Fact check: ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಫೋಟೊ ಎಡಿಟ್ ಮಾಡಿ ಸುಳ್ಳು ಸುದ್ದಿ ಹಂಚಿಕೆ

ಕರ್ನಾಟಕದ ಹೆಸರು ಸದ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ  ಕೇಳಿಬರುತ್ತಿದೆ. ಕಳೆದೊಂದು ತಿಂಗಳಿಂದ  ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶವನ್ನು ನಿರಾಕರಿಸಿದ್ದ ಕಾರಣಕ್ಕೆ ವಿವಾದ ಸೃಷ್ಟಿಯಾಗಿದ್ದು ಪ್ರಕರಣ ನ್ಯಾಯಾಲದಲ್ಲಿದೆ. ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಹಕ್ಕು ಎಂದು ಮುಸ್ಲಿಮರು ಪ್ರತಿಭಟಿಸಿದರೆ ಇದಕ್ಕೆ ಪ್ರತಿಯಾಗಿ ಬಲಪಂಥೀಯ ಸಂಘಟನೆಗಳು ಕೇಸರಿ ಶಾಲು ಧರಿಸಿ ಕಾಲೇಜು ಪ್ರವೇಶಿಸಲು ನಮಗೂ ಅವಕಾಶ ಕೊಡಬೇಕು ಎಂದು ತಗಾದೆ ತೆಗೆದು ಉಡುಪಿ – ಕುಂದಾಪುರಕ್ಕೆ ಸೀವಿತವಾಗಿದ್ದ ವಿವಾದವನ್ನು ಇಡೀ ರಾಜ್ಯದ ಸಮಸ್ಯೆಯನ್ನಾಗಿ ಮಾಡಿದ್ದಾರೆ.

ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೀಗಿರುವಾಗ ಸಾಮಾಜಿಕ ಮಾಧ್ಯಮಗಳಲ್ಲಿ ನಜ್ಮಾ ನಜೀರ್ ಎಂಬ ಸಾಮಾಜಿಕ ಕಾರ್ಯಕರ್ತೆಯ ಫೋಟೋಗಳನ್ನು ವೈರಲ್ ಮಾಡಲಾಗುತ್ತಿದೆ. ಈ ಫೋಟೋಗಳಲ್ಲಿ ನಜ್ಮಾ ಅವರು ಹಿಜಾಬ್ ಧರಿಸದೆ ಇರುವ ಫೋಟೋ ಶೇರ್ ಮಾಡುತ್ತ ನೋಡಿ ನಜ್ಮಾ ಹೊರಗಿದ್ದಾಗ ಹಿಜಾಬ್ ಧರಿಸುವುದಿಲ್ಲ ಆದರೆ ಕಾಲೇಜುಗಳಲ್ಲಿ ವಿವಾದವನ್ನು ಸೃಷ್ಟಿಸಲು ಹಾಗೂ  ತಮ್ಮ ಅಜೆಂಡಾಗಳನ್ನು ಜಾರಿ  ಮಾಡುವ ಸಲುವಾಗಿ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಭಾರತೀಯ ವಾಯುಪಡೆಯ ಅನುಭವಿ ಮತ್ತು ಐಐಎಂನ ಲಕ್ನೋದ ಹಳೆಯ ವಿದ್ಯಾರ್ಥಿ ಅನೂಪ್ ವರ್ಮಾ ಅವರು ನಜೀರ್ ಅವರ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್ 7,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ. ಆ ಟ್ವಿಟ್‌ನಲ್ಲಿ “ಆಕೆ ಕರ್ನಾಟಕದ ನಜ್ಮಾ ನಜೀರ್  ಅವಳು ಹಿಜಾಬ್ ಮತ್ತು ಬುರ್ಖಾ ಇಲ್ಲದೆ ಐಸ್ ಕ್ರೀಮ್ ಪಾರ್ಲರ್ ಮತ್ತು ಪಿಜ್ಜಾ ಅಂಗಡಿಗೆ ಹೋಗುತ್ತಾಳೆ. ಆದರೆ ಅಜೆಂಡಕ್ಕಾಗಿ ಶಾಲೆಯಲ್ಲಿ ಇವಳಿಗೆ ಹಿಜಾಬ್ ಬೇಕು” ಎಂದು ಬರೆದಿದ್ದಾರೆ.

https://twitter.com/FltLtAnoopVerma/status/1491090904043892736?ref_src=twsrc%5Etfw%7Ctwcamp%5Etweetembed%7Ctwterm%5E1491090904043892736%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fkarnataka-hijab-row-jds-member-najma-nazeers-photos-viral-with-misleading-claims%2F

ಹಲವಾರು ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳು ಇದೇ ಪೋಸ್ಟ್‌ಅನ್ನು  ಹಂಚಿಕೊಂಡಿವೆ. ಸಾಮಾಜಿಕ ಮಾಧ್ಯಮದ ಮಾನಿಟರಿಂಗ್ ಟೂಲ್, CrowdTangle  ಬಳಸಿಕೊಂಡು ಕನಿಷ್ಠ 60 ಪರಿಶೀಲಿಸಿದ ಖಾತೆಗಳು ಫೇಸ್‌ಬುಕ್‌ನಲ್ಲಿ ಇದನ್ನೆ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಶೇರ್ ಆಗಿರುವ ಬಹುತೇಕ ಅಕೌಂಟ್‌ಗಳು ಬಲಪಂಥೀಯ ಅಥವಾ ಹಿಂದುತ್ವದ ಪ್ರತಿಪಾದನೆ ಮಾಡುವ ಅಕೌಂಟ್‌ಗಳಾಗಿವೆ ಎನ್ನುವುದು ಗಮನಿಸಬೇಕಾದ ಅಂಶ.

ಫ್ಯಾಕ್ಟ್‌ಚೆಕ್:

ಯುವತಿ ನಜ್ಮಾ ನಜೀರ್  ಸದ್ಯ ಜನತಾ ದಳ (ಜಾತ್ಯತೀತ) ಕರ್ನಾಟಕದ ಸದಸ್ಯೆಯಾಗಿದ್ದಾರೆ. ಅವರು ಕಾಲೇಜು ವಿದ್ಯಾರ್ಥಿನಿ ಅಲ್ಲ. ಕಳೆದ ಎರಡು ವರ್ಷಗಳ ಹಿಂದೆ ಸುಳ್ಳು ಸುದ್ದಿ ವೆಬ್‌ಸೈಟ್ ಆದ “ಪೋಸ್ಟ್‌ಕಾರ್ಡ್ ನ್ಯೂಸ್ ಕನ್ನಡ” ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ನಜ್ಮಾ ಮತ್ತವರ ಸ್ನೇಹಿತೆ   ‘ವಂದೇ ಮಾತರಂ’ ಹಾಡನ್ನು ಹಾಡುವಂತೆ ಕೇಳುವ ವೀಡಿಯೊ ಬಾರಿ ವೈರಲ್ ಆಗಿತ್ತು. ನಂತರ ನಜ್ಮಾ ನಜೀರ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಾಗಿದ್ದರು ಎಂಬುದು ಗಮನಾರ್ಹ.

24 ವರ್ಷದ ನಜ್ಮಾ ನಜೀರ್ ಆಲ್ಟ್ ನ್ಯೂಸ್‌ನೊಂದಿಗೆ ಮಾತನಾಡಿದ್ದು, ಆಕೆಯ ವೈರಲ್ ಫೋಟೋಗಳು ಕಳೆದ ಎಂಟು ವರ್ಷಗಳಲ್ಲಿ ಬೇರೆ ಬೇರೆ ಸಮಯಗಳಲ್ಲಿ ತೆಗೆದುಕೊಳ್ಳಲಾಗಿದೆ. ಮತ್ತು ಫೇಸ್‌ಬುಕ್‌ನಲ್ಲಿ ಹಿಜಾಬ್‌ನಲ್ಲಿರುವ ಆಕೆಯ ಫೋಟೋ  ಪ್ರಸ್ತುತ ಇರುವ ಫೋಟೋ ಆಗಿದೆ ಎಂದರು.

“ ಸೋಷಿಯಲ್ ಮೀಡಿಯಾದಲ್ಲಿರುವ ವೈರಲ್‌ ಆಗುತ್ತಿರುವ ಪೋಸ್ಟ್  ದಾರಿ ತಪ್ಪಿಸುತ್ತಿದೆ ಎಂದಿದ್ದಾರೆ. ಏಕೆಂದರೆ ಸದ್ಯ ನಾನು ಶಾಲೆ ಅಥವಾ ಕಾಲೇಜು ವಿಧ್ಯಾರ್ಥಿಯಲ್ಲ, ನಾನು 2018 ರಲ್ಲಿ ಶೈಕ್ಷಣಿಕ ಪದವಿ ಮುಗಿಸಿದ್ದೇನೆ” ಎಂದು ಅವರು ಹೇಳಿದರು.

ನಜ್ಮಾ ಪೋಟೋವನ್ನು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಫೋಟೋ ಎಂದು ತಪ್ಪಾಗಿ ಹಂಚಿಕೆ

ಮೊನ್ನೆ ಮಂಡ್ಯದ ಕಾಲೇಜೊಂದರಲ್ಲಿ  ನಡೆದ ಘಟನೆಯಲ್ಲಿ ಮುಸ್ಕಾನ್ ಎಂಬ ವಿದ್ಯಾರ್ಥಿನಿಯು ಕಾಲೇಜು ಪ್ರವೇಶಿಸುವ ವೇಳೆ  ಕೇಸರಿ ಶಾಲು ಧರಿಸಿದ್ದ ಹಿಂದುತ್ವದ ಪ್ರತಿಪಾದನೆ ಸದಸ್ಯರು ಕೇಸರಿ ಶಾಲು ಧರಿಸಿ ವಿದ್ಯಾರ್ಥಿನಿಯ ಮುಂದೆ ಬಂದು ‘ಜೈ ಶ್ರೀರಾಮ್’  ಎಂದು ಘೋಷಣೆ ಹಾಕುತ್ತಾರೆ, ಅದನ್ನು ಏಕಾಂಗಿಯಾಗಿ ಎದುರಿಸುವ ಮುಸ್ಕಾನ್ ಎಂಬ ಹೆಣ್ಣು ಮಗಳು ‘ಅಲ್ಲಾವು ಅಕ್ಬರ್’ ಎಂದು ಸವಾಲು ಎಸೆಯುತ್ತಾಳೆ. ಈ ಘಟನೆ ವೇಳೆ ಅಲ್ಲಿ ಬಲಪಂಥಿಯರ ಗುಂಪಿಗೆ ಪ್ರತಿಯಾಗಿ ನಿಲ್ಲುವ ವಿದ್ಯಾರ್ಥಿನಿಯೂ ನಜ್ಮಾ ನಜೀರ್ ಎಂದು ಬಲಪಂಥಿಯ ಪ್ರತಿಪಾದನೆಯ ಫೇಸ್ ಬುಕ್ ಪೇಜ್ ಮತ್ತು ಫೇಸ್‌ಬುಕ್ ಅಕೌಂಟ್‌ಗಳಿಂದ ಪೋಸ್ಟ್‌ ಮಾಡಿದ್ದಾರೆ. ಇದನ್ನು ಕೂಡ ತಪ್ಪಾಗಿ ಹಂಚಿಕೊಂಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಮತ್ತು ಸೋನಿಯಾ ಚಾವ್ಲಾ ಸೇರಿದಂತೆ ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

(ಮಂಡ್ಯದ ಕಾಲೇಜಿನಲ್ಲಿ ಪ್ರತಿರೋದವೊಡ್ಡಿದ ವಿದ್ಯಾರ್ಥಿ ಮುಸ್ಕಾನ್ ಮೇಲಿನ ಫೋಟೋ)

ನಜ್ಮಾ ನಜೀರ್ ಸದ್ಯ ಜೆಡಿ(ಎಸ್) ಕರ್ನಾಟಕ ರಾಜ್ಯ ಸಮಿತಿಯ ಪದಾಧಿಕಾರಿಯಾಗಿದ್ದು “ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ  ನಾನು ಬೆಂಬಲವಾಗಿದ್ದೇನೆ. ಆದರೆ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿ ನಾನೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವುದು ತಪ್ಪಾಗಿದೆ, ನಿಜವಾಗಿಯೂ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗೆ ಮಾಡಿದ ಅವಮಾನ ಮಾಡಿದಂತಾಗುತ್ತದೆ ಎಂದಿದ್ದಾರೆ.

ನಜ್ಮಾ ನಜೀರ್‌ರವರ ಎಡಿಟ್  ಮಾಡಿದ ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ. ಹುಡುಗಿಯೊಬ್ಬಳು ಗೋಡೆಯೊಂದಕ್ಕೆ ಹೊರಗಿ ಪೋಸ್ ನೀಡುತ್ತಿರುವ ಫೋಟೋವನ್ನು ‘ನಮ್ಮ ತುಳುನಾಡು ಟ್ರೋಲ್’ ಎಂಬ ಫೇಸ್ ಬುಕ್ ಪೇಜ್ ಶೇರ್ ಮಾಡಿದೆ. ನಂತರ ಅದನ್ನು ತೆಗೆಯಲಾಗಿದೆ. ಆದರೆ ಗ್ರಾಫಿಕ್ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಟ್ವಿಟರ್ ಬಳಕೆದಾರ @AmansurajGuru ಗ್ರಾಫಿಕ್ ಅನ್ನು ಪೋಸ್ಟ್ ಮಾಡಿದ್ದಾರೆ.

ಗೌರವ್ ಶರ್ಮಾ ಎಂಬುವವರು ನಜ್ಮಾ ನಜೀರ್ ಅವರ ಇತರ ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ.

https://twitter.com/IamGmishra/status/1491449598313111552?ref_src=twsrc%5Etfw%7Ctwcamp%5Etweetembed%7Ctwterm%5E1491449598313111552%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fkarnataka-hijab-row-jds-member-najma-nazeers-photos-viral-with-misleading-claims%2F

ನಜ್ಮಾ ನಜೀರ್ ಮಾತನಾಡಿ, “ಈ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ನಾನು ಈ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ರಿಪೋರ್ಟ್ ಮಾಡಿದ್ದೇನೆ ಮತ್ತು ಅವರು ಅದನ್ನು ತೆಗೆದುಹಾಕಿರುವಂತೆ ತೋರುತ್ತಿದೆ ಎಂದಿದ್ದಾರೆ.

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ  ಫೋಟೋಶಾಪ್  ಮಾಡಿರು ಮೂಲ ಇಮೇಜ್ ಲಭ್ಯವಾಗಿದ್ದು  @beauty19smale ಅವರ ಟ್ವೀಟ್ ಕೂಡ ಲಭ್ಯವಾಗಿದೆ. ಫೋಟೋದಲ್ಲಿರುವ ಮಹಿಳೆ ತಾನ್ಯಾ ಜೆನಾ, ಸೋಶಿಯಲ್ ಮೀಡಿಯಾ ಪರ್ಸನಾಲಿಟಿ ಎಂಬುದಾಗಿ ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಹಾಗಾಗಿ ಇಲ್ಲಿ ತಾನ್ಯಾ ಜೈನಾ ಅವರ ಫೋಟೋಗೆ ಜೆಡಿ(ಎಸ್) ಕಾರ್ಯಕರ್ತೆ ನಜ್ಮಾ ನಜೀರ್ ಅವರ ಫೋಟೋವನ್ನು ಎಡಿಟ್ ಮಾಡುವ ಮೂಲಕ ತಪ್ಪಾಗಿ ಹಂಚಿಕೊಂಡಿದ್ದಾರೆ.

https://twitter.com/beauty19smale/status/1255888479034187777?t=AZcSE6f79RNiISV_17FtSA&s=19

ಒಟ್ಟಾರೆಯಾಗಿ ಹೇಳುವುದಾದರೆ ಇಷ್ಟೆಲ್ಲಾ ಪೋಟೋಗಳನ್ನು ಹಿಂದುತ್ವ ಪ್ರತಿಪಾದಕರು ಹಾಗೂ ಬಲಪಂಥಿಯ ಅನುಯಾಯಿಗಳು ಮಂಡ್ಯದ ವಿದ್ಯಾರ್ಥಿನಿಯ ಫೋಟೋದೊಂದಿಗೆ ನಜ್ಮಾ ನಜೀರ್ ಅವರ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳುವುದರ ಜೊತೆಗೆ ರೂಪದರ್ಶಿ  ತಾನ್ಯಾ ಜೈನಾ,  ಪೋಟೋವನ್ನು ಎಡಿಟ್ ಮಾಡಿ ಅದಕ್ಕೆ ನಜ್ಮಾ ನಜೀರ್ ಅವರ ಫೋಟೋವನ್ನು ಸೇರಿಸಿ ಸಾಮಾಜಿಕ ಮಾದ್ಯಮಗಳಲ್ಲಿ ತಪ್ಪಾಗಿ ಹಂಚಿಕೊಂಡು ವಿಕೃತಿ ಮೆರೆದಿದ್ದಾರೆ.


ಇದನ್ನು ಓದಿರಿ: Fact check: ಹರಿಹರದಲ್ಲಿ ಮುಸ್ಲಿಮರು “ಪಾಕಿಸ್ತಾನ್ ಜಿಂದಾಬಾದ್” ಘೊಷಣೆ ಕೂಗಿಲ್ಲ, ಇದು ಬಲಪಂಥೀಯರು ಸೃಷ್ಟಿಸಿದ ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights