ಸದನದಲ್ಲಿ ರಮೇಶ್ ಸಿಡಿ ಕೇಸ್ ಸದ್ದು : ಸರ್ಕಾರದ ವಿರುದ್ಧ ಮುಗಿಬಿದ್ದ ಟಗರು!

ವಿಧಾನಸಭೆ ಕಲಾಪದಲ್ಲಿ ಸಾಹುಕಾರ ಸಿಡಿ ಸ್ಪೋಟಗೊಂಡಿದೆ. ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಮುಗಿಬಿದ್ದಿದ್ಧಾರೆ.

ಇಂದಿನ ಕಲಾಪದಲ್ಲಿ ಸಿಡಿ ವಿರುದ್ಧ ಗುಡುಗಿದೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಡಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

‘ಬಳಸಿಕೊಂಡಿದ್ದಾರೆ ಅಂತ ಹುಡುಗಿ ನೇರವಾಗಿ ಆರೋಪ ಮಾಡಿದ್ದಾಳೆ. ಹೀಗೆ ಹೇಳಿದ ಮೇಲೆ 376 ಅಡಿ ಕೇಸ್ ದಾಖಲಿಸಬೇಕಾಗಿದ್ದು ಪೊಲೀಸರ ಕರ್ತವ್ಯ. ಆದರೆ ಪೊಲೀಸರು ಅದನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಆ ಹುಡುಗಿಗೆ ನ್ಯಾಯ ಸಿಗಬೇಕಿದ್ದರೆ ಕೇಸ್ ರಿಜಿಸ್ಟರ್ ಆಗಬೇಕಿತ್ತು. ಆದರೆ ಪೊಲೀಸರು ಅದನ್ನ ಮಾಡಿಲ್ಲ. ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ. ಹುಡುಗಿಗೆ ಒಂದು ನ್ಯಾಯ ರಮೇಶ್ ಜಾರಕಿಹೊಳಿಗೆ ಒಂದು ನ್ಯಾಯಾನಾ?’ ಎಂದು ಟಗರು ಗುಮ್ಮಿದೆ.

ಹೀಗಾಗಿ ನಾನು ರಮೇಶ್ ಜಾರಕಿಹೊಳಿ ವಿರುದ್ಧ 376 ಕೇಸ್ ದಾಖಲಾಗಬೇಕು ಎಂದು ಒತ್ತಾಯಿಸಿದ್ದಾರೆ. ಆಕೆಗೆ ನ್ಯಾಯ ಕೊಡಬೇಕಾಗಿದೆ. ರಕ್ಷಣೆ ಕೊಡಬೇಕಾಗಿದೆ. ಇದರ ಬಗ್ಗೆ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಬೇಕಿದೆ. ಪೊಲೀಸರು ಸಿಡಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ದೂರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights