37 ಮಿಲಿಯನ್ ವರ್ಷ ಹಿಂದಿನ ತಿಮಿಂಗಿಲದ ಅವಶೇಷಗಳು ಪತ್ತೆ; ವಿಡಿಯೋ ನೋಡಿ!

ಸುಮಾರು 37 ಮಿಲಿಯನ್ ವರ್ಷದ ಹಿಂದೆ ಅಳಿದುಹೋದ ಪ್ರಾಚೀನ ತಿಮಿಂಗಿಲದ ಅವಶೇಷಗಳು ಸೌದಿ ಅರೇಬಿಯಾದ ಜಾಫ್ ಪ್ರದೇಶದಲ್ಲಿ ದೊರೆತಿವೆ ಎಂದು ಅಲ್ಲಿನ ಭೂವಿಜ್ಞಾನ ಮತ್ತು ಪ್ರಾಚೀನ ಸಮುದ್ರ ಪರಿಸರ ಇಲಾಖೆ ತಿಳಿಸಿದೆ ಎಂದು ವರದಿಯಾಗಿವೆ.

ಸ್ಥಳೀಯ ಮತ್ತು ಅಂತರಾಷ್ಟ್ರೀಯ ಭೂವಿಜ್ಞಾನಿಗಳು ಮತ್ತು ಪಳೆಯುಳಿಕೆ ಶಾಸ್ತ್ರಜ್ಞರನ್ನು ಒಳಗೊಂಡ 8 ಮಂದಿಯ ತಂಡವು ನಡೆಸಿದ ಆವಿಷ್ಕಾರದಲ್ಲಿ ತಿಮಿಂಗಿಲದ ಮೂಳೆಗಳಿದ್ದ ಸಮಾಧಿ ಸಹಿತ ಹಲವು ಅಮೂಲ್ಯ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ವೈಜ್ಞಾನಿಕ ಪ್ರಾಮುಖ್ಯತೆ ಪಡೆದಿರುವ ಈ ಸಂಶೋಧನೆಯನ್ನು ಶ್ರೇಯ ಸೌದಿಯ ಭೂಗರ್ಭಶಾಸ್ತ್ರ ಸರ್ವೆ (ಎಸ್ಜಿಎಸ್) ತಂಡ ನಡೆಸಿದೆ. 37 ಮಿಲಿಯನ್ ವರ್ಷಕ್ಕೂ ಹಿಂದಿನ ಪ್ರಯಬೋನಿಯನ್ ಯುಗ (ಅಪ್ಪರ್ ಇಯೊಸಿನ್ ಯುಗ)ಕ್ಕೆ ಸೇರಿದ ಮರಳು ಮತ್ತು ಕಲ್ಲುಬಂಡೆಗಳ ಪರ್ವತಶ್ರೇಣಿಯಲ್ಲಿ ತಿಮಿಂಗಿಲದ ಅವಶೇಷಗಳಿದ್ದ ಸಮಾಧಿ ಪತ್ತೆಯಾಗಿದೆ ಎಂದು ಈ ತಂಡ ಹೇಳಿದೆ.

ಈ ಆವಿಷ್ಕಾರವು ವಾಯವ್ಯ ಸೌದಿ ಅರೆಬಿಯಾದ ಪ್ರಾಚೀನ ಸಮುದ್ರ ಸಸ್ತನಿಗಳ ಭೌಗೋಳಿಕ ಹಂಚಿಕೆ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆವಿಷ್ಕರಿಸಿದ ಮೂಳೆಗಳು ಪುರಾತನ ತಿಮಿಂಗಿಲದ ಅಪರೂಪದ ತಳಿಗೆ ಸೇರಿದ್ದಾಗಿದೆ ಮತ್ತು ಬಾಲದ ತುದಿಯಿಂದ ಎದೆಯ ಮೇಲ್ಬಾಗದವರೆಗಿನ ಮೂಳೆಗಳು, ಮಂದಿನ ಕಾಲಿನ ಮೂಳೆ, ಭುಜದ ಅಲಗು, ಪಕ್ಕೆಲುಬು, ತಲೆಬುರುಡೆ ಮತ್ತು ಕೆಳದವಡೆಯ ಮೂಳೆ ಇದರಲ್ಲಿ ಸೇರಿದೆ ಎಂದು ಸೌದಿ ಭೂವಿಜ್ಞಾನ ಸರ್ವೆಯ ತಾಂತ್ರಿಕ ಸಲಹೆಗಾರ ಇಯಾದ್ ಝಲ್ಮೌಟ್ ‘ದಿ ಅರಬ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹಿಂದೆ ಅನ್ವೇಷಿಸಿದ್ದಕ್ಕಿಂತ ಪುರಾತನ ತಿಮಿಂಗಿಲದ ಅವಶೇಷ ಇದಾಗಿದ್ದು ಹಿಂಗಾಲು ಕುಂಠಿತವಾಗಿದ್ದರೆ ಮುಂಗಾಲು ಚಪ್ಪಟೆಯಾಗಿದೆ. ಕಿರಿದಾದ ಕುತ್ತಿಗೆ, ಉದ್ದವಾದ ಬಾಲವನ್ನು ಹೊಂದಿದೆ. ಇದರ ತಲೆಬುರುಡೆಯಲ್ಲಿ ಅತ್ಯಂತ ಪ್ರಮುಖ ಲಕ್ಷಣವಿದೆ. ಇಲ್ಲಿ ಮೂಗಿನ ಮೂಳೆಗಳು ಹಣೆಯ ಕಡೆಗೆ ಹಿಂಜರಿದಿರುವುದನ್ನು ಕಾಣಬಹುದು. ಜೊತೆಗೆ ಕೆನ್ನೆಯ ಹಲ್ಲುಗಳ ಸಂಕೀರ್ಣತೆಯೂ ಕಿರಿದಾಗಿದೆ. ಈ ಹಿಂದೆ 1902 ಮತ್ತು 1991ರಲ್ಲಿ ಈಜಿಪ್ಟ್ನ ಪಶ್ಚಿಮ ಮರುಭೂಮಿಯಲ್ಲಿ ಪತ್ತೆಯಾದ ‘ಸ್ಟ್ರೋಮೆರಿಯಸ್ ನಿಡೆನ್ಸಿಸ್’ ಎಂದು ಹೆಸರಿಸಲಾದ ಸಣ್ಣ ತಿಮಿಂಗಿದ ಭಾಗಶಃ ಅಸ್ಥಿಪಂಜರದ ಗಾತ್ರ ಮತ್ತು ಆಕೃತಿಯನ್ನು ಇದು ಹೋಲುತ್ತದೆ. ಈ ತಿಮಿಂಗಿಲದ ತಳಿಯಲ್ಲಿ ಅತ್ಯಂತ ಸಣ್ಣಗಾತ್ರದ ತಿಮಿಂಗಿಲ ಇದಾಗಿದ್ದು ಡೊರುಡನ್ ತಳಿಯ ತಿಮಿಂಗಿಲದ ಅರ್ಧ ಅಥವಾ ಮೂರನೇ ಒಂದು ಭಾಗವಿದೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಸ್ಟ್ಯಾನ್‌ ಸ್ವಾಮಿ ಅವರ ಸಾವು ‘ದುಃಖಕರ – ದುರಂತ’; ವಿಶ್ವಸಂಸ್ಥೆ ಸೇರಿ ಹಲವು ರಾಷ್ಟ್ರಗಳು ಆತಂಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights