ಮಹಿಳಾ ಇನ್ಸ್‌ಪೆಕ್ಟರ್‌ಗೆ ಲೈಂಗಿಕ ಕಿರುಕುಳ; ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಹುದ್ದೆಯಿಂದ ವಜಾ!

ಮಧ್ಯಪ್ರದೇಶದ ದೇವಾಸ್‌ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಫುಡ್ ಇನ್ಸ್‌ಪೆಕ್ಟರ್ ಆರೋಪಿಸಿದ್ದಾರೆ. ಅವರ ಆರೋಪದ ಮೇಲೆ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂದು ವರದಿ ಯಾಗಿದೆ.

ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ, ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ. ತನ್ನನ್ನು ತನ್ನ ಕ್ಯಾಬಿನ್‌ನೊಳಗೆ ಕರೆದು ಅನುಚಿತವಾಗಿ ಮಾತನಾಡಿದ್ದಾರೆ ಎಂದು ಮಹಿಳಾ ಅಧಿಕಾರಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

“ನಾನು ಅವರ ಕ್ಯಾಬಿನ್‌ನಿಂದ ಓಡಿಹೋದೆ. ನಂತರ, ಅವರು ನನ್ನನ್ನು ಕರೆದು ಕೇವಲ ಟ್ರೈಲರ್ ಎಂದು ಹೇಳಿದರು. ನಾನು ಆಕ್ಷೇಪಿಸಿದ್ದೇನೆ. ಆದರೆ ಅತ ತನ್ನ ವರ್ತನೆಯನ್ನು ನಿಲ್ಲಿಸಲಿಲ್ಲ” ಎಂದು ಇನ್ಸ್‌ಪೆಕ್ಟರ್ ಹೇಳಿದರು.

“ನಾನು ನನ್ನ ಗಂಡನನ್ನು ಕರೆಸಿದೆ. ನಾವಿಬ್ಬರೂ ಅವರೊಂದಿಗೆ ಮಾತನಾಡಿದೆವು. ಆದರೆ ಅವರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರು. ನಂತರ, ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಮತ್ತು ಪಠ್ಯ ಸಂದೇಶಗಳನ್ನು ಹೊಂದಿರುವ ಎಲ್ಲಾ ಪುರಾವೆಗಳೊಂದಿಗೆ ನಾನು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ” ಎಂದು ಇನ್ಸ್‌ಪೆಕ್ಟರ್‌ ತಿಳಿಸಿದ್ದಾರೆ.

ಅವರ ದೂರಿನ ಆಧಾರದ ಮೇಲೆ ಪೊಲೀಸರು ಕೂಡ ದೂರು ದಾಖಲಿಸಿದ್ದಾರೆ.

ಜಿಲ್ಲಾಧಿಕಾರಿ ಚದ್ರಮೌಳಿ ಶುಕ್ಲಾ ಅವರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅನ್ನು ಹುದ್ದೆಯಿಂದ ತೆಗೆದುಹಾಕಿದ್ದು, ಜಿಲ್ಲಾ ಕೇಂದ್ರ ಕಚೇರಿಗೆ ಲಗತ್ತಿಸಿದ್ದಾರೆ. ಅಲ್ಲದೆ, ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸೂರ್ಯಕಾಂತ್ ಶರ್ಮಾ ಅವರು ಈ ಬಗ್ಗೆ ತನಿಖೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಮಹಿಳಾ ಪೇದೆ ಮೇಲೆ ಅತ್ಯಾಚಾರ; ಪೊಲೀಸ್‌ ಅಧಿಕಾರಿ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights