ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪದಚ್ಯುತಿ; ನೂತನ ಪ್ರಧಾನಿಯಾಗಿ ನಫ್ಟಾಲಿ ಬೆನೆಟ್ ಅಧಿಕಾರ ಸ್ವೀಕಾರ!

ಇಸ್ರೇಲ್‌ನ ನೂತನ ಪ್ರಧಾನಿಯಾಗಿ ನಫ್ಟಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಕಳೆದ 12 ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪದಚ್ಯುತಗೊಳಿಸಲಾಗಿದೆ. ನೆತನ್ಯಾಹು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ, ಇಸ್ರೇಲ್‌ನ ನೂತನ ಪ್ರಧಾನಮಂತ್ರಿಯಾಗಿ ಬೆನೆಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಸ್ರೇಲ್ ರಾಜಕೀಯ ಪಕ್ಷಗಳ ಮೈತ್ರಿಕೂಟ ನಿನ್ನೆ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿವೆ. 120 ಸದಸ್ಯ ಬಲವಿರುವ ಇಸ್ರೇಲ್ ಸಂಸತ್‌ನಲ್ಲಿ ನಿನ್ನೆ ವಿಪಕ್ಷಗಳು ಬೆಂಜಮಿನ್ ನೆತನ್ಯಾಹು ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ವೇಳೆ ನೆತನ್ಯಾಹು ಪರವಾಗಿ ಕೇವಲ 59 ಮತಗಳು ಚಲಾವಣೆಯಾಗಿದ್ದರಿಂದಾಗಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ನೆತನ್ಯಾಹು ಅವರು ಇಸ್ರೇಲ್‌ನಲ್ಲಿ ಅತಿ ಹೆಚ್ಚು ಸುಧೀರ್ಘ ಕಾಲ ಆಡಳಿತ ನಡೆಸಿದ ಮೊದಲ ಪ್ರಧಾನಿಯಾಗಿದ್ದಾರೆ. ಅವರ ಪದಚ್ಯುತಿಯ ನಂತರ, ಸೋಮವಾರ ಬಲ ಪಂಥೀಯ ಜೆವಿಷ್ ನ್ಯಾಷನಲಿಸ್ಟ್​ ಮುಖಂಡರಾಗಿರುವ ನಫ್ಟಾಲಿ ಬೆನೆಟ್ ಇಸ್ರೇಲ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಸುಸ್ಥಿರ ಅಭಿವೃದ್ದಿ ಪಟ್ಟಿಯಲ್ಲಿ ಭಾರತಕ್ಕೆ ಭಾರೀ ಕುಸಿತ; ನೇಪಾಳ, ಶ್ರೀಲಂಕಕ್ಕಿಂತ ಹಿಂದೆ ಸರಿದ ಭಾರತ!

ಈ ಹಿಂದೆ ಇಸ್ರೇಲ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ನಫ್ಟಾಲಿ ಬೆನೆಟ್ ಬಲಪಂಥೀಯ ಪಕ್ಷವಾದ ಯಾಮಿನಾ ಪಕ್ಷದ ಮುಖಂಡರಾಗಿದ್ದಾರೆ. 8 ವಿಭಿನ್ನ ಸಿದ್ಧಾಂತಗಳಿರುವ ಪಕ್ಷಗಳ ಬೆಂಬಲದೊಂದಿಗೆ ಬೆನೆಟ್ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದಾರೆ. ಒಪ್ಪಂದದ ಪ್ರಕಾರ ಇನ್ನು 2 ವರ್ಷ ನಫ್ಟಾಲಿ ಬೆನೆಟ್ ಇಸ್ರೇಲ್​ನ ಪ್ರಧಾನಿಯಾಗಿರಲಿದ್ದಾರೆ. ಬಳಿಕ ಯೆಶ್ ಅತಿಡ್ ಪಕ್ಷಯ ಯೇರ್ ಲ್ಯಾಪಿಡ್ ಇಸ್ರೇಲ್​ನ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ. ಮೈತ್ರಿಕೂಟ ಒಪ್ಪಂದದ ಪ್ರಕಾರ ಬೆನೆಟ್ ಅವರ ಅಧಿಕಾರವು 2023ಕ್ಕೆ ಕೊನೆಯಾಗಲಿದೆ.

ನೆತನ್ಯಾಹು ಸರ್ಕಾರದಲ್ಲಿ 2006ರಿಂದ 2008ರ ಅವಧಿಯಲ್ಲಿ ಹಿರಿಯ ಸಲಹೆಗಾರನಾಗಿದ್ದ ಬೆನೆಟ್ ಬಳಿಕ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದಿಂದ ಹೊರಬಂದಿದ್ದರು. ಆಗ ಬೆನೆಟ್ ಇಸ್ರೇಲ್​ನ ಬಿಲಿಯನೇರ್​ ಆಗಿದ್ದರು.

ನಂತರ ನಫ್ಟಾಲಿ ಬೆನೆಟ್ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡು ಬಲಪಂಥೀಯ ರಾಜಕೀಯ ನಾಯಕನಾಗಿ ಗುರುತಿಸಿಕೊಂಡರು. 2013ರಲ್ಲಿ ಸಂಸತ್ ಅನ್ನು ಕೂಡ ಪ್ರವೇಶಿಸಿದರು. ಇದೀಗ ಇಸ್ರೇಲ್​ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಸರ್ಕಾರದ ಕೆಲವು ಕ್ರಮಗಳು ಅದರ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಆತಂಕಗಳನ್ನು ಹುಟ್ಟು ಹಾಕಿದೆ: ಅಮೆರಿಕದ ಉನ್ನತ ಅಧಿಕಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights