ಕೇರಳದಲ್ಲಿ ದೇವಾಲಯ ಓಪನ್: ರಾಜಕೀಯ ಕೆಸರೆರೆಚಾಟಕ್ಕೆ ಮುಂದಾದ ಬಿಜೆಪಿ

ಲಾಕ್ ಡೌನ್ ತೆರವಿನ ನಂತರ ಕೇರಳದಲ್ಲಿ ದೇವಾಲಯಗಳನ್ನು ಪುನಃ ತೆರೆಯುತ್ತಿದ್ದಂತೆ ಕೇರಳ ಬಿಜೆಪಿ ಇದನ್ನು ’ತುರಾತುರಿ ಕ್ರಮ’ ಎಂದು ಬಣ್ಣಿಸಿ ರಾಜ್ಯ ಸರ್ಕಾರವನ್ನು ಟೀಕಿಸಿದೆ. ಕೇಂದ್ರದ ಮಾರ್ಗಸೂಚಿಯನ್ನು ಅನುಸರಿಸಿ ನಿರ್ಬಂಧಗಳೊಂದಿಗೆ ದೇವಾಲಯಗಳನ್ನು ತೆರೆಯಲು ಕೇರಳದಲ್ಲಿ ಅವಕಾಶ ನೀಡಲಾಗಿದೆ. ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ದೇವಾಲಯವನ್ನು ತೆರೆಯಬೇಕು ಎಂದು ಆಗ್ರಹಿಸಿತ್ತು. ಈಗ ವಿರುದ್ಧ ನಿಲುವು ತಳೆದಿದೆ. ಒಟ್ಟಿನಲ್ಲಿ ದೇವಾಲಯದ ವಿಷಯದಲ್ಲಿ ಬಿಜೆಪಿಯು ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ದೇವಾಲಯಗಳನ್ನು ತೆರೆಯುತ್ತಿದ್ದಂತೆ ಕೇರಳದ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ವಿ ಮುರಳೀಧರನ್ ಈ ಕ್ರಮವನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ: “ಭಕ್ತರ ವಿರೋಧದ ನಡುವೆಯೂ ದೇವಾಲಯಗಳನ್ನು ಪುನಃ ತೆರೆಯುವುದರ ಹಿಂದೆ ಕೇರಳ ಸರ್ಕಾರವು ಬೇರೇನೋ ಕೆಟ್ಟ ಉದ್ದೇಶವನ್ನು ಹೊಂದಿದೆ. ದೇವಾಲಯವನ್ನು ತೆರೆಯಲು ಭಕ್ತರು ಅಥವಾ ದೇವಾಲಯ ಸಮಿತಿಗಳು ಒತ್ತಾಯಿಸಿಲ್ಲ” ಎಂದಿದ್ದಾರೆ.

“ಇಷ್ಟು ಆತುರ ಯಾಕೆ?  ಇದು ನಾಸ್ತಿಕ ‌ಪಿಣರಾಯಿ ವಿಜಯನ್ ಸರ್ಕಾರವು ಭಕ್ತರನ್ನು ಹೀಗಳೆಯುವ ಉದ್ದೇಶಪೂರ್ವಕ ಪ್ರಯತ್ನವೇ? ಸರ್ಕಾರ ಭಕ್ತರ ಧ್ವನಿಗೆ ಕಿವಿಗೊಡಬೇಕು ಹಾಗೂ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು, ”ಎಂದು ಅವರು ಜೂನ್‌ 8 ರಂದು ಹೇಳಿದ್ದಾರೆ.

ಆದರೆ ಇದೇ ವಿ. ಮುರುಳೀಧರನ್ ದೇವಾಲಯವನ್ನು ತೆರೆಯದ ಕಾರಣಕ್ಕಾಗಿ ಈ ಹಿಂದೆ ಕೇರಳದ ಕಮ್ಯುನಿಷ್ಟ್ ಎಡ ಪಂಥೀಯ ಸರ್ಕಾರವನ್ನು ಟೀಕಿಸುತ್ತಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights