ರಾಜ್ಯದಲ್ಲಿ 6 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ : ಒಂದೇ ದಿನದಲ್ಲಿ 120 ಕೇಸ್!

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಕಾಣ ಸಿಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ 120  ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈವರೆಗೆ ಸೋಂಕಿತರ ಸಂಖ್ಯೆ ಒಟ್ಟು 6 ಸಾವಿರ ಗಡಿ ದಾಟಿದೆ.

ಇಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ ನಲ್ಲಿ ಹೊಸದಾಗಿ 120  ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಒಟ್ಟು 6,041 ಸೋಂಕಿತರು ರಾಜ್ಯದಲ್ಲಿ ದಾಖಲಾಗಿದ್ದಾರೆ. ಇವರಲ್ಲಿ 2862 ಜನ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಸದ್ಯ 3,108 ಆ್ಯಕ್ಟೀವ್​​​ ಕೇಸುಗಳು ಇವೆ. ಇವರಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 120 ಮಂದಿಗೆ ಕೋವಿಡ್​​-19 ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಸಾವಿರ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಇಂದು 257 ಮಂದಿ ಡಿಸ್ಚಾರ್ಜ್ ಆಗಿ 3 ಮಂದಿ ಸಾವನ್ನಪ್ಪಿದ್ದಾರೆ.  ರಾಜ್ಯದಲ್ಲಿ ಕೊರೋನಾದಿಂದ ಮೃತರಾದವರ ಸಂಖ್ಯೆಯೂ 69ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ 10, ದಾವಣಗೆರೆ 8, ಕೋಲಾರ 8, ಧಾರವಾಡ 6, ಬೆಳಗಾವಿ 4, ಹಾವೇರಿ 3, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಒಬ್ಬರು, ಉಡುಪಿ 93, ಕಲಬುರಗಿ 66, ಬೀದರ್ 19, ಯಾದಗಿರಿ 17, ಮಂಡ್ಯ 11, ಉತ್ತರ ಕನ್ನಡ 10 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹೊಸದಾಗಿ ಪತ್ತೆಯಾದ 120 ಕೇಸುಗಳ ಪೈಕಿ  ದಾವಣಗೆರೆ 3, ಹಾಸನ 3, ಬಳ್ಳಾರಿಯಲ್ಲಿ 3, ಬೆಂಗಳೂರು ನಗರ 42, ಯಾದಗಿರಿ 27, ವಿಜಯಪುರ 13, ಕಲಬುರ್ಗಿ 11, ಬೀದರ್ 5, ದಕ್ಷಿಣ ಕನ್ನಡ  4, ಧಾರವಾಡ 4 ಪ್ರಕರಣಗಳು ದಾಖಲಾಗಿವೆ. ಇನ್ನು, ಬಾಗಲಕೋಟೆ, ರಾಮನಗರ ತಲಾ ಎರಡು ಮತ್ತು ಬೆಳಗಾವಿಯಲ್ಲಿ ಒಬ್ಬರಿಗೆ ಕೊರೋನಾ ಬಂದಿದೆ ಎಂದು ವರದಿಯಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights