ರಾಜ್ಯದಲ್ಲಿ ಧೂಳೆಬ್ಬಿಸಿದ ರಾಬರ್ಟ್ : ರಿಲೀಸ್ ಆದ ಒಂದೇ ದಿನಕ್ಕೆ 20 ಕೋಟಿ ಕಲೆಕ್ಷನ್!

ಬಾ.. ಬಾ.. ನಾ ರೆಡಿ ಅಂತಲೇ ಧೂಳೆಬ್ಬಿಸಿದ ರಾಬರ್ಟ್ ಸಿನಿಮಾ ರಿಲೀಸ್ ಆಗಿ ಒಂದೇ ದಿನದಲ್ಲಿ ಬರೋಬ್ಬರಿ 20 ಕೋಟಿ ಕಲೆಕ್ಷನ್ ಮಾಡಿದೆ.

ಶಿಳ್ಳೆ ಹೊಡೆದು, ಚಪ್ಪಾಳೆ ಹಾಕಿ, ಕುಣಿದು ಕುಪ್ಪಳಿಸಿದ ದರ್ಶನ್ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ದರ್ಶನ್ ಕಟ್ ಔಟ್ ಹಾಕಿ, ಹಾರದಿಂದ ಅಲಂಕಾರ ಮಾಡಿ, ಹಾಲಿನ ಅಭಿಷೇಕ, ಸ್ವೀಟ್ ಹಂಚಿಕೆ ಹೀಗೆ ಒಂದಾ? ಎರಡಾ..? ದಚ್ಚು ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ. ಕಳೆದ ಒಂದುವರೆ ವರ್ಷದಿಂದ ತೆರೆ ಕಾಣದ ದಚ್ಚು ಸಿನಿಮಾ ನೋಡಿದ ಮಂದಿ ಸಕತ್ ಖುಷಿಯಾಗಿದ್ದಾರೆ.

ಅಂದಹಾಗೆ ಸಿನಿಮಾ ತಯಾರಾಗಿದ್ದು 50 ಕೋಟಿ ಬಜೆಟ್ ನಲ್ಲಿ ಎನ್ನಲಾಗುತ್ತಿದೆ. ಆದರೆ ದಚ್ಚು ಸಿನಿಮಾ ರಾಬರ್ಟ್ ಮೊದಲ ದಿನವೇ 20 ಕೋಟಿ ಕಲೆಕ್ಷನ್ ಮಾಡಿ ಎಲ್ಲಾ ದಾಖಲಲೆಗಳನ್ನು ಉಡೀಸ್ ಮಾಡಿದೆ. ಮೊದಲ ದಿನ 6000 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಂಡ ಸಿನಿಮಾ 17 ಕಲೆಕ್ಷನ ಮಾಡಿದೆ. ಇನ್ನೂ ಥಿಯೇಟರ್ ನ ಟಿಕೆಟ್ ಕೌಂಟರ್ ಲೆಕ್ಕ ಬಾಕಿ ಇದ್ದು ಇದರ ಅಂದಾಜಿನ ಪ್ರಕಾರ 25 ಕೋಟಿ ಅಸುಪಾಸು ಕೆಲೆಕ್ಷನ್ ಆಗುವ ಸಾಧ್ಯತೆ ಇದೆ.

ರಾಜ್ಯದಲ್ಲೇ 17 ಕೋಟಿ ಕಲೆಕ್ಷನ್ ಮಾಡಿದೆ.  ದಕ್ಷಣ ಕನ್ನಡ ಜಿಲ್ಲೆಯಲ್ಲಿ 7 ಕೋಟಿ , ಶಿವಮೊಗ್ಗ 1 ಕೋಟಿ, ಹೈದರಾಬಾದ ಕರ್ನಾಟಕದಲ್ಲಿ 3 ಕೋಟಿ, ಚಿತ್ರದುರ್ಗ ದಾವಣೆಗೆಯಲ್ಲಿ 2.3 ಕೋಟಿ, ಎಂಎಂಸಿಹೆಚ್ ನಲ್ಲಿ 2 ಕೋಟಿ ಬಾಚಿದೆ. ಕನ್ನಡ , ತೆಲಗು, ಆಂದ್ರ ಹಾಗೂ ತೆಲಂಗಾಣ ಸೇರಿ ಒಟ್ಟು 20 ಕೋಟಿ ಕಲೆಕ್ಷನ್ ಈವರೆಗೆ ಆಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ವೀಕೆಂಡ್ ಮೂಡ್ ನಲ್ಲಿರುವ ಮಂದಿ ರಾಬರ್ಟ್ ಸಿನಿಮಾ ವನ್ನು ಎಂಜಾಯ್  ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights