ಕೋಲಾರ ಪವರ್ ಸ್ಟೇಷನ್ನಲ್ಲಿ ಟ್ರಾನ್ಸ್ ಫಾರ್ಮರ್ ಸ್ಟೋಟ : ನಗರದಾದ್ಯಂತ ವಿದ್ಯುತ್ ಕಡಿತ!
ಬೆಸ್ಕಾಂ ಇಲಾಖೆಗೆ ಸೇರಿದ ಪವರ್ ಸ್ಟೇಷನ್ನಲ್ಲಿ ಟ್ರಾನ್ಸ್ ಫಾರ್ಮರ್ ಸ್ಟೋಟಗೊಂಡು ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ನಗರದ ಎಂಬಿ ರಸ್ತೆ ಪಕ್ಕದಲ್ಲಿ ಮದ್ಯಾಹ್ನ 2,15 ಕ್ಕೆ ಟ್ರಾನ್ಸ್ ಪಾರ್ಮ್ನಲ್ಲಿನ ಬುಷಿಂಗ್ ಮಷಿನ್ ನಲ್ಲಿ ಬಾರೀ ಸ್ಪೋಟ ಗೊಂಡು ಇದರ ಪರಿಣಾಮ ಆಯಿಲ್ ಸೋರಿಕೆಯಾಗಿದೆ. ಅಪಾರ ಪ್ರಮಾಣದಲ್ಲಿ ಆಯಿಲ್ ಸೋರಿಕೆಯಾಗಿರುವುದರಿಂದ ಬೆಂಕಿಯ ಪ್ರಮಾಣ ಹೆಚ್ಚಾಗಿ ಸುತ್ತಲು ವಾಸಿಸುವ ಜನರಲ್ಲಿ ಆತಂಕವನ್ನು ಹೆಚ್ಚಿಸಿತ್ತು. ಬೆಂಕಿಯ ಕೆನ್ನಾಲಿಗೆ ಕಂಡು ಕೆಲವರು ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳನ್ನ ಬೇರೆಡೆಗೆ ಸ್ತಳಾಂತರ ಮಾಡಿದ್ದು ಕಂಡುಬಂತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಘಟನೆಯಲ್ಲಿ ಬೃಹತ್ ಟ್ರಾನ್ಸ್ ಪಾರ್ಮರ್ ಸುಟ್ಟು ಹೊಗಿದ್ದು, 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಟ್ರಾನ್ಸ್ ಪಾರ್ಮರ್ ಸ್ಪೋಟಗೊಂಡಿದ್ದರಿಂದ ಕೋಲಾರ ನಗರದಾದ್ಯಂತ ವಿದ್ಯುತ್ ಕಡಿತವಾಗಿದೆ.
“ಕೊರೊನಾ ಲಾಕ್ಡೌನ್ನಿಂದಾಗಿ ಟ್ರಾನ್ಸ್ ಪಾರ್ಮರ್ ನಿರ್ವಹಣೆ ಸಾಧ್ಯವಾಗಿಲ್ಲ. ಆದಷ್ಟು ಬೇಗ ವಿದ್ಯುತ್ ಸಂಪರ್ಕ ನೀಡಲು ಪ್ರಯತ್ನ ಮಾಡುವುದಾಗಿ ತಿಳಿಸಿದ್ದು, ತಾಂತ್ರಿಕ ತಂಡ ಭೇಟಿ ನೀಡಿದ ನಂತರ ನಷ್ಟದ ಅಂದಾಜು ತಿಳಿಸುವುದು” ಎಂದು ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀನಾಥ್ ತಿಳಿಸಿದ್ದಾರೆ.