ಸೋಮವಾರದಿಂದ ಬೆಂಗಳೂರು ಕಂಪ್ಲೀಟ್ ಅನ್ ಲಾಕ್ ಬಹುತೇಕ ಖಚಿತ!

ಕೊರೊನಾ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಬೆಂಗಳೂರಿನಲ್ಲಿ ಸೋಮವಾರದಿಂದ ಕಂಪ್ಲೀಟ್ ಅನ್ ಲಾಕ್ ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ , ” ಎಲ್ಲರೂ ಜಾಗರೂಕತೆಯಿಂದ ಇರಬೇಕು. ಮಾಸ್ಕ್ ಧರಿಸಬೇಕು. ಬಹಳಷ್ಟು ದಿನ ಇಲ್ಲಾ ವ್ಯಾಪಾರಗಳನ್ನು ನಾವು ಸ್ತಬ್ಧ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿರುವುದರಿಂದ ಸಡಿಲಗೊಳಿಸುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

ಜೊತೆಗೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಡಿಲಿಕೆಯಾಗುವ ಸಾಧ್ಯತೆ ಇದೆ. ಇವತ್ತು ನಡೆಯುವ ಮಹತ್ವದ ಸಭೆಯಿಂದ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಾಲ್ ಗಳು ತೆಗೆಯುವ ಸಾಧ್ಯತೆ ಇದೆ. ಆದರೆ ಸಿನಿಮಾ ಥಿಯೇಟರ್ ಗಳು ತೆಗೆಯುವ ಸಾಧ್ಯತೆ ಕಡಿಮೆ ಇದೆ. ಮುಂದಿನ ದಿನಮಾನಗಳಲ್ಲಿ ಈ ಬಗ್ಗೆ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಗೌರವ್ ಗುಪ್ತ ಹೇಳಿದ್ದಾರೆ.

“ಅಧಿಕ ಸಂಖ್ಯೆಯಲ್ಲಿ ಜನ ಒಂದೆಡೆ ಕುಳಿತು ಸಿನಿಮಾ ನೋಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸಿನಿಮಾ ಮಂದಿರ ಓಪನ್ ವ ಬಗ್ಗೆ ಮುಂದಿನ ಹಂತದಲ್ಲಿ ಪರಿಗಣಿಸುವ ಸಾಧ್ಯತೆ ಇದೆ” ಎಂದರು.

ಸಿಎಂ ಜೊತೆ ಬಿಬಿಎಂಪಿ ಅಧಿಕಾರಿಗಳು, ಸಚಿವರು ಸಿಎಂ ನಿವಾಸ ಕಾವೇರಿ ಭವನದಲ್ಲಿ ಇಂದು ಸಂಜೆ 5.30ಕ್ಕೆ ಚರ್ಚೆ ನಡೆಸಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights