ಮರಿ ಮೇಕೆ ಮೇಲೆ ಮರಿ ಮಂಗನ ಸವಾರಿ : ಈ ಮುದ್ದಾದ ಮನಸ್ಸುಗಳಿಗೆ ಮನಸೋಲದವರಿಲ್ಲ..!
ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತಲೇ ಇರುತ್ತವೆ. ಅದರಲ್ಲೂ ಪ್ರಾಣಿಗಳ ಮುದ್ದಾದ ತುಂಟತನದ ವಿಡಿಯೋಗಳನ್ನ ನೋಡಿ ಜನ ಆನಂದಿಸುತ್ತಾರೆ. ಇಂಥಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗನೆ ವೈರಲ್ ಆಗುತ್ತವೆ. ಇಂಥದ್ದೇ ಒಂದು ಮುದ್ದು ಮುದ್ದಾದ ವಿಡಿಯೋವೊಂದು ನೆಟ್ಟಿಗರಿಗೆ ಮುದ ನೀಡಿದೆ. ಮರಿ ಮಂಗನೊಂದು ಮರಿ ಮೇಕೆಯ ಮೇಲೆ ಸವಾರಿ ಮಾಡಿದ ದೃಶ್ಯಕ್ಕೆ ಜನ ಮನಸೋತಿದ್ದಾರೆ. ಈ ಉಲ್ಲಾಸದ ವಿಡಿಯೋ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಆರಂಭದಲ್ಲಿ ಈ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ‘ಅನಿಮಲ್ಸ್ ಹೋಮ್’ ನಲ್ಲಿ ಹಂಚಿಕೊಳ್ಳಲಾಗಿತ್ತು. ನಂತರ ಹಲವಾರು ಜನ ಪ್ರಾಣಿ ಪ್ರೀಯರು ಈ ವಿಡಿಯೋವನ್ನು ಹಂಚಿಕೊಂಡಿದ್ಧಾರೆ. ಈ ದೃಶ್ಯ ಕಾಡಿನಲ್ಲಿ ಸೆರೆಯಾದಂತಿದೆ. ಬೆರ್ರಿಯನ್ನು ಹಿಡಿದುಕೊಂಡ ವ್ಯಕ್ತಿ ಮೇಕೆಯನ್ನು ಕೂಗುತ್ತಾನೆ. ಪೊದೆಯೊಳಗಿನಿಂದ ಮರಿ ಮೇಕೆ ಓಡಿ ಬರುತ್ತದೆ. ಆಶ್ಚರ್ಯಕರವೆಂದರೆ ಈ ಮರಿ ಮೇಕೆ ಜೊತೆ ಮರಿ ಮಂಗವೊಂದು ಜೋತು ಬಿದ್ದಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಮೇಕೆ ಕತ್ತಿಗೆ ಜೋತು ಬಿದ್ದ ಮರಿ ಮಂಗ ಬೆರ್ರಿ ತೆಗೆದುಕೊಂಡು ಮೇಕೆಯ ಮೇಲೇರಿ ಕುಳಿತು ತಿನ್ನತ್ತದೆ. ಮೇಕೆಯೋ ಬೆರ್ರಿಯನ್ನು ತಿನ್ನುತ್ತದೆ.
ಎರಡು ಪುಟ್ಟ ಪ್ರಾಣಿಗಳ ನಡುವಿನ ಅದ್ಭುತ ಸೌಹಾರ್ದತೆಯನ್ನು ತೋರಿಸುವ ಈ ವಿಡಿಯೋ ಟ್ವಿಟರ್ನಲ್ಲಿ 12 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಮತ್ತು 534,000 ಲೈಕ್ಗಳನ್ನು ಪಡೆದಿದೆ. ಇದನ್ನು 105,000 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ.
Am I high right now what is happening pic.twitter.com/itBaV1XUNK
— Kristi Yamaguccimane (@wapplehouse) September 26, 2021