ಗೋಡೆ ಕುಸಿತ: ಏಳು ತಿಂಗಳು ಮತ್ತು ಏಳು ವರ್ಷದ ಇಬ್ಬರು ಮಕ್ಕಳು ಸಾವು

ದುರಂತ ಘಟನೆಯೊಂದರಲ್ಲಿ, ಏಳು ತಿಂಗಳು ಮತ್ತು ಏಳು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಕೇರಳದ ಕರಿಪುರದಲ್ಲಿ ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ.

ಮನೆಯ ಮಲಗುವ ಕೋಣೆಯ ಗೋಡೆ ಕುಸಿದು ಅವರ ಮೇಲೆ ಬಿದ್ದಿದ್ದು, ಘಟನೆಯಲ್ಲಿ 7 ತಿಂಗಳ ಮಗು ಲುಬಾನಾ ಫಾತಿಮಾ ಮತ್ತು ಏಳು ವರ್ಷದ ಲಿಯಾನಾ ಫಾತಿಮಾ ಸಾವನ್ನಪ್ಪಿದ್ದಾರೆ. ಮಕ್ಕಳೊಂದಿಗೆ ಮಲಗಿದ್ದ ತಾಯಿ ಸುಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರೀ ಮಳೆಯಿಂದಾಗಿ ಮನೆಯ ಪಕ್ಕದ ಕಾಂಪೌಂಡ್ ಗೋಡೆ ಕುಸಿದಿದೆ. ಕುಸಿದ ಕಾಂಪೌಂಡ್ ಗೋಡೆ ಮಲಗುವ ಕೋಣೆಯ ಗೋಡೆಯ ಮೇಲೆ ಬಿದ್ದಿದೆ. ಹೀಗಾಗಿ, ಮಲಗುವ ಕೋಣೆಯ ಗೋಡೆಯೂ ಉರುಳಿದ್ದು, ಕೋಣೆಯಲ್ಲಿ ಮಲಗಿದ್ದ ಇಬ್ಬರೂ ಮಕ್ಕಳು ಸಾವನ್ನಪ್ಪಿದ್ದಾರೆ.

“ಭಾರೀ ಕಲ್ಲುಗಳು ಮತ್ತು ಮಣ್ಣು ಮಕ್ಕಳು ಮತ್ತು ತಾಯಿಯ ಮೇಲೆ ಬಿದ್ದಿವೆ. ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಮಯ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆಕೆಗೆ ಕುಟುಂಬ ಸದಸ್ಯರು ಪ್ರಥಮ ಚಿಕಿತ್ಸೆ ನೀಡಿದಾಗ ಪ್ರಜ್ಞೆ ಬಂದಿದೆ. ನಂತರ ಆಕೆಯನ್ನು ಕೋಯಿಕ್ಕೋಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆ ಈಗ ಸುರಕ್ಷಿತವಾಗಿದ್ದಾರೆ ಎಂದು” ಕರಿಪುರ ಸಬ್ ಇನ್ಸ್‌ಪೆಕ್ಟರ್ ಮುರಳೀಧರನ್ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಕರಿಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಕೆಲವು ಪ್ರದೇಶಗಳು ಕೂಡ ಮಳೆಗೆ ಜಲಾವೃತಗೊಂಡಿವೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಕೀಲ್ ಸಾಬ್ ಜಗದೀಶ್‌ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights