Corona in Bang : ಸೋಂಕಿತರು 37, ಗುಣವಾದವರು 48, ಕಳೆದ 3 ದಿನದಲ್ಲಿ ಶೂನ್ಯ ಪ್ರಕರಣ….

ಕಳೆದ ಮೂರು ದಿನಗಳ ಅವಧಿಯಲ್ಲಿ ರಾಜಧಾನಿ ಬೆಂಗಳೂರಲ್ಲಿ ಹೊಸದಾಗಿ ಕೊರೋನಾ ಸೋಂಕಿನ ಒಂದೂ ಪ್ರಕರಣ ಪತ್ತೆಯಾಗಿಲ್ಲಾ.. ಇದು ಗಾರ್ಡನ್ ಸಿಟಿಯ ಜನರಿಗೆ ನೆಮ್ಮದಿಯ ವಿಚಾರವಾಗಿದೆ. ಕಳೆದ ಭಾನುವಾರದಿಂದೀಚೆಗೆ ಬೆಂಗಳೂರಲ್ಲಿ ಯಾರಿಗೂ ಹೊಸದಾಗಿ ಕೊರೋನ ಆಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಬಕೊರೋನಾ ವಿರುದ್ಧದ ಸಮರದಲ್ಲಿ ಬೆಂಗಳೂರು ಜಯ ಗಳಿಸಿರಬಹುದಾದ ಆಶಾಭಾವ ಮೂಡಿದೆ.

ಸೋಮವಾರ ಬೆಂಗಳೂರಲ್ಲಿ ಸೊಂಕಿತರ ಸಂಖ್ಯೆ 45 ಆಗಿದ್ದರೇ ಗುಣಮುಖರಾದವವರು 40 ಹಾಗೂ ಮೃತಪಟ್ಟವರ ಸಾಲಿನಲ್ಲಿ ನಾಲ್ವರಿದ್ದರು. ಈ ಕಳೆದ 24 ತಾಸಿನಲ್ಲಿ ಈ ಅಂಕಿ ಸಂಖ್ಯೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಈಗ ರಾಜಧಾನೀಲಿ ಸೋಂಕಿತರು 37 ಜನರಿದ್ದರೃಏ ಗುಣಮುಖರಾದವರು 48 ಜನ ಇದ್ದಾರೆ.

ಮಂಗಳವಾರ ಒಂದೇ ದಿನ ನಗರದ ಏಳು ಮಂದಿ ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುರಾಗಿದ್ದಾರೆ. ಅಲ್ಲದೇ ಯಾವುದೇ ಹೊಸ ಪ್ರಕರಣಗಳೂ ದಾಖಲಾಗಿಲ್ಲ. ಬೆಂಗಳೂರು ನಗರದಲ್ಲಿ 135 ಮಂದಿ ಇನ್ನೂ ಐಸೊಲೇಶನ್ನಿನಲ್ಲಿದ್ದು ಅವರ ವೈದ್ಯಕೀಯ ಪರೀಕ್ಷಾ ವರದಿಗಳು ದೃಢಪಡುವ ತನಕ ಬೆಂಗಳೂರು ಕೊರೋನಾ ವಿರುದ್ಧದ ಸಮರ ಗೆದ್ದಿದೆ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ.

ಕೆಳದ ಕೆಲವಾರು ದಿನಗಳಿಗೆ ಹೋಲಿಸಿದರೇ ಇದೇಮೊದಲ ಬಾರಿಗೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದ ತಿಳಿದುಬಂದಿದೆ.. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಸೋಮವಾರಕ್ಕೆ ಹೋಲಿಸಿದರೇ ಮಂಗಳವಾರದ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ.

ಸೋಮವಾರ ಸಂಜೆಯ ಹೊತ್ತಿಗೆ ರಾಜ್ಯದಲ್ಲಿ 280 ಸಕ್ರಿಯ ಸೋಂಕಿತರು ಇರುವುದಾಗಿ ವರದಿಯಾಗಿತ್ತು. ಕಳೆದ 24 ತಾಸಿನಲ್ಲಿ ಈ ಸಂಖ್ಯೆ 272ಕ್ಕೆ ಇಳಿದಿದೆ. ಇದೇ ವೇಳೆ ಕೊರೋನಾ ಮಾರಿಯಿಂದ ಮುಕ್ತಿ ಪಡೆದವರ ಸಂಖ್ಯೆ ಏರಿಕೆ ಕಂಡಿದೆ. ಮಂಗಳವಾರ ಒಂದೇ ದಿನ 17 ಮಂದಿ ಗುಣಮುಖರಾಗಿದ್ದು ಈ ಸಂಖ್ಯೆ 112ರಿಂದ 129ಕ್ಕೆ ಏರಿದೆ. ಮೃತರ ಸಂಖ್ಯೆ 17 ಎಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights