ರಾಜ್ಯದಲ್ಲಿ ಕೊರೊನಾ ಅಬ್ಬರ : 39,047 ಹೊಸ ಕೇಸ್ – 229 ಬಲಿ, ಬೆಂಗಳೂರಲ್ಲಿ 137 ಸಾವು!

ರಾಜ್ಯದಲ್ಲಿ ಮಹಾಮಾರಿ ಕೊರೊನಾಗೆ ಬರೋಬ್ಬರಿ 229 ಜನ ಬಲಿಯಾಗಿದ್ದು, 39,047 ಜನರಿಗೆ ಸೋಂಕು ತಗುಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಹಿಂದೆಂದು ದಾಖಲಾಗದಷ್ಟು ಕೊರೊನಾ ಸೋಂಕು ಜನರಿಗೆ ತಗುಲಿದೆ. ಒಂದೇ ದಿನ 39,047 ಜನರಿಗೆ ಸೋಂಕು ತಗುಲಿದ್ದು 229 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ ಸಿಲಿಕಾನ್ ಸಿಟಿಯಲ್ಲಿ 22,596 ಕೇಸ್ ದಾಖಲಾಗಿದ್ದರೆ, 137 ಜನರು ರಾಜ್ಯ ರಾಜಧಾನಿಯಲ್ಲಿ ಸಾವನ್ನಪ್ಪಿದ್ದಾರೆ.

ಈ ವರೆಗೆ ರಾಜ್ಯದಲ್ಲಿ 14,39,822 ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು,ಈ ಪೈಕಿ 3,28,884 ಸಕ್ರಿಯ ಪ್ರಕರಣಗಳಿದ್ದು, 10,95,883 ಜನ ಗುಣಮುಖರಾಗಿದ್ದಾರೆ. 1,33,077 ಜನರಿಗೆ ಲಸಿಕೆ ನೀಡಲಾಗಿದೆ.

ಮಾತ್ರವಲ್ಲದೇ ಈವರೆಗೆ 15,036 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 2,192 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 17,226 ಆಂಟಿಜನ್ ಟೆಸ್ಟ್ 1,54,771 ಆರ್ ಟಿ ಪಿಸಿಆರ್ ಸೇರಿದಂತೆ 1,71,997 ಕೊರೊನಾ ಪರೀಕ್ಷೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights