ತರಕಾರಿ ಮಳಿಗೆಯನ್ನು ಕಾಲಿನಿಂದ ಒದ್ದ ಪೊಲೀಸ್‌ ಅಧಿಕಾರಿ; ದರ್ಪ ಸಹಿಸಲಾಗದು ಎಂದು ಅಧಿಕಾರಿ ಅಮಾನತು!

ತರಕಾರಿ ಮಾರಾಟ ಮಳಿಗೆಯನ್ನು ಪೊಲೀಸ್ ಅಧಿಕಾರಿಯೊಬ್ಬ ಕಾಲಿನಿಂದ ಜಾಡಿಸಿ ಒದ್ದ ಘಟನೆ ಪಂಜಾಬಿನ ಫಗ್ವಾರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಫಗ್ವಾರ್ ಸ್ಟೇಷನ್ ಹೌಸ್ ಆಫೀಸರ್ ನವದೀಪ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.

ನವದೀಪ್ ಸಿಂಗ್ ಅವರು  ತರಕಾರಿ ಅಂಗಡಿಯನ್ನು ಕಾಲಿನಿಂದ ಜಾಡಿಸಿ ಒದ್ದು ದರ್ಪ ತೋರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೊಲೀಸ್‌ ಅಧಿಕಾರಿ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.

ಈ ಘಟನೆಯು ನಾಚಿಕೆಗೇಡು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಫಗ್ವಾರಾ ಎಸ್‌ ಎಚ್‌ ಒ ಅವರನ್ನು ಅಮಾನತು ಮಾಡಿದ್ದೇನೆ. ಅಂತಹ ಅಧಿಕಾರ ದುರುಪಯೋಗವನ್ನು ಸಹಿಸುವುದಿಲ್ಲ ಎಂದು ಪಂಜಾಬ್ ಪೊಲೀಸ್ ಡೈರೆಕ್ಟರ್ ಜನರಲ್ ದಿನಕರ್ ಗುಪ್ತ ಟ್ವೀಟ್‌ ಮಾಡಿದ್ದಾರೆ.

ಪಂಜಾಬ್ ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ಈ ವೇಳೆ ಗಸ್ತು ತಿರುಗುತ್ತಿದ್ದ ಅಧಿಕಾರಿ ನವದೀಪ್ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಅಂಗಡಿಯನ್ನು ಜಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸ್ ಅಧಿಕಾರಿಯ ಮೇಲೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಬಿಜೆಪಿಯ ನಿರೀಕ್ಷೆ ಈಡೇರದಿದ್ದರೂ.. ಯೋಜನೆ ಫಲಿಸುತ್ತಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights