ದೇವರಿದ್ದಾನೆ – ಮುಂದಿನ ಬಾರಿ ರಥಯಾತ್ರೆಗೆ ಅನುಮತಿಸುತ್ತಾನೆ ಎಂದು ನಂಬೋಣ: ಸುಪ್ರೀಂ ಕೋರ್ಟ್‌

ಇದೇ ತಿಂಗಳು (ಜುಲೈ) 12 ರಂದು ಪುರು ಜಗನ್ನಾಥ ರಥಯಾತ್ರೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ರಥಯಾತ್ರೆಯನ್ನು ಒಡಿಶಾ ಸರ್ಕಾರ ಜಗನ್ನಾಥ ದೇವಸ್ಥಾನಕ್ಕೆ ಸೀಮಿತಗೊಳಿಸಿದೆ. ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿರುವ ಸುಪ್ರೀಂ ಕೋರ್ಟ್‌, ದೇವರಿದ್ದಾನೆ, ಮುಂದಿನ ವರ್ಷ ಎಲ್ಲೆಡೆ ರಥಯಾತ್ರೆ ನಡೆಸಲು ಅನುಮತಿಸುತ್ತಾನೆ ಎಂದು ಹೇಳಿದೆ.

ಒಡಿಶಾ ಸರ್ಕಾರದ ನಿರ್ಧಾರದ ವಿರುದ್ದ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ರಥರಾತ್ರೆಯನ್ನು ರಾಜ್ಯದ ಕೇಂದ್ರಾಪುರ, ಬಾರಘ್‌ ಹಾಗೂ ಪುರಿಗಳಲ್ಲಿ ನಡೆಸಬೇಕು ಎಂದು ಅರ್ಜಿದಾರರು ವಾದಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ರಥಯಾತ್ರೆಯನ್ನು ಪುರಿ ಜಗನ್ನಾಥ ದೇವಸ್ಥಾನಕ್ಕೆ ಸೀಮಿತಗೊಳಿಸುವ ಒಡಿಶಾ ಸರ್ಕಾರದ ಆದೇಶಕ್ಕೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮಂಗಳವಾರ ಹೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ಒಡಿಶಾದಲ್ಲಿ ಮತ್ತು ದೇಶಾದ್ಯಂತದ ಕೋವಿಡ್ ಪರಿಸ್ಥಿತಿ ಇದೆ. ಈ ವೇಳೆ, ಒಡಿಶಾ ಸರ್ಕಾರದ ನಿರ್ಧಾರವು ಸೂಕ್ತವಾಗಿದೆ ಎಂದು ಹೇಳಿದ್ದು, ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.

“ಮುಂದಿನ ಬಾರಿ ದೇವರು ರಥಯಾತ್ರೆಗೆ ಅವಕಾಶ ನೀಡುತ್ತಾನೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೆಳಿದ್ದಾರೆ.

“ನಾನು ಸಹ ಪ್ರತಿ ವರ್ಷ ಪುರಿಗೆ ಹೋಗುತ್ತೇನೆ… ಆದರೆ ಕಳೆದ ಒಂದೂವರೆ ವರ್ಷಗಳಿಂದ ಹೋಗಿಲ್ಲ. ನಾನು ಮನೆಯಲ್ಲಿ ಪೂಜೆ ಮಾಡುತ್ತೇನೆ… ದೇವರಿಗೆ ಪ್ರರ್ಥನೆಯನ್ನು ಮನೆಯಲ್ಲಿಯೇ ಮಾಡಬಹುದು. ಒಡಿಶಾ ರಾಜ್ಯ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನಾ ಮರು ಮೈತ್ರಿ; ಠಾಕ್ರೆ-ಫಡ್ನವೀಸ್‌ ಜೊತೆಗೂಡುವ ಸಾಧ್ಯತೆ!

ಸಾರ್ವಜನಿಕರು ಒಡಿಶಾ ಸರ್ಕಾರದ ನಿರ್ಧಾರದ ವಿರುದ್ದ ಅಸಮಾಧಾನಗೊಂಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರವು ಒಡಿಶಾ  ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆರೋಗ್ಯ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ರಥಯಾತ್ರೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಸೀಮಿತಗೊಳಿಸುವ ಮೂಲಕ ಉತ್ಸವಗಳನ್ನು ನಡೆಸಬಹುದು ಎಂದು ಹೇಳಿದ್ದರು.

Ahead of Rath Yatra, Puri temple servitor tests COVID-19 positive | Deccan  Herald

ಅದಗ್ಯೂ, ಒಡಿಶಾ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ, “COVID-19 ಗೆ ನಕಾರಾತ್ಮಕ ಪರೀಕ್ಷಾ ವರದಿ ಇರುವವರು ಮಾತ್ರ ಭಾಗವಹಿಸಬಹುದು. ಎರಡು ರಥಗಳ ನಡುವೆ ಒಂದು ಗಂಟೆಯ ಅಂತರವಿರಬೇಕು. ರಥ ಎಳೆಯುವಲ್ಲಿ ನಿರತರಾಗಿರುವ ಪ್ರತಿಯೊಬ್ಬರೂ ಮಾಸ್ಕ್‌ ಧರಿಸಬೇಕು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು…” ಎಂದು ಹೇಳಿದೆ.

ಜಗನ್ನಾಥ ದೇವಾಲಯದ ರಥಯಾತ್ರೆಗೆ ವಿಶ್ವದಾದ್ಯಂತ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಜಗನ್ನಾಥನನ್ನು ಸರ್ವೋಚ್ಚ ದೇವರು ಮತ್ತು ಒಡಿಶಾ ಸಾಮ್ರಾಜ್ಯದ ಸಾರ್ವಭೌಮ ದೊರೆ ಎಂದು ಪರಿಗಣಿಸಲಾಗಿದೆ.

ಉತ್ಸವದ ಸಮಯದಲ್ಲಿ ಜಗನ್ನಾಥನನ್ನು ಗರ್ಭಗುಡಿಯಿಂದ ಹೊರತರಲಾಗುತ್ತದೆ. ಆದ್ದರಿಂದ ಭಕ್ತರು ಅವನನ್ನು ನೋಡಲು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ದೇವಾಲಯದ ಅಧಿಕಾರಿಗಳು ಹೇಳುತ್ತಾರೆ.

ಕೊರೊನಾ ಎರಡನೇ ಅಲೆಯು ತೀವ್ರಗೊಂಡ ನಂತರ, ಒಡಿಶಾ ರಾಜ್ಯವು ಒಂದು ದಿನದಲ್ಲಿ 12,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ಮಂಗಳವಾರ 24 ಗಂಟೆಗಳಲ್ಲಿ ಸುಮಾರು 4,000 ಹೊಸ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಟಿಎಂಸಿಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights