ರಾಜಸ್ಥಾನದ ಎರಡು ಪ್ರತ್ಯೇಕ ಘಟನೆಯಲ್ಲಿ ಎಂಟು ಮಕ್ಕಳು ಸಾವು…!

ರಾಜಸ್ಥಾನದಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ. ಕಂಟೇನರ್‌ನಲ್ಲಿ ಆಡುವಾಗ ಉಸಿರುಗಟ್ಟಿ 5 ಮಕ್ಕಳು ಸಾವನ್ನಪ್ಪಿದ್ದು ಇನ್ನೂ 3 ಮಕ್ಕಳು ಮಣ್ಣು ಕುಸಿದು ಪ್ರಾಣ ಬಿಟ್ಟ ಘಟನೆ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಸಂಭವಿಸಿವೆ.

ದುರಂತ ಘಟನೆಯೊಂದರಲ್ಲಿ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಹಿಮ್ಮತಸರ್ ಗ್ರಾಮದಲ್ಲಿ ಭಾನುವಾರ ಆಟವಾಡುತ್ತಿದ್ದಾಗ ಧಾನ್ಯ ಸಂಗ್ರಹಣಾ ಪಾತ್ರೆಯಲ್ಲಿ ಹಾರಿ ಐದು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ ಕಂಟೇನರ್ ಬಹುತೇಕ ಖಾಲಿಯಾಗಿತ್ತು. ಈ ಪಾತ್ರೆಯಲ್ಲಿ ಮಕ್ಕಳು ಆಟವಾಡುವಾಗ ಒಂದರ ನಂತರ ಒಂದರಂತೆ ಹಾರಿದ್ದಾರೆ. ಮಕ್ಕಳು ಒಳಗೆ ಬಿದ್ದ ನಂತರ ಕಂಟೇನರ್ ಆಕಸ್ಮಿಕವಾಗಿ ಮುಚ್ಚಲ್ಪಟ್ಟಿದೆ. ಈ ವೇಳೆ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಮೃತ ಮಕ್ಕಳನ್ನು ಸೇವಾರಾಮ್ (4), ರವಿನಾ (7), ರಾಧಾ (5), ಪೂನಂ (8) ಮತ್ತು ಮಾಲಿ ಎಂದು ಗುರುತಿಸಲಾಗಿದೆ.

ಕೆಲಸಕ್ಕೆ ಹೋಗಿದ್ದ ಮಕ್ಕಳ ತಾಯಿ ಮನೆಗೆ ಬಂದಾಗ,  ಅವರನ್ನು ಹುಡುಕಿದ್ದಾಳೆ. ಆಗ ಪಾತ್ರೆಯನ್ನು ತೆರೆದು ನೋಡಿದ್ದಾಳೆ. ಕೂಡಲೆ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿಯಿತು. ಆದರೆ ಅಷ್ಟರಲ್ಲಾಗಲೇ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗುತ್ತು.

ಇನ್ನೊಂದು ಘಟನೆಯಲ್ಲಿ, ಶನಿವಾರ ಸಂಜೆ ಜುಂಜುನು ಜಿಲ್ಲೆಯಲ್ಲಿ ಆಡುತ್ತಿದ್ದಾಗ ನಾಲ್ಕು ಮಕ್ಕಳ ಮೇಲೆ ಮಣ್ಣಿನ ರಾಶಿ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಪ್ರಿನ್ಸ್ , 7 ವರ್ಷದ ಸುರೇಶ್ ಮತ್ತು ಸೋನಾ (10) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕನಿಗೆ ಚಿಕಿತ್ಸೆ ಕೊಡಲಾಗುತ್ತಿದೆ.

ಮರಣೋತ್ತರ ನಂತರ ಶವಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮಕ್ಕಳ ಸಾವಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.

ಸಾವುಗಳು ಹೃದಯ ಕದಡುವಂತಿವೆ ಎಂದು ಅವರು ಹೇಳಿದ್ದಾರೆ. ಅಗಲಿದ ಆತ್ಮಕ್ಕಾಗಿ ಪ್ರಾರ್ಥಿಸಿದರು ಮತ್ತು ಗಾಯಾಳುಗಳನ್ನು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights