುದೇ ಭಯವಿಲ್ಲದೇ ನಮ್ಮೊಂದಿಗೆ ಫೋನ್ ಕರೆಯಲ್ಲೂ ಮಹಿಳೆ ಮಾತನಾಡಬಹುದು” ಎಂದು ಅಭಯ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights