ಸ್ಟ್ಯಾನ್‌ ಸ್ವಾಮಿ ಅವರ ಸಾವು ‘ದುಃಖಕರ – ದುರಂತ’; ವಿಶ್ವಸಂಸ್ಥೆ ಸೇರಿ ಹಲವು ರಾಷ್ಟ್ರಗಳು ಆತಂಕ!

ಬುಡಕಟ್ಟು ಜನಾಂಗಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಸಾಮಾಜಿಕ ಹೋರಾಟಗಾರ, ಸಂತ ಸ್ಟ್ಯಾನ್‌ ಸ್ವಾಮಿ ಅವರು ಸೋಮವಾರ ಮುಂಬೈನ ತಾಲೋಜ ಕೇಂದ್ರ ಕಾರಾಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಸಾವು ‘ದುಃಖಕರ ಮತ್ತು ದುರಂತ’ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದ್ದಕ್ಕಾಗಿ, ಶಾಂತಿಯುತ ಸಭೆ ಮತ್ತು ಸಮಾವೇಶಗಳನ್ನು ನಡೆಸಿದ್ದಕ್ಕಾಗಿ ಯಾರನ್ನೂ ಬಂಧಿಸಬಾರದು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಕಚೇರಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಗರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಭಯೋತ್ಪಾದನಾ-ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ 84 ವರ್ಷದ ಸ್ಟಾನ್ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಅವರ ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ, ಜಾಮೀನು ದೊರೆಯದೇ ಪೂರ್ವ-ವಿಚಾರಣೆಯ ಬಂಧನದಲ್ಲಿದ್ದರು.

ಅವರಿಗೆ ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಅನಾರೋಗ್ಯ ಮತ್ತು ವೈದ್ಯಕೀಯ ಚಿಕಿತ್ಸೆ ಆಧಾರದ ಮೇಲೆ ಜಾಮೀನುಗಾಗಿ ಅವರು ಸಲ್ಲಿಸಿದ್ದ ಪುನರಾವರ್ತಿತ ಅರ್ಜಿಗಳನ್ನೂ ತಿರಸ್ಕರಿಸಲಾಗಿತ್ತು. ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಿರುವುದರ ವಿರುದ್ದ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್‌ ಅವರ ಅರ್ಜಿಯನ್ನು ವಿಚಾರಣೆ ನಡೆಸುವುದಕ್ಕೂ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.

Read Also:ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನಾ ಮರು ಮೈತ್ರಿ; ಠಾಕ್ರೆ-ಫಡ್ನವೀಸ್‌ ಜೊತೆಗೂಡುವ ಸಾಧ್ಯತೆ!

ಕೊರೊನಾ ಕಾಲದಲ್ಲಿ ಬಂಧನಕ್ಕೊಳಗಾದ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಾಕಷ್ಟು ಕಾನೂನುಗಳ ಆಧಾರವಿಲ್ಲದೇ ಸರ್ಕಾರಗಳು ಬಿಡುಗಡೆ ಮಾಡುವ ತುರ್ತು ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಸಾಂಕ್ರಾಮಿಕ ರೋಗದ ಮಧ್ಯೆ ವೈದ್ಯಕೀಯ ನೆರವು ಮತ್ತು ಸಾಮಾಜಿಕ ದೂರವನ್ನು ಖಾತರಿಪಡಿಸುವಲ್ಲಿ ಜೈಲು ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಟಾನ್ ಸ್ವಾಮಿ ಈ ಹಿಂದೆ ಆರೋಪಿಸಿದ್ದರು.

“ಭಾರತದಿಂದ ಬಂದ ಸುದ್ದಿ ಇಂದು ದುರಂತಕಾರಿಯಾಗಿದೆ. ಮಾನವ ಹಕ್ಕುಗಳ ರಕ್ಷಕ ಮತ್ತು ಜೆಸ್ಯೂಟ್ ಪಾದ್ರಿ ಫ್ರಾನ್ ಸ್ಟ್ಯಾನ್‌ ಸ್ವಾಮಿ ಅವರನ್ನು ಜೈಲಿಗೆ ಅಟ್ಟಿದ್ದು ಅಕ್ಷಮ್ಯ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಣೆ ವಿಭಾಗದ ವಿಶೇಷ ವರದಿಗಾರರಾದ ಮೇರಿ ಲಾಲರ್‌ ಟ್ವೀಟ್‌ ಮಾಡಿದ್ದಾರೆ.

https://twitter.com/UNHumanRights/status/1412352389479272460?s=20

ಎಲ್ಗರ್‌ ಪರಿಷತ್‌ ಪ್ರಕರಣದಲ್ಲಿ ಹಿಂಸಾಚಾರದ ಆರೋಪದ ಮೇಲೆ 2018ರಲ್ಲಿ ಸ್ಟಾನ್ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಜೈಲಿನಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದರೂ ಜೈಲಿನ ಅಧಿಕಾರಿಗಳು ಅವರ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಅಲ್ಲದೆ, ಅವರಿಗೆ ಒಂದು ಸ್ಟ್ರಾ ಕೂಡ ನೀಡದೇ ದೌರ್ಜನ್ಯ ಎಸಗಲಾಗಿತ್ತು. ನಂತರ ಕೋರ್ಟ್‌ ಆದೇಶದ ಮೇಲೆ ಅವರಿಗೆ ಸ್ಟ್ರಾ ನೀಡಲಾಗಿತ್ತು.

Read Also: ಸಂತರನ್ನು ಕೊಂದು – ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ ಹೇಳುವುದು ಸಾಕಷ್ಟಿದೆ: ಶಿವಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights