ಗಣಿ ಸಮರ : ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ರಾಕ್ ಲೈನ್ ವೆಂಕಟೇಶ್ ವಾಗ್ದಾಳಿ!
ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗಣಿ ಸಮರ ತಾರಕಕ್ಕೇರಿದೆ. ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗಳ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಾಗ್ದಾಳಿ ಮಾಡಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗಳ ವಿರುದ್ಧ ಆಕ್ರೋಶಗೊಂಡ ವೆಂಕಟೇಶ್, ‘ರೆಬೆಲ್ ಸ್ಟಾರ್ ಅಂಬರೀಶ್ ಅವರು ಸತ್ತಾಗ ಕುಮಾರಸ್ವಾಮಿ ಅವರು ನಾನು ಅದನ್ನ ಮಾಡಿದೆ ಇದನ್ನ ಮಾಡಿದೆ ಎಂದು ಹೇಳಿದ್ರು. ದಾರಿಗೋಗೋ ದಾಸಪ್ಪ ಇದ್ರು ಅಂಬರೀಶ್ ತೀರಿಹೋದಾಗ ಇದನ್ನೇ ಮಾಡ್ತಾಯಿದ್ರು. ಅಂಬರೀಶ್ ಸತ್ತಾಗ ಸುಮಲತಾ ಸಿಎಂ ಏನ್ ಹೇಳ್ತಾರೆ ಹಾಗೇ ಮಾಡಲಿ ಅಂದ್ರು. ಅನ್ನೂ ಅಭಿ ‘ಮಂಡ್ಯದ ಜನ ಅಪ್ಪನನ್ನು ಬೇಳಸಿದ್ದರು. ಅವರನ್ನ ಮಂಡ್ಯಕ್ಕೆ ಕರೆದುಕೊಂಡು’ ಹೋಗಲು ಹೇಳಿದ. ಅದನ್ನ ತಿರಿಚಿ ಯಾಕೆ ಮಾತನಾಡಬೇಕು. ಕುಮಾರಣ್ಣ ನೀವು ಒಳ್ಳೆಯವರು. ಒಳ್ಳೆ ರೀತಿ ಮಾತನಾಡಿ. ಅಂಬರೀಶ್ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ’ ಎಂದು ರಾಕ್ ಲೈನ್ ವೆಂಕಟೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
ಅಂಬರೀಶ್ ಅವರು ಇದ್ದಾಗಲೇ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಹೇಳುವ ಶಾಸಕರು ಅವರೇನು ಮಾಡ್ತಾಯಿದ್ರು..? ಶಾಕರು ಇರಲಿಲ್ವಾ..? ಆಗೇನು ಮಾತನಾಡದವರು. ಈಗ ಸತ್ತ ಮೇಲೆ ಯಾಕೆ ಮಾತನಾಡುತ್ತಿದ್ದಾರೆ..? ಎಂದು ವೆಂಕಟೇಶ್ ಪ್ರಶ್ನಿಸಿದ್ದಾರೆ.
‘ಸುಮತಲಾ ಏನ್ ಮಾಡಿದ್ದಾರೆ? ಅನ್ನೋ ಬಗ್ಗೆ ನಮ್ಮ ಬಳಿ ವಿಡಿಯೋ ಇದೆ ಅಂತ ಹೇಳ್ತಾರೆ. ಅದೇನು ಅನ್ನೋದು ನಾನು ಹೇಳ್ತೀನಿ ಕೇಳಿ. ಮೈನಿಂಗ್ ವಿಚಾರವಾಗಿ ಮಾತನಾಡಲು ದೊಡ್ಡ ಕಂಪನಿಯವರು ಸುಮಲತಾ ಬಳಿ ಬಂದಿದ್ರು. ಆಗ ಅವರು ವಿಡಿಯೋ ಮಾಡಿದ್ದಾರೆ. ನಾವು ಸಿನಿಮಾದವರು ಅವರು ವಿಡಿಯೋ ಮಾಡುವ ಬಗ್ಗೆ ನಮಗೂ ತಿಳಿದಿತ್ತು. ಅವರು ಏನೇನು ಮಾತನಾಡಿದರು..? ಸುಮಲತಾ ಅವರು ಏನೇನು ಮಾತನಾಡಿದ್ರು ಅನ್ನೋದನ್ನ ವಿಡಿಯೋ ಮಾಡಿದ್ದಾರೆ. ಇದನ್ನೇ ಅವರು ವಿಡಿಯೋ ಇದೆ ಅನ್ನೋದು. ಆದರೆ ಆ ವಿಡಿಯೋ ಯಾಕೆ ರಿಲೀಸ್ ಮಾಡ್ತಾಯಿಲ್ಲ ಅಂದ್ರೆ ಮೈನಿಂಗ್ ಕಂಪನಿಯವರು ವಿಡಿಯೋದಲ್ಲಿ ಕುಮಾರಸ್ವಾಮಿಯನ್ನು ಬೈದಿರೋದಿದೆ. ಹೀಗಾಗಿ ವಿಡಿಯೋ ಬಿಡುಗಡೆ ಮಾಡಿಲ್ಲ ಅಷ್ಟೇ. ನಮ್ಮ ಬಳಿಯೂ ಈ ವಿಡಿಯೋ ಇದೆ. ಆದರೆ ಈ ಕಂಪನಿಯವರನ್ನ ಕುಮಾರಸ್ವಾಮಿ ಅವರ ಕಡೆಯವರೇ ಕಳುಹಿಸಿದ್ದರು ಅನ್ನೋದು ನಮಗೆ ಬಳಿಕೆ ತಿಳಿದು ಬಂತು’ ಎಂದು ವೆಂಕಟೇಶ್ ಹೇಳಿದ್ದಾರೆ.
‘ಕುಮಾರಸ್ವಾಮಿ ಜೊತೆ ರಾಜಕುಮಾರ್ ಇದ್ದಾಗಿನಿಂದಲೂ ನಾನು ಜೊತೆಗಿದ್ದವನು ನಾನು. ಅಂಬರೀಶ್ ಸತ್ತಾಗ ಸುಮಲತಾ ಸಿಎಂ ಏನ್ ಹೇಳ್ತಾರೆ ಹಾಗೇ ಮಾಡಿ ಅಂದ್ರು. ಅಭಿ ಅಂಬಿ ದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹೇಳಿದರು. ಅಭಿ ಆಸೆ ಪಟ್ಟಿದ್ದಕ್ಕೆ ಮಂಡ್ಯಕ್ಕೆ ಅಂಬರೀಶ್ ಅವರ ದೇಹವನ್ನು ಮಂಡ್ಯಕ್ಕೆ ಕರೆತರಲಾಯಿತು. ದಯವಿಟ್ಟು ಕುಮಾರಣ್ಣ ಸಾವಿನ ಬಗ್ಗೆ ರಾಜಕಾರಣ ಮಾಡಬೇಡಿ’ ಎಂದು ವೆಂಕಟೇಶ್ ಮನವಿ ಮಾಡಿದ್ದಾರೆ.