ಆರ್ಥಿಕ ಕುಸಿತ: ಒಂದು ವರ್ಷದಲ್ಲಿ ಭಾರತದಲ್ಲಿ 1 ಲಕ್ಷ ಶಿಶುಗಳ ಸಾವು: ವಿಶ್ವ ಬ್ಯಾಂಕ್‌ ವಿಶ್ಲೇಷಣೆ

ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ತಳಮುಟ್ಟಿದೆ. ಇದರಿಂದಾಗಿ ಹಲವು ಸೌಲಭ್ಯಗಳ ಕೊರತೆಯಿಂದಾಗಿ ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ 99, 642 ಶಿಶುಗಳು ಸಾವನ್ನಪ್ಪಿವೆ ಎಂದು ವಿಶ್ವ ಬ್ಯಾಂಕ್‌ ಸಂಶೋಧಕರು ಅಂದಾಜಿಸಿದ್ದಾರೆ.

ಆರ್ಥಿಕ ಕುಸಿತದಿಂದಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ, ಕಳೆದ ವರ್ಷದಲ್ಲಿ 2.67 ಲಕ್ಷ ಶಿಶುಗಳ ಸಾವನ್ನಪ್ಪಿವೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಸಾವುಗಳು ಭಾರತದಲ್ಲಿ ಸಂಭವಿಸಿವೆ ಎಂದು ಸಂಶೋಧನೆಯು ತಿಳಿಸಿದೆ.

ಸಂಶೋಧಕರು 128 ದೇಶಗಳಲ್ಲಿ 2,67,208 ಅಧಿಕ ಶಿಶು ಸಾವುಗಳಾಗಿವೆ ಎಂದು ಅಂದಾಜಿಸಿದ್ದಾರೆ. ಇದು 2020 ರಲ್ಲಿ ನಿರೀಕ್ಷಿತ ಒಟ್ಟು ಶಿಶು ಸಾವಿನ ಸಂಖ್ಯೆಯಲ್ಲಿ 6.8% ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ಸಾಂಕ್ರಾಮಿಕದಿಂದ ಉಂಟಾದ ನಕಾರಾತ್ಮಕ ಆದಾಯದಿಂದಾಗಿ ಪರಿಣಾಮ ಇದಕ್ಕೆ ಕಾರಣವಾಗಿದೆ ಎಂದು ವಿಶ್ವ ಬ್ಯಾಂಕ್ ಒತ್ತಿ ಹೇಳಿದೆ.

ಭಾರತದಲ್ಲಿ ಕೊರೊನಾ ಪತ್ತೆಯಾಗುವುದಕ್ಕಿಂಲೂ ಮೊದಲೇ ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿತ್ತು. ಇದರ ಜೊತೆಗೆ ಕಳೆದ ವರ್ಷ, ಯಾವುದೇ ಮುನ್ಸೂಚನೆಯಿಲ್ಲದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಾದ್ಯಂತ ಏಕಾಏಕಿ ಲಾಕ್‌ಡೌನ್‌ ಘೋಷಿಸಿತ್ತು. ಇದು ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಿತು.

ಇದನ್ನೂ ಓದಿ: ಲಸಿಕಾ ಪ್ರಮಾಣಪತ್ರದಲ್ಲಿ ಮೋದಿ ಫೋಟೋ; ವಿದೇಶಿ ಪ್ರಯಾಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಭಾರತೀಯರು!

“ಕೊರೊನಾ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕಡೆಗೆ ಪ್ರಯತ್ನಗಳು ಅತ್ಯುನ್ನತವಾಗಿದ್ದರೂ, ಜಾಗತಿಕ ಸಮುದಾಯವು ಸಾಮಾಜಿಕ ಸುರಕ್ಷತಾ ಜಾಲಗಳನ್ನು ಬಲಪಡಿಸಬೇಕು. ಅಗತ್ಯ ಆರೋಗ್ಯ ಸೇವೆಯ ನಿರಂತರತೆಯನ್ನು ಖಾತರಿಪಡಿಸಬೇಕು” ಎಂದು ಸಂಶೋಧಕರು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಪ್ರಾರಂಭದ ಮೊದಲ ಆರು ತಿಂಗಳಲ್ಲಿ ಪ್ರಪಂಚವು 2.5 ಲಕ್ಷದಿಂದ 11.5 ಲಕ್ಷ ಚಿಕ್ಕ ಮಕ್ಕಳ ಸಾವುಗಳಾಗುತ್ತದೆ ಎಂದು ಊಹಿಸಲಾಗಿತ್ತು.

ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ವಿಶ್ಲೇಷಣೆಯು ಅಧಿಕ ಶಿಶು ಮರಣದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು (99, 642) ಭಾರತದಲ್ಲಿ ಆಗಿದೆ ಎಂದು ಅಂದಾಜಿಸಿದೆ.

ಭಾರತವು ಹೆಚ್ಚಿನ ಸಂಖ್ಯೆಯ ವಾರ್ಷಿಕ ಜನನಗಳನ್ನು ಹೊಂದಿದೆ (2,42,38,000) ಹಾಗೂ ನಿರ್ದಿಷ್ಟವಾಗಿ ದೊಡ್ಡ ಯೋಜಿತ ಆರ್ಥಿಕ ಕೊರತೆ (17.3%)ಯನ್ನೂ ಎದುರಿಸಿದೆ ಎಂದು ಸಂಶೋಧನೆ ತಿಳಿಸಿದೆ.

“ಈ ಕಾರಣದಿಂದಾಗಿ, ದಕ್ಷಿಣ ಏಷ್ಯಾವು ಅತಿ ಹೆಚ್ಚು ಶಿಶು ಮರಣವನ್ನು ನಿರೀಕ್ಷಿಸಿದ ಪ್ರದೇಶವಾಗಿದೆ. ಆದರೂ ಎಂಟು ದೇಶಗಳು ಮಾತ್ರ ಈ ವಿಶ್ಲೇಷಣೆಯಲ್ಲಿ ಒಳಗೊಂಡಿವೆ” ಎಂದು ಸಂಶೋಧನಾ ಲೇಖನವು ತಿಳಿಸಿದೆ.

ಇದನ್ನೂ ಓದಿ: ಲಾಕ್‌ಡೌನ್ ಪರಿಣಾಮ: ಮಗಳ ಮದುವೆಗೆ ಹಣ ಹೊಂದಿಸಲಾಗದೆ ತಂದೆ ಆತ್ಮಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights