ಆಸ್ಪತ್ರೆಯ ನಿರ್ಲಕ್ಷ್ಯದಿಂದ ಶಿಶು ಶವ ಎಳೆದೊಯ್ದ ಬೀದಿ ನಾಯಿಗಳು…!

ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವೊಂದನ್ನು ಬೀದಿ ನಾಯಿಗಳು ಹೊತ್ತೊಯ್ದ ಕರುನಾಜನಕ ಘಟನೆ ಒಡಿಶಾದ ಭದ್ರಾಕ್ ಜಿಲ್ಲಾ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಈ ಘಟನೆ ನಡೆದಿದೆ

ಬೀದಿ ನಾಯಿಗಳು ನವಜಾತ ಶಿಶುವಿನ ದೇಹವನ್ನು ಹಿಡಿದು ಓಡಾಡುತ್ತಿರುವ ದೃಶ್ಯ ಕಂಡು ಜನ ಬೆರಗಾಗಿದ್ದಾರೆ. ಕೂಡಲೆ ಅಡೋಗ್ ಒಡಿಶಾದ ಸರ್ಕಾರಿ ಆಸ್ಪತ್ರೆಯ ಹೊರಗೆ ಇದ್ದ ಜನ ನಾಯಿಯಿಂದ ಬೆನ್ನಟ್ಟಿದ್ದಾರೆ.

ಸ್ವಲ್ಪ ಸಮಯದ ನಂತರ, ಜನರು ಬೆನ್ನಟ್ಟಿದ ನಾಯಿಗಳು ಶವವನ್ನು ಬಿಟ್ಟು ಹೋಗಿವೆ.

“ಶಿಶುವಿನ ದೇಹವನ್ನು ಹೊತ್ತೊಯ್ಯುವ ನಾಯಿಯನ್ನು ನೋಡಿದಾಗ ನಾವು ಆಸ್ಪತ್ರೆಗೆ ಭೇಟಿ ನೀಡಿದ್ದೆವು. ನಾವು ಕೂಗುತ್ತಾ ನಾಯಿಯನ್ನು ಬೆನ್ನಟ್ಟಲು ಪ್ರಾರಂಭಿಸಿದೆವು. ನಾಯಿಯ ಹಿಂದೆ ಕೆಲವು ಮೀಟರ್ ಓಡಿದ ನಂತರ ನಾಯಿ ಮಗುವಿನ ದೇಹವನ್ನು ಬಿಟ್ಟು ಓಡಿದೆ” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

“ನಂತರ ಶಿಶು ಸಾವನ್ನಪ್ಪಿರುವುದು ಕಂಡುಬಂದಿದೆ. ಆದರೆ ಅದನ್ನು ಆಸ್ಪತ್ರೆಯ ಅಧಿಕಾರಿಗಳು ತೆರೆದ ಜಾಗದಲ್ಲಿ ಎಸೆದಿದ್ದಾರೆ. ನಾಯಿ ಮಗುವಿನ ಶವವನ್ನು ಹೊತ್ತೊಯ್ದಿದೆ. ಇದಕ್ಕೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ” ಎಂದು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights