ಅರ್ಧಕ್ಕೆ ಉಳಿದುಹೋಗಿವೆ ಪುನೀತ್‌ ನಟನೆಯ ಸಾಲು ಸಾಲು ಸಿನಿಮಾಗಳು

ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗದ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಫಿಟೆಸ್ಟ್ ನಟರಾಗಿದ್ದ ಪುನೀತ್‌, ಸಾಲು ಸಾಲು ಸಿನಿಮಾಗಳನ್ನು ಹೊಂದಿದ್ದರು. ಅವೆಲ್ಲವೂ ಈಗ ಅರ್ಧಕ್ಕೆ ಉಳಿದುಹೋಗಿವೆ.

ಪುನೀತ್ ಪ್ರಸ್ತುತ ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಈ ಸಿನಿಮಾವನ್ನು ನಿರ್ದೇಶಕ ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದರು. ಇದು ಸಂಪೂರ್ಣ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಪುನೀತ್‌ ಈ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಜೇಮ್ಸ್ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಪ್ರಿಯಾ ಆನಂದ್ ಅವರ ನಾಯಕಿಯಾಗಿ ನಟಿಸಿದ್ದಾರೆ.

ಪುನೀತ್‌ ಅವರ ಮುಂದಿನ ಚಿತ್ರ ದ್ವಿತ್ವ ಸಿನಿಮಾ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಸೆಟ್ಟೇರಲಿತ್ತು. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ನೊಂದಿಗಿನ ಚಿತ್ರೀಕರಸಲಾಗುತ್ತಿತ್ತು.

ಅಲ್ಲದೆ, ಪುನೀತ್ ಅವರು ರಾಜಕುಮಾರ ಮತ್ತು ಯುವರತ್ನದಲ್ಲಿ ಕೆಲಸ ಮಾಡಿದ ಸಂತೋಷ್ ಆನಂದ್‌ ರಾಮ್‌ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡಲು ನಿರ್ಧರಿಸಿದ್ದರು.

ಪುನೀತ್‌ ಅವರು ನಿರ್ಮಿಸಿದ ಅವರ ಹೋಮ್ ಬ್ಯಾನರ್‌ನಲ್ಲಿ ಸುಮಾರು ಐದು ಚಿತ್ರಗಳನ್ನು ಹೊಂದಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights