ಎರಡು ಡೋಸ್ ವ್ಯಾಕ್ಸಿನ್ ಪಡೆದ ಬಳಿಕವೂ ಮಹಿಳೆಯಲ್ಲಿ ಕಾಣಿಸಿಕೊಂಡ ಡೆಲ್ಟಾ ಪ್ಲಸ್ ಸೋಂಕು..!

ದೇಶದಲ್ಲಿ ಕೊರೊನಾ 2ನೇ ಅಲೆ ತಗ್ಗುತ್ತಿದೆ. ಅದರೆ, ಇದೇ ಸಮಯದಲ್ಲಿ ಡೆಲ್ಟಾ ಪಸ್ಲ್‌ ರೂಪಾಂತರಿ ವೈರಸ್‌ ಜನರನ್ನು ಆತಂಕಕ್ಕೆ ಸಿಲುಕಿಸಿದೆ. ಈ ಮಧ್ಯೆ ಕೊರೊನಾ ವಿರುದ್ದ ನೀಡಲಾಗುತ್ತಿರುವ ಲಸಿಕೆಯ 2 ಡೋಸ್‌ಗಳನ್ನು ಪಡೆದ ನಂತರವೂ ರಾಜಸ್ಥಾನದ ಮಹಿಳೆಯೊಬ್ಬರಿಗೆ ಡೆಲ್ಟಾ ಪ್ಲಸ್‌ ಕಾಣಿಸಿಕೊಂಡಿದೆ. ಆದರೆ, ಅದರಿಂದ ಯಾವುದೇ ರೀತಿಯ ಅಪಾಯವಾಗಿಲ್ಲ ಎಂಬುದು ನಿರಾಳ ತರಿಸಿದೆ.

ರಾಜಸ್ಥಾನದ ಬಿಕನೇರ್​ ಪ್ರದೇಶದ ನಿವಾಸಿ 65 ವ‍ರ್ಷದ ಮಹಿಳೆ ಕೊರೊನಾ ವಿರುದ್ಧ 2 ಡೋಸ್‌ ಲಸಿಕೆಯನ್ನು ಪಡೆದಿದ್ದರು. ಆ ಬಳಿಕವೂ ಅವರು ಡೆಲ್ಟಾ ಪ್ಲಸ್‌ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಮನೆಯಲ್ಲಿಯೇ ಐಸೋಲೇಷನ್​ಗೆ ಒಳಗಾಗಿದ್ದರು. ಸದ್ಯ ಅವರು ಗುಣಮುಖರಾಗಿದ್ದಾರೆ.

ಸೋಂಕಿತೆಯ ಸ್ಯಾಂಪಲ್​​ಗಳನ್ನು ರಾಷ್ಟ್ರೀಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಹಿಳೆ ಸ್ಯಾಂಪಲ್​ನಲ್ಲಿ ಡೆಲ್ಟಾ ಪ್ಲಸ್​ ಪತ್ತೆಯಾಗಿದ್ದು, ರಾಜಸ್ಥಾನದಲ್ಲಿ ಮೊದಲ ಡೆಲ್ಟಾ ಪ್ಲಸ್​ ಪ್ರಕರಣ ಇದಾಗಿದೆ.

ಇದನ್ನೂ ಓದಿ: ರಾಜ್ಯಕ್ಕೂ ಬಂತು ಡೆಲ್ಟಾ ಪ್ಲಸ್‌; ಮೈಸೂರಿನ ರೋಗಿಯಲ್ಲಿ ರೂಪಾಂತರಿ ವೈರಸ್‌ ಪತ್ತೆ!

ವ್ಯಾಕ್ಸಿನೇಷನ್​ ಬಳಿಕವೂ ರೂಪಾಂತರಿ ಸೋಂಕು ಕಾಣಿಸಿಕೊಂಡಿದ್ದರು, ಹೆಚ್ಚಿನ ರೋಗ ಲಕ್ಷಣಗಳು ಇರಲಿಲ್ಲ. ಹೀಗಾಗಿ ಮಹಿಳೆ ಹೋಂ ಐಸೋಲೇಷನ್​ಗೆ ಒಳಗಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯಾಧಿಕಾರಿ ಚಹಾರ್​ ತಿಳಿಸಿದ್ದಾರೆ. ಲಸಿಕೆ ಪಡೆದ ಬಳಿಕವೂ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಭಾವಿಸಿದ್ದ ಮಹಿಳೆಯ ಕುಟುಂಬ ಮನೆಯಲ್ಲಿಯೇ ವೈದ್ಯರ ನೆರವಿನಲ್ಲಿ ಚಿಕಿತ್ಸೆ ಪಡೆದಿದ್ದರು. ಇವರ ಸ್ಯಾಂಪಲನ್ನು ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆ ರೂಪಾಂತರಿ ಸೋಂಕಿಗೆ ಒಳಗಾಗಿದ್ದು ಪತ್ತೆಯಾಗಿದೆ.

ಮಹಿಳೆಯ ಕುಟುಂಬದ ಮೂವರಿಗೂ ಸೋಂಕು ತಗುಲಿತ್ತಾದರೂ ರೂಪಾಂತರಿ ವೈರಸ್​​​ ಕಾಣಿಸಿಕೊಂಡಿಲ್ಲ. ಕುಟುಂಬದ ಎಲ್ಲರೂ ಹೋಂ ಐಸೋಲೇಷನ್​ನಿಂದಲೇ ಗುಣಮುಖರಾಗಿದ್ದಾರೆ. ಲಸಿಕೆ ಪಡೆದಿದ್ದರಿಂದಲೇ ರೂಪಾಂತರಿ ಸೋಂಕಿಗೆ ತುತ್ತಾದರೂ 65 ವರ್ಷ ಮಹಿಳೆ ಅಪಾಯವಿಲ್ಲದೆ ಗುಣಮುಖರಾಗಿದ್ದಾರೆ ಎಂದು ಆರೋಗ್ಯಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಸಿಕೆ ಬಳಿಕವೂ ಸೋಂಕು ಕಾಣಿಕೊಳ್ಳಬಹುದು ಆದರೆ ಲಸಿಕೆ ಪಡೆದಿರುವುದರಿಂದ ಹೆಚ್ಚಿನ ಹಾನಿ ಆಗುವುದಿಲ್ಲ ಎಂದು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಇನ್ನು ಕೊರೊನಾ ಲಸಿಕೆಗಳು ರೂಪಾಂತರಿ ಸೋಂಕಿನ ವಿರುದ್ಧವೂ ಪರಿಣಾಮಕಾರಿಯಾಗಿವೆ. ಹೀಗಾಗಿ ತಡ ಮಾಡದೆ 2 ಡೋಸ್​ ಲಸಿಕೆ ಪಡೆಯುವುದು ಉತ್ತಮ ಎನ್ನುತ್ತಿದ್ದಾರೆ. ಈ ಪ್ರಕರಣದಲ್ಲಿ ಅದು ಸಾಬೀತಾಗಿದೆ ಕೂಡ.

ಇದನ್ನೂ ಓದಿ: ಯೋಗ ದಿನ 88 ಲಕ್ಷ ಡೋಸ್‌, ಮಂಗಳವಾರ 54 ಲಕ್ಷ -ಭಾನುವಾರ 69 ಸಾವಿರ; ಇದು ಮೋದಿ ಸರ್ಕಾರ ಬೂಟಾಟಿಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights