ಇಷ್ಟು ದೊಡ್ಡ ಜನಸಂಖ್ಯೆಗೆ ಅಭಿವೃದ್ಧಿ, ಶುದ್ದ ಗಾಳಿ ಒದಗಿಸುವುದು ಸುಲಭವಲ್ಲ: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ

ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ. ಇಷ್ಟು ದೊಡ್ಡ ಸಂಖ್ಯೆಯ ಜನರಿರುವ ದೇಶದಲ್ಲಿ ಅಭಿವೃದ್ಧಿ, ಶುದ್ಧ ಗಾಳಿ ಮತ್ತು ಒಳ್ಳೆಯ ಹವಮಾನ ಒದಗಿಸುವುದು ಸಲುಭವಲ್ಲ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಶುಕ್ರವಾರ ಹೇಳಿದ್ದಾರೆ.

ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಪಿಎಚ್‌ಡಿಸಿಐ) ಆಯೋಜಿಸಿದ್ದ ಅಂತಾರಾಷ್ಟ್ರೀಯ ಹವಾಮಾನ ಶೃಂಗಸಭೆ 2021 ರಲ್ಲಿ ಭಾಗವಹಿಸಿ “ಭಾರತದ ಹೈಡ್ರೋಜನ್ ಪರಿಸರ ವ್ಯವಸ್ಥೆಗೆ ಶಕ್ತಿ ತುಂಬುವುದು” ಎಂಬ ವಿಷಯದ ಕುರಿತು ಮಾತನಾಡಿದ ಅವರು, “ಭಾರತದ ಜನಸಂಖ್ಯೆಯು ಹೆಚ್ಚಾಗಿದೆ. ನಾವು ಅದನ್ನು ನಿಯಂತ್ರಿಸುವ ಅಗತ್ಯವಿದೆ. ಏಕೆಂದರೆ ಇಷ್ಟು ದೊಡ್ಡ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಅಭಿವೃದ್ಧಿಯನ್ನು ಸಾಧಿಸಲು, ಎಲ್ಲ ಜನರಿಗೆ ಶುದ್ಧ ಗಾಳಿಯನ್ನು ಒದಗಿಸುವುದರೊಂದಿಗೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿಯಂತ್ರಿಸುವುದು ಸುಲಭವಲ್ಲ” ಎಂದು ಹೇಳಿದ್ದಾರೆ.

“ಹಸಿರು ಮತ್ತು ಶುದ್ಧ ಗಾಳಿಯ ಬಗೆಗಿನ ಭಾರತದ ದೃಢ ನಿರ್ಧಾರಗಳು ವಿಶ್ವದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬುತ್ತವೆ. ರಾಷ್ಟ್ರೀಯ ಹೈಡ್ರೋಜನ್ ಮಿಷನ್‌ನಿಂದಾಗಿ ಭಾರತವನ್ನು ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ರಫ್ತಿಗೆ ಜಾಗತಿಕ ಕೇಂದ್ರವನ್ನಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ವಿಶ್ವದಾದ್ಯಂತ ಶುದ್ಧ ಇಂಧನ ಪರಿವರ್ತನೆಗೆ ಸ್ಫೂರ್ತಿಯಾಗಲಿದೆ” ಎಂದು ಅವರು ಹೇಳಿದ್ದಾರೆ.

“ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಸರ್ಕಾರವು ಬದ್ಧವಾಗಿದೆ. ನಾವು ಈಗಾಗಲೇ ಆಯೋಗವನ್ನು ರಚಿಸಿದ್ದೇವೆ. ನಾವು ಕಡಿಮೆ ಕಾರ್ಬನ್ ಮತ್ತು ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದ್ದೇವೆ” ಚೌಬೆ ಹೇಳಿದ್ದಾರೆ.

ಶೃಂಗಸಭೆಯು ಭಾರತವನ್ನು ಕಾರ್ಬನ್ ರಹಿತ ಇಂಧನ ಪರಿಸರ ವ್ಯವಸ್ಥೆಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದು, ನವೀಕರಿಸಬಹುದಾದ ಶಕ್ತಿಯಲ್ಲಿ ಭಾರತವು ಜಾಗತಿಕಮ ಮಟ್ಟದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಪಿಎಚ್‌ಡಿಸಿಸಿಐ ಹೇಳಿದೆ.

ಶೃಂಗಸಭೆಯಲ್ಲಿ ನಾರ್ವೆ ಪಾಲುದಾರ ರಾಷ್ಟ್ರವಾಗಿ ಭಾಗವಹಿಸಿತ್ತು. ಸಾರಿಗೆ, ಉದ್ಯಮ ಮತ್ತು ಹಡಗು ವಲಯಗಳಲ್ಲಿ ಹಸಿರು ಹೈಡ್ರೋಜನ್ಅನ್ನು ಪ್ರೋತ್ಸಾಹಿಸುವುದು ಕಡಿಮೆ ಮತ್ತು ಶೂನ್ಯ ಕಾರ್ಬನ್ ಹೊರಸೂಸುವಿಕೆ ಪರಿಹಾರಗಳನ್ನು ಅರಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾರ್ವೇಜಿಯನ್ ಪೆಟ್ರೋಲಿಯಂ ಮತ್ತು ಇಂಧನ ಸಚಿವರಾದ ಟೀನಾ ಬ್ರೂ  ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರ ನಗದೀಕರಣ ಹೆಸರಿನಲ್ಲಿ ಸರ್ಕಾರಿ ಸ್ವತ್ತುಗಳನ್ನು ಮಾರುತ್ತಿದೆ: ಪಿ. ಚಿದಂಬರಂ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights