ಅರಬ್ಬೀ ಸಮುದ್ರದಲ್ಲಿ ಅವಘಡ; ಕಾರವಾರದಲ್ಲಿ ಹೊತ್ತಿ ಉರಿದ ಫಿಶಿಂಗ್ ಬೋಟ್‌!

ಅರಬ್ಬೀ ಸಮುದ್ರದ ದಡದಲ್ಲಿರುವ ಕಾರವಾರದ ಲೈಟ್ ಹೌಸ್ ಬಳಿ ಮೀನು ಹಿಡಿಯಲು ತೆರಳಿದ್ದ ಉಡುಪಿ ಮೂಲದ ಬೋಟೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ದೋಣಿ ಸಂಪೂರ್ಣ ಉರಿದು ಹೋಗಿದೆ. ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ಮಲ್ಪೆ ಮೂಲದ ವರದಾ ಹೆಸರಿನ (ನೋಂದಣಿ ಸಂಖ್ಯೆ IND KA 02 MM 4495) ದೋಣಿಯು ಕಾರವಾರದ ಲೈಟ್ ಹೌಸ್ ನಡುಗಡ್ಡೆಯಿಂದ 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಇಂಜಿನ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ಹೊತ್ತಿಕೊಂಡ ತಕ್ಷಣ ರಕ್ಷಣಾ ಸಿಬ್ಬಂದಿಯನ್ನು ಕಾರವಾರದ ‘ಸಿ 155’ ಗಸ್ತು ನೌಕೆಯಲ್ಲಿ ಕಳಿಸಿ, ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಬೆಂಕಿಯನ್ನು ನಂದಿಸಲಾಯಿತು. ರಕ್ಷಿಸಲಾದ ಎಲ್ಲ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಕಿ ಹೊತ್ತಿಕೊಂಡ ದೋಣಿಯನ್ನು ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ. ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.‌

Read aslo: ಬೈಕ್‌ನಲ್ಲಿ ನಿಮ್ಮ ಹಿಂಬದಿ ಸವಾರರು ಮಕ್ಕಳಾಗಿದ್ದರೆ ಕೆಲವು ನಿಯಮಗಳು ಕಡ್ಡಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights