ರಮೇಶ್‌ ರಾಸಲೀಲೆ ಪ್ರಕರಣ: ದೂರು ವಾಪಸ್‌ ಪಡೆಯಲು ಮುಂದಾದ ದಿನೇಶ್‌ ಕಲ್ಲಹಳ್ಳಿ!

ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಮ್ಮ ದೂರನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ.

ರಮೇಶ್ ಜಾರಕಿಹೊಳಿ ಯುವತಿಯೋರ್ವಳಿಗೆ ಕೆಲಸ ಕೊಡುವುದಾಗಿ ಹೇಳಿ ವಂಚಿಸಿ, ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ವಿಡೀಯೋ ಸಹಿತ ದಿನೇಶ್ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮಾರ್ಚ್ 2ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಡಿಯೋ ಸಾಕ್ಷಿ ದೂರು ನೀಡಿದ್ದರು. ತಮ್ಮ ವಕೀಲರ ಮೂಲಕ ಪೊಲೀಸ್‌ ಠಾಣೆಗೆ ದೂರು ಹಿಂತೆಗೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಈ ಪ್ರಕರಣದಿಂದ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿ ರೂಪಾಯಿ ಡೀಲ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.‌ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆ ದೂರು ನೀಡಿದ ನನಗೆ ಇದರಿಂದ ಮನಸ್ಸಿಗೆ ನೋವಾಗಿ ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾದ್ದೇನೆ. ಅದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಮಾನ ಹರಾಜು ಹಾಕಲಾಗುತ್ತಿದೆ. ಪ್ರಕರಣದಲ್ಲಿ ದೂರುದಾರರನ್ನೇ ಗುರಿಯಾಯಿಸಲಾಯಿತು ಎಂದು ದಿನೇಶ್‌ ಕಲ್ಲಹಳ್ಳಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅನೇಕ ಕಡೆ ಸಚಿವ ರಮೇಶ್ ಜಾರಕಿಹೊಳಿ ಪರ- ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.

ಮಾರ್ಚ್‌ 2ರ ಸಂಜೆ ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಮಾಡಿದ ಈ ಆರೋಪ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಕಲ್ಲಹಳ್ಳಿ ಕಬ್ಬನ್ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡುವುದಕ್ಕೂ ಮೊದಲೇ ರಮೇಶ್‌ ಜಾರಕಿಹೊಳಿ ಇದ್ದಾರೆ ಎನ್ನಲಾದ ಲೈಂಗಿಕ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಸಾಮಾಜಿಕ ಜಾಲತಾಣಗಳಲ್ಲೆಲ್ಲ ಈ ವಿಡಿಯೋ ಹರಿದಾಡುತ್ತಿದೆ.

ರಮೇಶ್ ಜಾರಕಿಹೊಳಿ ಸಿಡಿ ಹೊರ ಬರುತ್ತಿದ್ದಂತೆ, ರಾಜ್ಯದ ಇನ್ನೂ 6 ಸಚಿವರು ಮಾಧ್ಯಮಗಳು ತಮ್ಮ ವಿರುದ್ಧ ಈ ರೀತಿಯ ಮಾನಹಾನಿಕರ ಸುದ್ದಿ ಪ್ರಕಟವಾಗಬಾರದೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.

Read Also: ರಾಸಲೀಲೆ ಪ್ರಕರಣ: ವಿಡಿಯೋ ಮಾಡಿದ್ದೆಲ್ಲಿ? ಹಂಚಿದವರಾರು? ವಲಸಿಗರ ನಿಯಂತ್ರಣಕ್ಕೆ BJPಯದ್ದೇ ಕುತಂತ್ರ?

Spread the love

Leave a Reply

Your email address will not be published. Required fields are marked *