ವಿಡಿಯೋ: ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟ ವರನಿಗೆ ಮಂಟಪದಲ್ಲೇ ಹಿಗ್ಗಾಮುಗ್ಗ ಥಳಿಸಿದ ಜನರು!

ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ವರನಿಗೆ ಮಧುವಿನ ಮನೆಯವರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ನಡೆದಿದೆ.

ಆಧುನಿಕ ಸಮಾಜದಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ಅತ್ಯಾಚಾರ, ದೌರ್ಜನ್ಯ, ಶೋಷಣೆಗಳು ವರದಿಯಾಗುತ್ತಲೇ ಇವೆ. ಮಾತ್ರವಲ್ಲದೆ, ಹೆಣ್ಣು ಭ್ರೂಣ ಹತ್ಯೆಗೂ ಇನ್ನೂ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಇದೆಲ್ಲದರ ಮಧ್ಯೆ ವರದಕ್ಷಿಣೆ ಕಿರುಕುಳಗಳೂ ನಿಂತಿಲ್ಲ.

ವರದಿಕ್ಷಿಣೆಯ ಆಧಾರದ ಮೇಲೆಯೇ ಗಂಡು-ಹೆಣ್ಣಿನ ಸಂಬಂಧವನ್ನು ಬೆಸೆಯುವ ಕೆಟ್ಟ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಇಂತದ್ದೇ ಘಟನೆಯಲ್ಲಿ ಸಾಹಿಬಾಬಾದ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿವಾಹವಾಗಬೇಕಿದ್ದ ವರನೊಬ್ಬ ಹೆಚ್ಚಿನ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ವಧುವಿನ ಕುಟುಂಬಸ್ಥರು ಮದುವೆ ನಡೆಯುತ್ತಿದ್ದ ಮಂಟಪದಲ್ಲಿಯೇ ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ..

ಘಟನೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ ಎನ್ನಲಾಗಿದೆ.

ಶೇರ್ವಾಣಿ ಧರಿಸಿ ಹಸೆಮಣೆ ಏರಬೇಕಿದ್ದ ಮಧು ಮಗ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ವಧುವಿನ ಕಡೆಯವರು ವರನನ್ನ ಮದುವೆ ಮಂಟಪದಲ್ಲಿ ಎಳೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೊನೆಗೆ ವರನನ್ನು ಆತನ ಸಂಬಂಧಿ ಎನ್ನಲಾದ ಮಹಿಳೆ ರಕ್ಷಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಆಗ್ರಾ ನಿವಾಸಿಯಾಗಿದ್ದ ಮುಝಮ್ಮಿಲ್ ಎಂದು ಹೇಳಲಾಗಿದೆ. ವರನ ತಂದೆ ವಧುವಿನ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿಗಳ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಬೇಡಿಕೆ ಈಡೇರಿಸದಿದ್ದರೆ ಮದುವೆ ರದ್ದು ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಹೀಗಾಗಿ ವಧುವಿನ ಕಡೆಯವರು ವರನಿಗೆ ಮೂರು ಲಕ್ಷ ರೂಪಾಯಿ ನಗದು ಒಂದು ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು..

ಇಷ್ಟಕ್ಕೆ ಸುಮ್ಮನಾಗದ ವರನ ಕಡೆಯವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಥಳಿಸಿದ್ದಾರೆ. ಅಲ್ಲದೆ ವರನಿಗೆ ಈ ಹಿಂದೆ 2-3 ಬಾರಿ ಮದುವೆಯಾಗಿದೆ ಎಂದು ಹುಡುಗಿ ಕಡೆಯವರು ಆರೋಪಿಸಿದ್ದಾರೆ.

Also Read: ಅಪ್ತಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: 13 ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights