ಒಪ್ಪಂದದ ಮೂಲಕ ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆಯಾದ ದಿವ್ಯ ಸುರೇಶ್ -ನಿಧಿ ಸುಬ್ಬಯ್ಯ!

ಒಳ ಒಪ್ಪಂದದ ಮೂಲಕ ಕ್ಯಾಪ್ಟನ್ ಟಾಸ್ಕ್ ಗೆ ದಿವ್ಯ ಸುರೇಶ್ -ನಿಧಿ ಸುಬ್ಬಯ್ಯ ಆಯ್ಕೆಯಾಗಿದ್ದರೂ ಕ್ಯಾಪ್ಟನ್ ಆಗೋ ಅದೃಷ್ಟ ಖುಲಾಯಿಸಲೇ ಇಲ್ಲ.

ಹೌದು… ಕ್ಯಾಪ್ಟನ್ ಆಗೋ ಆಸೆಯಿಂದ ನಿಧಿ ಸುಬ್ಬಯ್ಯಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ದಿವ್ಯ ಸುರೇಶ್ ಕ್ಯಾಪ್ಟನ್ ಆಗಲೇ ಇಲ್ಲ. ಬಿಗ್ ಬಾಸ್ ನೀಡಿದ್ದ ಪ್ರೇಮ ಪತ್ರ ಬರೆಯುವ ಆಟದಲ್ಲಿ ಅತೀ ಹೆಚ್ಚು ಪತ್ರ ಬರೆದ ಅರವಿಂದ್, ಅತೀ ಹೆಚ್ಚು ಪತ್ರ ಸಂಗ್ರಹಿಸಿ ಈ ವಾರದ ಉತ್ತಮ ಆಟಗಾರಳಾಗಿ ವಾರ್ಡನ್ ನಿಧಿ ಹಾಗೂ ಪ್ರಶಾಂತ್ ರಿಂದ ಆಯ್ಕೆಯಾದ ದಿವ್ಯ ಸುರೇಶ್ ಮತ್ತು ಅತೀ ಹೆಚ್ಚು ಪತ್ರಗಳನ್ನು ವಶಕ್ಕೆ ಪಡೆದ ವಾರ್ಡನ್ ನಿಧಿ ಸುಬ್ಬಯ್ಯ ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆಯಾಗಿದ್ದರು.

ಒಪ್ಪಂದವೇನು?

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಹುಡುಗರು ಹಾಗೂ ಹುಡುಗಿಯರನ್ನು ಹಾಸ್ಟಲ್ ಮಾಡುವ ಮೂಲಕ ವರ್ಗಾಯಿಸಲಾಗಿದೆ. ಇದರಲ್ಲಿ ‘ಬಿಗ್ ಬಾಸ್ ಬಾಯ್ಸ್ ಹಾಸ್ಟಲ್’ ಹುಡುಗರು ಹಾಗೂ ‘ಬಿಗ್ ಬಾಸ್ ಗರ್ಲ್ಸ್ ಹಾಸ್ಟಲ್’ ಹುಡುಗಿಯರಿಗೆ ಬಿಗ್ ಬಾಸ್ ಆಟವೊಂದನ್ನ ನೀಡಿದ್ದರು. ಈ ಆಟದಲ್ಲಿ ಬಿಗ್ ಬಾಸ್ ಬಾಯ್ಸ್ ಹಾಸ್ಟಲ್ ನ ಹುಡುಗರು ಗರ್ಲ್ಸ್ ಹಾಸ್ಟಲ್ ಹುಡುಗಿಯರಿಗೆ ಪ್ರೇಮ ಪತ್ರಗಳನ್ನು ಬರೆಯಬೇಕು. ಯಾರು ಹೆಚ್ಚು ಪತ್ರಗಳನ್ನು ಅರ್ಥಪೂರ್ಣವಾಗಿ ಬರೆಯುತ್ತಾರೋ ಜೊತೆಗೆ ಯಾರು ಅತೀ ಹೆಚ್ಚು ಪತ್ರಗಳನ್ನು ಪಡೆದುಕೊಳ್ಳುತ್ತಾರೋ ಮತ್ತು ಯಾವ ವಾರ್ಡನ್ ಅತೀ ಹೆಚ್ಚು ಪತ್ರಗಳನ್ನು ಪತ್ತೆ ಹಚ್ಚಿ ಸಂಗ್ರಹಿಸುತ್ತಾರೋ ಅವರು ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆಯಾಗುತ್ತಾರೆ.

ವಾರ್ಡನ್ ಗಳಾದ ಪ್ರಶಾಂತ್ ಹಾಗೂ ನಿಧಿ ಹಾಸ್ಟಲ್ ಹುಡುಗಿಯರು ಮತ್ತು ಹುಡುಗರು ಬಚ್ಚಿಟ್ಟ ಪತ್ರಗಳನ್ನು ಹುಡುಕಿ ಸಂಗ್ರಹಿಸಬೇಕು. ಹೀಗಾಗಿ ವಾರ್ಡನ್ ಗಳಿಗೆ ಗೊತ್ತಿಲ್ಲದಂತೆ ಮನೆಯ ಸ್ಪರ್ಧಿಗಳು ಪತ್ರಗಳನ್ನು ಬಚ್ಚಿಡುತ್ತಿದ್ದರು.

ಈ ವೇಳೆ ವಾರ್ಡನ್ ನಿಧಿ ದಿವ್ಯಳೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಒಪ್ಪಂದದಂತೆ ಮನೆಯ ಸದಸ್ಯರು ಬಚ್ಚಿಟ್ಟ ಪ್ರೇಮ ಪತ್ರಗಳ ಬಗ್ಗೆ ನಿಧಿ ಸುಬ್ಬಯ್ಯ ಅವರಿಗೆ ಮಾಹಿತಿ ನೀಡಿದರೆ, ದಿವ್ಯ ಸುರೇಶ್ ಪತ್ರಗಳನ್ನು ವಾರ್ಡನ್ ನಿಧಿ ವಶಪಡಿಸಿಕೊಳ್ಳುವುದಿಲ್ಲ. ಒಪ್ಪಂದದಂತೆ ಆಟ ನಡೆದು ಕ್ಯಾಪ್ಟನ್ ಟಾಸ್ಕ್ ಗೆ ಅರವಿಂದ್, ನಿಧಿ ಹಾಗೂ ದಿವ್ಯ ಆಯ್ಕೆ ಆದರು.

ಆದರೆ ಕ್ಯಾಪ್ಟನ್ ಟಾಸ್ಕ್ ನಲ್ಲಿ ಒಪ್ಪಂದ ಮಾಡಿಕೊಮಡಿದ್ದ ನಿಧಿ ಆಗಲಿ ದಿವ್ಯ ಆಗಲಿ ವಿನ್ ಆಗಲಿಲ್ಲ. ಬದಲಿಗೆ ಅರವಿಂದ್ ಆಯ್ಕೆ ಆದರು.

ಒಟ್ಟಿನಲ್ಲಿ ಮತ್ತೊಬ್ಬರಿಗೆ ಮೋಸ ಮಾಡುವ ಮೂಲಕ ಆಟದಲ್ಲಿ ವಿನ್ ಆಗಬಹುದು ಅಂದುಕೊಂಡಿದ್ದರೆ ಅದು ಸುಳ್ಳು ಎನ್ನುವುದು ಈ ವಾರದಲ್ಲಿ ಗೊತ್ತಾಗಿದ್ದು ನಿಜ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.