Fact check: 2016ರ ಜಾಟ್ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಮಗುವಿನ ಎದೆಗೆ ಗುಂಡು ಹೊಡೆಯಲಾಗಿಲ್ಲ

2016 ರಲ್ಲಿ ಮೀಸಲಾತಿಗಾಗಿ ಹೋರಾಡುತ್ತಿದ್ದ ಜಾಟ್ ಸಮುದಾಯದ ಮಗುವಿನ ಎದೆಗೆ ಗುಂಡು ಹಾರಿಸಲಾಗಿದೆ ಎಂದು ಹೇಳುವ ಪೋಸ್ಟ್ ಜೊತೆಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೋಟೋದ ಸ್ಕ್ರೀನ್‌ಶಾಟ್‌ ಅನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಮಗುವಿನ ಫೋಟೋ YouTube ವೀಡಿಯೊದ ಥಂಬ್‌ಲೈನ್‌ನಲ್ಲಿ ಕಂಡುಬಂದಿದೆ. 10 ಏಪ್ರಿಲ್ 2016 ರಂದು ಅಪ್‌ಲೋಡ್ ಮಾಡಲಾದ YouTube ವೀಡಿಯೊವು ‘ಕಿಂಗ್‌ಡಮ್ ಆಫ್ ದಿ ಆಂಟ್ಸ್’ ಎಂಬ ಹೆಸರಿನ ಚಲನಚಿತ್ರವಾಗಿದೆ, ಇದು ‘ಪ್ಯಾಲೆಸ್ಟೀನಿಯನ್ ಗೆ’ ಸಂಬಂಧಿಸಿದಂತೆ ಚಾಕಿ ಮೆಜ್ರಿ ನಿರ್ದೇಶಿಸಿದ ಚಲನಚಿತ್ರವಾಗಿದೆ.  ಅಲ್ಬವಾಬ ಸುದ್ದಿ ಸಂಸ್ಥೆಯಲ್ಲಿ ಸಿನಿಮಾದ ಬಗ್ಗೆ ಪ್ರಕಟವಾದ ಲೇಖನದಲ್ಲಿ , “ಮಮ್ಲಕತ್ ಅಲ್-ನಮ್ಲ್” ಚಿತ್ರವು ಕುಟುಂಬವೊಂದು ಭೂಮಿಯಲ್ಲಿ ಜೀವಿಸಲು ಹೆಣಗಾಡುತ್ತಿರುವಾಗ ರಾತ್ರೋ ರಾತ್ರಿ ಅದನ್ನು ಕಿತ್ತುಕೊಳ್ಳಲಾಗುತ್ತದೆ ಎಂದು ಲೇಖನದಲ್ಲಿ ಸಿನಿಮಾ ಬಗ್ಗೆ ಬರೆಯಲಾಗಿದೆ. ವೈರಲ್ ಫೋಟೊ ಆ ಸಿನಿಮಾದದ್ದಾಗಿದೆ.

2016ರಲ್ಲಿ ಜಾಟ್ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಹರಿಯಾಣ ಅಕ್ಷರಶಃ ಬೆಂದುಹೋಗಿತ್ತು. ಪ್ರತಿಭಟನಾಕಾರರು ವಾಹನ, ಕಟ್ಟಡ, ಕಚೇರಿಗಳಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಸೇನೆಯ ಯೋಧರು ಅವರನ್ನು ಚದುರಿಸಲು ಗುಂಡು ಹಾರಿಸಬೇಕಾಯಿತು. ಆ ಹಿಂಸಾಚಾರದಲ್ಲಿ  ಐದು ಮಂದಿ ಗುಂಡಿಗೆ ಬಲಿಯಾಗಿ ಹಲವರು ಗಾಯಗೊಂಡಿದ್ದರು. ಭುಗಿಲೆದ್ದ ಮೀಸಲಾತಿ ಹೋರಾಟದ ಹಿಂಸೆಯನ್ನು ಕಂಡು ಅಲ್ಲಿನ ರಾಜ್ಯಸರ್ಕಾರ ಜಾಟರ ಬೇಡಿಕೆಯನ್ನು ಮನ್ನಿಸುವುದಾಗಿ ಘೋಷಿಸಿತ್ತು. ಓಬಿಸಿ ಕೋಟಾದಡಿ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಗೆ ಸರ್ಕಾರ ಅನಿವಾರ್ಯವಾಗಿ ಒಪ್ಪಬೇಕಾಯಿತು. ಆದರೆ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಫೋಟೋಗೂ ಜಾಟ್ ಹೋರಾಟಕ್ಕೂ ಸಂಬಂಧವಿಲ್ಲ.

ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿರುವ ಫೋಟೋ  2012 ರಲ್ಲಿ ಬಿಡುಗಡೆಯಾದ ‘ಮಮ್ಲಕತ್ ಅಲ್-ನಮ್ಲ್’ (ಇರುವೆಗಳ ಸಾಮ್ರಾಜ್ಯ) ಹೆಸರಿನ ಚಿತ್ರದ ಸ್ಕ್ರೀನ್‌ಶಾಟ್‌ನಿಂದ ಬಂದಿದ್ದು. ಈ ಸಿನಿಮಾವನ್ನು ಟ್ಯುನೀಷಿಯಾದ ಚೌಕಿ ಮೆಜ್ರಿ ಅವರು ‘ಪ್ಯಾಲೆಸ್ತೀನ್ ಘಟನೆ’ ಆಧರಿಸಿ ನಿರ್ದೇಶಿಸಿದಗ್ದಾರೆ ಎಂಬುದು ಫ್ಯಾಕ್ಟ್‌ಚೆಕ್ ಮೂಲಕ ತಿಳಿದು ಬಂದಿದೆ. ಇದು 2016 ಘಟನೆಗೆ ಸಂಬಂಧಿಸಿದ ಜಾಟ್ ಸಮುದಾಯದ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದ್ದಲ್ಲ. ಹಾಗಾಗಿ ಜಾಟ್ ಹೋರಾಟಕ್ಕೂ ವೈರಲ್ ಫೋಟೋಗೂ ಸಂಬಂಧವಿಲ್ಲ. ಆದ್ದರಿಂದ ಸಾಮಾಜಿಕ ಮಾದ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: Fact check: ಸಮಾಜವಾದಿ ಪಕ್ಷದ ರ್‍ಯಾಲಿಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆ ಕೂಗಿಲ್ಲ, ಇದು BJP ಹಬ್ಬಿಸಿದ ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights