ರಜೆ ಕೇಳಿದ್ದಕ್ಕೆ ದಲಿತ ಕುಟುಂಬದ ಮೇಲೆ ಹಲ್ಲೆ; ಮಕ್ಕಳ ಎದುರೇ ಗರ್ಭಿಣಿ ಮೇಲೆ ಅತ್ಯಾಚಾರ

ಕ್ಷುಲ್ಲಕ ಕಾರಣಕ್ಕೆ ದಲಿತ ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಲಾಗಿದ್ದು, ಗರ್ಭಿಣಿ ಮಹಿಳೆಯ ಮೇಲೆ ಆಕೆಯ ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಚತ್ತರ್‌ಪುರ್‌ ಜಿಲ್ಲೆಯ ಬಂಧರ್‌ಗಢದಲ್ಲಿ ನಡೆದಿದೆ.

ಮೇಲ್ಜಾತಿಗೆ ಸೇರಿದ ದಬಾಂಗ್ ಪಟೇಲ್ ಎಂಬಾತನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬೈಜ್ನಾಥ್ ಅಹಿರ್ವಾರ್ ಅವರು ಅನಾರೋಗ್ಯ ಕಾರಣದಿಂದಾಗಿ ರಜೆ ಕೇಳಿದ್ದಾರೆ. ರಜೆ ನೀಡಲು ನಿರಾಕರಿಸಿದ ಪಟೇಲ್, ಬೈಜ್ನಾಥ್ ಮತ್ತು ಆತನ ಸಹೋದರ ಲಖನ್ ಅಹಿರ್ವಾರ್ ಅವರನ್ನು ಥಳಿಸಿದ್ದಾರೆ. ತಮ್ಮ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಇಬ್ಬರೂ ಸೋದರರು ಹಳ್ಳಿ ಬಿಟ್ಟು ಓಡಿ ಹೋಗಿದ್ದಾರೆ.

ಈ ವೇಳೆ ಬೈಜ್ನಾಥ್ ಅವರ ತಾಯಿ, ಪತ್ನಿ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದರು. ಅವರ ಮನೆಗೆ ನುಗ್ಗಿದ ಪಟೇಲ್‌ ಜೊತೆಗಿದ್ದ ದುಷ್ಕರ್ಮಿಗಳು ಐದು ತಿಂಗಳ ಗರ್ಭಿಣಿಯಾಗಿದ್ದ ಬೈಜ್ನಾಥ್ ಅವರ ಪತ್ನಿಯ ಮೇಲೆ ಆಕೆಯ ಅತ್ತೆ ಮತ್ತು ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿದ್ದಾರೆ.

ಅಲ್ಲದೆ, ಪಟೇಲ್‌ ಮಹಿಳೆಯರು ಮತ್ತು ಮಕ್ಕಳನ್ನು ಬಲವಂತವಾಗಿ ಎಳೆದೊಯ್ದು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾನೆ.  ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಮಹಿಳೆಯರು ನಾಲ್ಕು ದಿನಗಳವರೆಗೆ ಆಹಾರ ಮತ್ತು ನೀರಿಲ್ಲದೆ ಬದುಕಿದ್ದಾರೆ.

ಪಟೇಲ್‌ನ ಜಾಗದಿಂದ ತಪ್ಪಿಸಿಕೊಂಡ ಸಂತ್ರಸ್ತ ಗರ್ಭಿಣಿ ಪೊಲೀಸ್‌ ಠಾಣೆಗೆ ತಲುಪಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತೂತುಕುಡಿ ಸ್ಟೈರ್ಲೈಟ್‌ ವಿರೋಧಿ ಪ್ರತಿಭಟನೆ; ರಾಜಕಾರಣಿಗಳ ವಿರುದ್ದದ 38 ಪ್ರಕರಣಗಳು ವಾಪಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights