ಸಪ್ಲೈಯರ್ ಮೇಲೆ ಹಲ್ಲೆ ಪ್ರಕರಣ : ತನಿಖೆಗಾಗಿ ಬಸವರಾಜ್ ಬೊಮ್ಮಾಯಿಗೆ ಇಂದ್ರಜಿತ್ ಮನವಿ!
ನಿರ್ದೇಶಕ ಇಂದ್ರಜಿತ್ ಲಂಕೇಶ್ ನನ್ನ ಬಳಿ ಮನವಿ ಪತ್ರ ನೀಡಿದ್ದಾರೆ. ನಾಣು ಮೈಸೂರು ಪೊಲೀಸ್ ಆಯುಕ್ತರಿಗೆ ಮನವಿ ಪತ್ರವನ್ನು ರವಾನಿಸಿ ತನಿಗೆಗಾಗಿ ಸೂಚಿಸಿದ್ದೇನೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಸಚಿವರು, ” ನನ್ನ ಬಳಿ ಇಂದ್ರಜಿತ್ ಬಂದಿದ್ದರು. ಅವರ ಯಾರ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಜೊತೆಗೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ತನಿಖೆಗಾಗಿ ಮನವಿ ಪತ್ರ ನೀಡಿದ್ದಾರೆ. ಅವರ ಮನವಿಯನ್ನು ಸ್ವೀಕರಿಸಿ ನಾನು ಮೈಸೂರು ಪೊಲೀಸ್ ಆಯುಕ್ತರಿಗೆ ತನಿಖೆಗೆ ಸೂಚಿಸಿದ್ದೇನೆ” ಎಂದರು.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಸಪ್ಲೈಯರ್ ಕಣ್ಣಿಗೆ ಹಾನಿಯಾಗಿದೆ. ಈ ಸಮಯದಲ್ಲಿ ದರ್ಶನ್ ಜೊತೆಗೆ ರಾಕೇಶ್, ಹರ್ಷ ಮೆಲಾಂಟ ಮತ್ತು ಪವಿತ್ರಾ ಗೌಡ ಇರುತ್ತಾರೆ. ಘಟನೆಯ ಬಳಿಕ 50 ಸಾವಿರ ರೂ,ನೀಡಿ ರಾಜಿ ಮಾಡಿಕೊಂಡಿದ್ದಾರೆಂದು ಇಂದ್ರಜಿತ್ ಇಂದು ಆರೋಪಿಸಿ ಗೃಹ ಸಚಿವರಿಗೆ ತನಿಖೆಗಾಗಿ ಮನವಿ ಪತ್ರವವೊಂದನ್ನು ನೀಡಿದ್ದಾರೆ.
ಮಾತ್ರವಲ್ಲದೇ ಸಿಸಿಟಿವಿ ದೃಶ್ಯಗಳನ್ನೂ ಇವರು ಡಿಲಿಟ್ ಮಾಡಿದ್ದಾರೆ. ಮೈಸೂರು ಪೊಲೀಸರು ಬಳೆ ತೊಟ್ಟುಕೊಂಡಿದ್ದಾರಾ? ಇಂತ ವಿಚಾರಗಳನ್ನು ತನಿಖೆ ಮಾಡದೆ ಬಿಟ್ಟಿದ್ದಾರೆ. ಈ ವಿಚಾರ ತನಿಖೆಯಾಗಲೇಬೇಕು ಎಂದು ಇಂದ್ರಜಿತ್ ಒತ್ತಾಯಿಸಿದ್ದಾರೆ.
‘ದರ್ಶನ್ 25 ಕೋಟಿ ವಂಚನೆ ಆಗಿದೆ ಅಂತೀರಾ..? ಹಾಗಾದ್ರೆ ಅದನ್ನು ಸುಮ್ಮನೆ ಬಿಟ್ಟುಬಿಟ್ರಾ? ನಿಮಗೆ ಅರುಣಕುಮಾರಿ ಗೊತ್ತೇ ಇಲ್ಲ ಅಂದ್ರೆ ಆಕೆಯನ್ನು ಯಾಕೆ ಕರೆಸಿಕೊಂಡಿದ್ರಿ? ಏನ್ ನಡೆದಿದೆ ಅಂತ ಹೇಳಬೇಕು. ಈ ವಿಚಾರ ಗೊತ್ತಾಗಬೇಕು’ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.