ಲಂಡನ್‌ನಲ್ಲಿ 300 ಎಕರೆಯ ಎಸ್ಟೇಟ್‌ ಖರೀದಿಸಿದ ಅಂಬಾನಿ; ದೇಶ ಬಿಟ್ಟು ಹೋಗುವ ಯೋಜನೆ?

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಕುಟುಂಬ ಸಮೇತ ಲಂಡನ್‌ಗೆ ತೆರಳಿ ಅಲ್ಲಿಯೇ ವಾಸಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಲವು ಕಡೆಗಳಿಂದ ಕೇಳಿಬಂದಿತ್ತು. ಈ ಸುದ್ದಿಯನ್ನು ಅಲ್ಲಗಳೆದಿರುವ ರಿಲಯನ್ಸ್‌ ಗ್ರೂಪ್‌ ಇದು ‘ಆಧಾರ ರಹಿತ’ ಎಂದು ಹೇಳಿಕೆ ನೀಡಿದೆ.

ರಿಲಯನ್ಸ್‌ ಗ್ರೂಪ್‌, ಶುಕ್ರವಾರ ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಅಂಬಾನಿ ಸ್ಥಳಾಂತರದ ಉಹಾಪೂಹಗಳಿಗೆ ತೆರೆ ಎಳೆದಿದೆ. ಅಂಬಾನಿ ಮತ್ತು ಅವರ ಕುಟುಂಬವು, ’ಲಂಡನ್ ಅಥವಾ ಪ್ರಪಂಚದ ಬೇರೆಲ್ಲಿಗೂ ಸ್ಥಳಾಂತರಗೊಳ್ಳುವ ಅಥವಾ ವಾಸಿಸುವ ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಕಂಪನಿ ಹೇಳಿದೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ, ’ಅಂಬಾನಿ ಕುಟುಂಬವು ಲಂಡನ್‌ನ ಸ್ಟೋಕ್‌ ಪಾರ್ಕ್‌‌ನಲ್ಲಿ ಭಾಗಶಃ ವಾಸಿಸುವ ಯೋಜನೆಯಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದು, ಅನಗತ್ಯ ಮತ್ತು ಆಧಾರ ರಹಿತ ಉಹಾಪೋಹಗಳಿಗೆ ಕಾರಣವಾಗಿದೆ’ ಎಂದು ವರದಿಯಲ್ಲಿ ತಿಳಿಸಿತ್ತು.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 4,00,000 ಚದರ ಅಡಿ ವಿಸ್ತೀರ್ಣದ ಆಂಟಿಲ್ಲಾ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಸ್ಟೋಕ್ ಪಾರ್ಕ್‌ನ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ 300 ಎಕರೆ ಕಂಟ್ರಿ ಕ್ಲಬ್‌ ಅನ್ನು ಅಂಬಾನಿ ಕುಟುಂಬವು ತಮ್ಮ ಪ್ರಾಥಮಿಕ ನಿವಾಸವನ್ನಾಗಿ ಮಾಡುವ ನಿರೀಕ್ಷೆಯಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ಇದನ್ನೂ ಓದಿ: ಕೃಷಿ ಕಾಯಿದೆಗಳು ಮತ್ತು ಆದಾನಿ, ಅಂಬಾನಿಗಳ ಲಾಭಗಳು!

ರಿಲಯನ್ಸ್‌ ಸಮೂಹದ, ರಿಲಯನ್ಸ್‌ ಇಂಡಸ್ಟ್ರಿಯಲ್ ಇನ್‌ವೆಸ್ಟ್‌ಮೆಂಟ್‌ ಮತ್ತು ಹೋಲ್ಡಿಂಗ್ಸ್‌ ಲಿಮಿಟಡ್‌, ‘ಇತ್ತೀಚೆಗಷ್ಟೆ ಸ್ಟೋಕ್‌ ಪಾರ್ಕ್ ಎಸ್ಟೇಟ್‌ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪಾರಂಪರಿಕ ಸ್ಥಳದಲ್ಲಿ ಪ್ರಧಾನವಾಗಿ ಗಾಲ್ಫಿಂಗ್‌ ಮತ್ತು ಕ್ರೀಡಾ ರೆಸಾರ್ಟ್‌ ನಿರ್ಮಿಸುವ ಗುರಿಯನ್ನು ಹೊಂದಿದೆ. ಸ್ಥಳೀಯ ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಾ ಯೋಜನಾ ಮಾರ್ಗಸೂಚಿಗಳನ್ನು ತಯಾರಿಸಲಾಗುವುದು’ ಎಂದು ಗ್ರೂಪ್ ಸ್ಪಷ್ಟಪಡಿಸಿದೆ.

ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಅಂದಾಜು 84.5 ಬಿಲಿಯನ್ ಡಾಲರ್‌ಗಳಾಗಿದ್ದು, ಅವರು ವರ್ಷದ ಹಿಂದೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಚೀನಾದ ಜ್ಯಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ” ಎಂದು ಫೋರ್ಬ್ಸ್ ಹೇಳಿದೆ.

ಭಾರತದ ಆರ್ಥಿಕತೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕುಸಿಯುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಕೊರಾನಾ ಸಾಂಕ್ರಾಮಿಕದಿಂದ ಭಾರತದ ಆರ್ಥಿಕತೆ ಮತ್ತಷ್ಟು ಹದಗೆಟ್ಟಿದೆ. ಆದರೆ ಈ ಎರಡು ವರ್ಷಗಳಲ್ಲಿ ಮುಖೇಶ್ ಅಂಬಾನಿ ಆಸ್ತಿ ಮಾತ್ರ ನಿರಂತರ ಏರುಗತಿಯಲ್ಲಿದೆ. ಎಲ್ಲಾ ವಲಯಗಳು ನಷ್ಟಕ್ಕೀಡಾಗಿದ್ದರೂ ಅಂಬಾನಿ ಮತ್ತು ಗೌತಮ್ ಅದಾನಿ ಮಾತ್ರ ಹೇಗೆ ಲಾಭ ಮಾಡಲು ಸಾಧ್ಯ? ಸರ್ಕಾರದ ನೀತಿಗಳು ಜನರ ಪರವಾಗಿರುವ ಬದಲು ಇಂತಹ ಶ್ರೀಮಂತ ಉದ್ಯಮಿಗಳ ಪರವಾಗಿವೆ ಎಂಬ ಟೀಕೆಗಳು ಕೇಳಿಬಂದಿವೆ.

ಇದನ್ನೂ ಓದಿ: ಅಂಬಾನಿ ಮತ್ತು RSS ಸದಸ್ಯನಿಂದ 300 ಕೋಟಿ ಲಂಚ ಆಮಿಷ: ಮಾಜಿ ಗವರ್ನರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights