ಬಾಂಗ್ಲಾದ ಕಾರ್ಖಾನೆಯಲ್ಲಿ ಅಗ್ನಿ ಅವಘಡ; 50 ಕಾರ್ಮಿಕರ ಸಾವು; 30ಕ್ಕೂ ಹೆಚ್ಚು ಜನರಿಗೆ ಗಾಯ!

ಬಾಂಗ್ಲಾದೇಶದ ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿಯಲ್ಲಿ ಸಿಲುಕಿದ ಕನಿಷ್ಟ 50 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಬಂಗ್ಲಾದೇಶದ ರಾಜಧಾನಿ ಡಾಖಾದ ನಾರ್ಯಾನ್ ಗಂಜ್ ನ ರುಪ್ಗಂಜ್ ನಲ್ಲಿರುವ ಶೆಜಾನ್ ಜ್ಯೂಸ್ ಕಾರ್ಖಾನೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ನೆಲಮಹಡಿಯಲ್ಲಿ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ಇದ್ದ ಕಾರಣ ಅಲ್ಲಿಂದಲೇ ಬೆಂಕಿ ಹೊತ್ತಿಕೊಂಡಿರಬಹುದು ಎಂದುಇ ಅಗ್ನಿಶಾಮಕ ಅಧಿಕಾರಿಗಳು ಶಂಕಿಸಿದ್ದಾರೆ.

ವಿನಾಶಕಾರಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಲವಾರು ಕಾರ್ಮಿಕರು ಕಟ್ಟಡದಿಂದ ಜಿಗಿದಿದ್ದಾರೆ. ಹಲವಾರು ಜನರು ಕಾಣೆಯಾಗಿದ್ದು, ತಮ್ಮ ಸಂಬಂಧಿಗಳಿಗಾಗಿ ಅವರ ಕುಟುಂಬಸ್ಥರು ಕಟ್ಟಡದ ಬಳಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಮುಂಭಾಗದ ಗೇಟ್ ಮತ್ತು ಕಾರ್ಖಾನೆಯ ನಿರ್ಗಮನ ಗೇಟ್‌ ಲಾಕ್ ಆಗಿತ್ತು. ಕಟ್ಟಡದಲ್ಲಿ ಸರಿಯಾದ ಅಗ್ನಿ ಸುರಕ್ಷತಾ ಕ್ರಮಗಳಿಲ್ಲ  ಎಂದು ರಕ್ಷಿಸಲ್ಪಟ್ಟ ಕಾರ್ಮಿಕರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.

ಕಟ್ಟಡದಲ್ಲಿ 18 ಅಗ್ನಿಶಾಮಕ ಘಟಕಗಳು ಬೆಂಕಿಯನ್ನ ನಂದಿಸಲು ಹೆಣಗಾಡುತ್ತಿವೆ. ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ ಎಂದು ನಾರಾಯಣ ಗಂಜ್ ಜಿಲ್ಲಾ ಅಗ್ನಿಶಾಮಕ ಸೇವೆಯ ಉಪ ನಿರ್ದೇಶಕ ಅಬ್ದುಲ್ಲಾ ಅಲ್ ಅರಿಫೈನ್ ಹೇಳಿದ್ದಾರೆ.

ಇದನ್ನೂ ಓದಿ: 37 ಮಿಲಿಯನ್ ವರ್ಷ ಹಿಂದಿನ ತಿಮಿಂಗಿಲದ ಅವಶೇಷಗಳು ಪತ್ತೆ; ವಿಡಿಯೋ ನೋಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights