ಬರ್ತ್ ಡೇ ಪಾರ್ಟಿ ಬಲೂನ್ ತಂದ ಸಾವು : ಗ್ಯಾಸ್ ಫಿಲ್ ವೇಳೆ ಸ್ಪೋಟ – ಛಿದ್ರಗೊಂಡ ಯುವಕನ ದೇಹ!

ಹುಟ್ಟುಹಬ್ಬದ ಆಚರಣೆಗೆಂದು ಬಲೂನ್ ನಲ್ಲಿ ಗ್ಯಾಸ್ ಫಿಲ್ ವೇಳೆ ಸ್ಟೋಟ ಸಂಭವಿಸಿ ಯುವಕನ ದೇಹ ಛಿದ್ರವಾದ ಕರುಣಾಜನಕ ಘಟನೆ ನಗರದ ಅಶೋಕನಗರದ ಅಪಾರ್ಟ್​​ಮೆಂಟ್​​ ಆವರಣದಲ್ಲಿ ನಡೆದಿದೆ.

ದಿನೇಶ್ (19) ಸ್ಫೋಟದಲ್ಲಿ ಮೃತಪಟ್ಟ ದುರ್ದೈವಿ. ಬರ್ತ್​​​​ಗೆ ಪಾರ್ಟಿಗಳಿಗೆ ಬಲೂನ್​​​​ ಒದಗಿಸುತ್ತಿದ್ದ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ ಬರ್ತ್​ ಡೇ ಕಾರ್ಯಕ್ರಮವೊಂದರಲ್ಲಿ ಬಲೂನ್​ ಡಿಸೈನ್​ ಒಪ್ಪಿಕೊಂಡಿದ್ದರು. ಇದರಿಂದ ಬಲೂನ್ ಗ್ಯಾಸ್ ಸಹಿತ ಬೈಕ್ ನಲ್ಲಿ ಸಹಾಯಕ ಮಾಹದೇಶ್ ಜೊತೆಗೆ ಅಶೋಕನಗರದ ಅಪಾರ್ಟ್​ಮೆಂಟ್​ಗೆ ಆಗಮಿಸಿದ್ದರು.

ಈ ವೇಳೆ ಮಾಹದೇಶ್ ನೀರು ತರಲು ಅಪಾರ್ಟ್‌ಮೆಂಟ್ ಒಳಗೆ ಹೋದಾಗ ದಿನೇಶ್​ ಒಬ್ಬರೇ ಬಲೂನ್ ಫಿಲ್ ಮಾಡುತ್ತಿದ್ದರು. ಈ ಸಮಯದಲ್ಲಿ ಗ್ಯಾಸ್ ಸ್ಪೋಟ ಸಂಭವಿಸಿ ದಿನೇಶ್ ಕೈ-ಕಾಲು, ದೇಹ ಛಿದ್ರವಾಗಿದೆ. ಸ್ಪೋಟದ ತೀವ್ರತೆಗೆ ದಿನೇಶ್ ದೇಹ 10 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಹೊಡೆದು ಕೆಳಗೆ ಬಿದ್ದಿದೆ. ದೇಹ ಇಬ್ಬಾಗವಾಗಿ ದಿನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆನ್ ಲೈನ್ ಮುಖಾಂತರ ದಿನೇಶ್ ಗೆ ಬರ್ತ್ ಡೇ ಡೆಕೊರೇಶನ್ಗೆ ಆರ್ಡರ್ ಮಾಡಲಾಗಿತ್ತು. ಅಲಂಕಾರಕ್ಕೆ ದಿನೇಶ್ ಗೆ 200 ಬಲೂನ್ ಆರ್ಡರ್ ಮಾಡಲಾಗಿತ್ತು. ಕೃತಕ ರಾಸಾಯನಿಕಗಳನ್ನು ಬಳಸಿ ಸಿಲಿಂಡರ್ ತಯಾರಿಸಿ ಅದರ ಮೂಲಕ ಬಲೂನ್ ಫಿಲ್ಲಿಂಗ್ ಮಾಡುತಿದ್ದನು ದಿನೇಶ್. ಈ ವೇಳೆ ಘಟನೆ ನಡೆದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights