ದೆಹಲಿಯಲ್ಲಿಂದು ದಾಖಲೆಯ ಮಳೆ : ಎಲ್ಲೆಡೆ ಟ್ರಾಫಿಕ್ ಜಾಮ್ : ಕೆರೆಯಂತಾದ ರಸ್ತೆಗಳು!

ದೆಹಲಿಯಲ್ಲಿಂದು ದಾಖಲೆಯ ಮಳೆಯಾಗಿದ್ದು ರಸ್ತೆಗಳೆಲ್ಲ ಕೆರೆಗಳಂತಾಗಿ ಮನೆಗಳಿಗೆ ನೀರು ನುಗ್ಗಿದೆ.

ದೆಹಲಿಯಲ್ಲಿ ಇಂದು ದಾಖಲೆಯ ಮಳೆಯಿಂದಾಗಿ ನೆರೆಯ ಗುರ್ಗಾಂವ್ ಮತ್ತು ನೋಯ್ಡಾದ ಹಲವು ಭಾಗಗಳಲ್ಲಿ ಬೆಳಿಗ್ಗೆ ಟ್ರಾಫಿಕ್ ಜಾಮ್ ಉಂಟಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನವೇ ಅಸ್ತವ್ಯಸ್ತವಾಗಿದೆ.

ದೆಹಲಿಯಲ್ಲಿ ಒಂದೇ ದಿನ 112.1 ಮಿಮೀ ಮಳೆಯಾಗಿದೆ. ಇದು 12 ವರ್ಷದಲ್ಲಾದ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ದ್ವಾರಕಾ ಅಂಡರ್‌ಪಾಸ್ ಅನ್ನು ದಾಟಲು ಕಾರುಗಳು ಹೆಣಗಾಡುತ್ತಿರುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿವೆ.

ದೆಹಲಿಯ ಹೃದಯ ಭಾಗದ ಪ್ರಮುಖ ರಸ್ತೆಗಳಲ್ಲಿ ಕಾರುಗಳು ತೆವಳುತ್ತಾ ಸಾಗುವ ಮತ್ತು ಸಂಚಾರವನ್ನು ನಿಧಾನವಾಗುವ ಹಾಗೂ ಅನೇಕ ಮಾರ್ಗಗಳನ್ನು ಕಡಿತಗೊಂಡಿರುವ  ವಿಡಿಯೋಗಳು ವೈರಲ್ ಆಗಿವೆ.

https://twitter.com/haruuloh/status/1432948305885941765?ref_src=twsrc%5Etfw%7Ctwcamp%5Etweetembed%7Ctwterm%5E1432948305885941765%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fvehicles-wade-through-waterlogged-streets-heavy-rain-delhi-gurugram-videos-pictures-1847933-2021-09-01

ಸೆಪ್ಟೆಂಬರ್ 13, 2002 ರಂದು ರಾಜಧಾನಿಯಲ್ಲಿ 126.8 ಮಿಮೀ ಮಳೆಯಾಗಿದೆ. ಸಾರ್ವಕಾಲಿಕ ದಾಖಲೆಯೆಂದರೆ ಸೆಪ್ಟೆಂಬರ್ 16, 1963 ರಂದು 172.6 ಮಿಮೀ ಮಳೆಯಾಗಿತ್ತು.

ಇಂದು ಬೆಳಿಗ್ಗೆ 8.30 ರಿಂದ ಆರಂಭವಾಗಿ ಕೇವಲ ಮೂರು ಗಂಟೆಗಳಲ್ಲಿ 75.6 ಮಿಮೀ ಮಳೆಯಾಗಿದೆ. ಇದು ದಾಖಲೆಯ ಮಳೆಯಾಗಿದೆ ಎಂದು ವರದಿಗಳು ಹೇಳಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights