1 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದ ‘ಪುಷ್ಪ’ ಸಿನಿಮಾದ ಲಿರಿಕಲ್ ಸಾಂಗ್!

ಜನಪ್ರಿಯ ನಟ ಅಲ್ಲು ಅರ್ಜುನ್ ಅವರು ಅಭಿನಯದ ಪುಷ್ಪ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ‘ದಕ್ಕೋ ದಕ್ಕೋ ಮೇಕಾ’ ಹಾಡಿಗೆ ಅಲ್ಲು ಫ್ಯಾನ್ಸ್  ಫುಲ್ ಫಿದಾ ಆಗಿದ್ದಾರೆ. ಮಾತ್ರವಲ್ಲದೇ ಈ ಹಾಡು ಬಿಡುಗಡೆಯಾಗುತ್ತಿದ್ದಂತೆ 1 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಸೂಪರ್ ಡೂಪರ್ ಹಿಟ್ ಆಗಿದೆ.

ಕ್ರಿಸ್ಮಸ್ (ಡಿಸೆಂಬರ್ 25) ರಂದು ರಿಲೀಸ್ ಆಗಲಿರುವ ಪುಷ್ಟ ಸಿನಿಮಾದ ಮೊದಲ ಹಾಡು (ಆಗಸ್ಟ್ 13)ನಿನ್ನೆ ಬಿಡುಗಡೆಯಾಗಿದೆ. 5 ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು ತಮಿಳಿನಲ್ಲಿ ಓದು ಓದು, ತೆಲುಗಿನಲ್ಲಿ ದಕ್ಕೋ ದಕ್ಕೋ ಮೇಕಾ, ಮಲಯಾಳಂನಲ್ಲಿ ಓದು ಓದು, ಹಿಂದಿಯಲ್ಲಿ ಜಾಗೋ ಜಾಗೋ ಬಕ್ರೆ ಮತ್ತು ಕನ್ನಡದಲ್ಲಿ ಜೋಕೆ ಜೋಕೆ ಮೇಕೆ ಎಂದು ಹೆಸರಿಸಲಾಗಿದೆ.

ಸ್ಯಾಂಡಲ್ ವುಡ್ ನ ಖ್ಯಾತ ಗಾಯಕ ವಿಜಯ್ ಅವರ ಗಾಯನ ಹಾಗೂ ದೇವಿಶ್ರೀ ಪ್ರಸಾದ್ ಸಂಗೀತಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಅವರ ಸಾಹಿತ್ಯವಿದೆ. 5 ಭಾಷೆಗಳಲ್ಲೂ ಈ ಹಾಡು ಸಾಕಷ್ಟು ಜನಪ್ರಯತೆ ಪಡೆದುಕೊಂಡಿದೆ.

ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪುಷ್ಪ ಚಿತ್ರ ಕ್ರಿಸ್ಮಸ್ (ಡಿಸೆಂಬರ್ 25) ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಬಾಕ್ಸ್ ಆಫೀಸ್ ನಲ್ಲಿ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಜೊತೆ ಸೆಣಸಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights