ಕೊರೊನಾ ತಡೆಗೆ ನೈಟ್ ಕರ್ಫ್ಯೂ : ನಾಳೆ ರಾತ್ರಿ 10 ಗಂಟೆ ಬಳಿಕ ಪಾರ್ಟಿ, ಮೋಜು ಮಸ್ತಿಗೆ ಬಂದ್!

ಕೊರೊನಾ ಬ್ರೇಕ್ ಹಾಕಲು ಸರ್ಕಾರ ಹೊಸ ಅಸ್ತ್ರ ಹೂಡಿದ್ದು, ನೈಟ್ ಕರ್ಫ್ಯೂ ಜಾರಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಪಾರ್ಟಿ, ಮೋಜು ಮಸ್ತಿಗೆ ಬ್ರೇಕ್ ಹಾಕಿದೆ.

ನಾಳೆಯಿಂದ ಟಫ್ ರೂಲ್ಸ್ ಜಾರಿಗೆ ಬರಲಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಕೊರೊನಾ ಅಧಿಕವಾಗಿರುವ ನಗರಗಳಲ್ಲಿ ನೈಟ ಕರ್ಫೂ ಜಾರಿಗೊಳಿಸಲಾಗುವುದು. ಬೆಳಂಗಳೂರು, ಮಂಗಳೂರು, ಮೈಸೂರು, ಉಡುಪಿ, ಕಲಬುರ್ಗಿ, ಬೀದರ್, ತುಮಕೂರು, ಪಣಿಪಾಲ್ 8 ನಗರಗಳಲ್ಲಿ ಏಪ್ರಿಲ್ 10ರಿಂದ ಏಪ್ರಿಲ್ 20ರವೆರೆಗೆ ನೈಟ್ ಕರ್ಫ್ಯೂ ಜಾರಿಯಿರಲಿದೆ.

ತುರ್ತು ಸೇವೆಗಳನ್ನು ಹೊರತುಪಡಿಸಿ ಸಿನಿಮಾ, ಮಾಲ್, ಸೂಪರ್ ಮಾರ್ಕೇಟ್ ಗಳು ಕ್ಲೋಸ್ ಮಾಡಲಾಗುತ್ತದೆ. ಜನ ಓಡಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ರಾತ್ರಿ 10 ಗಂಟೆ ಬಳಿಕ ಪಾರ್ಟಿ, ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಔಟಿಂಗ್ ಅಂತ ಬೇಕಾಬಿಟ್ಟಿ, ಅನಗತ್ಯವಾಗಿ ಮನೆಯಿಂದ ಹೊರಬಂದರೆ ಖಾಕಿ ಕ್ರಮ ಕೈಗೊಳ್ಳಲಿದೆ. ನಾಳೆಯಿಂದ ಟಫ್ ರೂಲ್ಸ್ ಜಾರಿಗೆ ಬರುತ್ತದೆ.

ನಾಳೆ ಶನಿವಾರದಿಂದ ಹಿಡಿದು ಇದು ಜಾರಿಯಲ್ಲಿರುತ್ತದೆ. ಒಂದು ವೇಳೆ ಕೊರೊನಾ ಹಿಡಿತಕ್ಕೆ ಬಾರದೇ ಹೋದರೆ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights