Fact check: ವಿದ್ಯಾರ್ಥಿನಿ ಮುಸ್ಕಾನ್ ಫೋಟೋ ಬುರ್ಜ್ ಖಲೀಫಾದಲ್ಲಿ ಪ್ರಸಾರ ಮಾಡಿಲ್ಲ
ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಹಾಜರಾಗದಂತೆ ಹಲವಾರು ಕಾಲೇಜುಗಳು ನಿರ್ಬಂಧಿಸಿದ್ದರಿಂದ ಕರ್ನಾಟಕ ರಾಜ್ಯವು ಕಳೆದ ಹಲವು ವಾರಗಳಿಂದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ನಿಷೇಧದ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಂತೆ, ಹಲವಾರು ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿ ಸಮಸ್ಯೆ ಉಲ್ಬಣವಾಗುವಂತೆ ಮಾಡಿದ್ದವು.
ಈ ಪ್ರತಿಭಟನೆಗಳ ನಡುವೆಯೇ ಇತ್ತೀಚೆಗೆ ಮಂಡ್ಯದ ಪಿಇಎಸ್ ಕಾಲೇಜಿನ ವಿಡಿಯೋವೊಂದು ವೈರಲ್ ಆಗಿದ್ದು, ಕೇಸರಿ ಶಾಲು ಹೊದ್ದುಕೊಂಡಿದ್ದ ವ್ಯಕ್ತಿಗಳ ಗುಂಪೊಂದು ಬುರ್ಖಾ ಧರಿಸಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿನಿಯನ್ನು ದಬಾಯಿಸಲು ಯತ್ನಿಸಿದ ಘಟನೆ ನಡೆದಿತ್ತು. ಪುಂಡರ ಗುಂಪೊಂದು ‘ಜೈ ಶ್ರೀ ರಾಮ್’ ಎಂದು ಕೂಗುವ ಮೂಲಕ ಆಕೆಯ ಬಳಿಗೆ ಬಂದರು ಮತ್ತು ಕಾಲೇಜಿಗೆ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿದರು ಆದರೆ ಆ ವಿದ್ಯಾರ್ಥಿನಿಯು ‘ಅಲ್ಲಾ-ಹು-ಅಕ್ಬರ್’ ಎಂದು ಕೂಗುತ್ತ ತನ್ನ ಪ್ರತಿರೋದ ವ್ಯಕ್ತಪಡಿಸಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು ಆ ವಿದ್ಯಾರ್ಥಿನಿಯ ಹೆಸರು ಬೀಬಿ ಮುಸ್ಕಾನ್ ಖಾನ್.
#KarnatakaHijabRow when a #hijabi student arrives at PES college in #Mandya. She gets heckled by students wearing #saffronshawls chanting #JaiSriRam. She raises her hand says "#AllahuAkbar befor being escorted by college staff. Video courtesy: Digvijaya News. #Karnataka pic.twitter.com/l17IL095Bv
— Imran Khan (@KeypadGuerilla) February 8, 2022
ಮುಸ್ಕಾನ್‌ನ ಪ್ರತಿರೋದದ ಸಂದರ್ಭವನ್ನು,ಆಕೆಯ ಧೈರ್ಯವನ್ನು ಪ್ರಶಂಸಿಸಲು ಮುಸ್ಕಾನ್‌ನ ಶೌರ್ಯಕ್ಕೆ ಸೆಲ್ಯೂಟ್ ಮಾಡಲು ದುಬೈನಲ್ಲಿರುವ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಮುಸ್ಕಾನ್ ಹೆಸರನ್ನು ‘ಎಲ್ಇಡಿ’ ಬೆಳಕಿನಲ್ಲಿ ಪದಸಾರ ಮಾಡಲಾಗಿದೆ ಎಂದು ಹೇಳುವ ವೀಡಿಯೊ ಈಗ ಪ್ರಸಾರವಾಗುತ್ತಿದೆ.. ಈ ವಿಡಿಯೋ ಫೇಸ್ ಬುಕ್ ನಲ್ಲಿ ಭಾರೀ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್:
ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಮತ್ತು ನಮ್ಮ ಗಮನಕ್ಕೆ ಬಂದ ಮೊದಲ ವಿಷಯವೆಂದರೆ “ಮುಸ್ಕಾನ್” ನ ಎಂಬ ಇಂಗ್ಲಿಷ್ ಅಕ್ಷರಗಳಲ್ಲಿ ತಪ್ಪಾಗಿರುವುದನ್ನು ಗಮನಿಸಬಹುದು. ವೈರಲ್ ವೀಡಿಯೊದಲ್ಲಿ, ಹೆಸರನ್ನು “ಮುಸ್ಕಹಾನ್” ಎಂದು ತಪ್ಪಾಗಿ ಬರೆಯಲಾಗಿದೆ. ಮುಸ್ಕಾನ್‌ಗಾಗಿ ಬುರ್ಜ್ ಖಲೀಫಾ ಬೆಳಗಿದ್ದರೆ, ಸಂಘಟಕರು ಈ ದೊಡ್ಡ ತಪ್ಪು ಮಾಡುವ ಸಾಧ್ಯತೆ ಕಡಿಮೆ.
ವೈರಲ್ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ TikTok ಲೋಗೋ ಮತ್ತು @md.mahinkhan60 ಬಳಕೆದಾರ ಹೆಸರು ಇರುದನ್ನು ಗಮನಿಸಿದ್ದೇವೆ. ಹಂಚಲಾದ ಬಹುತೇಕ ಎಲ್ಲಾ ವೀಡಿಯೊಗಳು ಈ ಬಳಕೆದಾರ ಹೆಸರನ್ನು ಹೈಲೆಟ್ ಆಗಿವೆ. ಇದನ್ನು ಸುಳಿವಿನಂತೆ ಬಳಸಿಕೊಂಡು TOR ಬ್ರೌಸರ್‌ನ ಸಹಾಯದಿಂದ ಟಿಕ್‌ಟಾಕ್‌ನಲ್ಲಿ ಮೂಲ ವೀಡಿಯೊವನ್ನು ಸರ್ಚ್ ಮಾಡಿದ್ದೇವೆ . ಮೂಲ ವೀಡಿಯೊ ಹೆಚ್ಚಿನ ರೆಸಲ್ಯೂಶನ್ ಹೊಂದಿದೆ ಮತ್ತು ವೀಡಿಯೊವನ್ನು ಎಡಿಟ್ ಮಾಡಿರುವುದನ್ನು ಗಮನಿಸಬಹದು.

ಬುರ್ಜ್ ಖಲೀಫಾದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಸಹ ಪರಿಶೀಲಿಸಲಾಗಿದ್ದು ಅದರಲ್ಲಿ ಚೀನಾ ಹೊಸ ವರ್ಷದ ಸಂದರ್ಭದಲ್ಲಿ ಸಂಭ್ರಮಾಜರಣೆಯ ಉದ್ದೇಶಕ್ಕಾಗಿ ಬೆಳಗಿಸಿದ್ದು ಬಿಟ್ಟರೆ ಮತ್ತೆ ಅಲ್ಲಿ ಯಾವುದೇ ಇವೆಂಟ್ ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
“ಮುಸ್ಕಾನ್” ಎಂಬ ಹೆಸರು ಕಟ್ಟಡದ ಮೇಲೆ ಬೆಳಗಿದಂತೆ ಕಾಣುತ್ತಿಲ್ಲ, ಬದಲಾಗಿ, ಅದು ಕಟ್ಟಡದ ಮುಂದೆ ಹಾರುತ್ತಿರುವಂತೆ / ಸುಳಿದಾಡುತ್ತಿರುವಂತೆ ತೋರುತ್ತಿದೆ. ಕಾರಂಜಿ ನೀರು ಮೇಲಕ್ಕೆ ಹೋದಾಗ ಮುಸ್ಕಾನ್ ಅವರ ಫೋಟೋ ಕಟ್ಟಡದಿಂದ ಹೊರಗೆ ಚಲಿಸುವಂತೆ ಕಾಣುತ್ತದೆ. ವೀಡಿಯೊ ನಿಂತಾಗ, ಕಟ್ಟಡವು ಕಣ್ಮರೆಯಾಗುತ್ತದೆ ಆದರೆ “ಮುಸ್ಕಹಾನ್” ಎಂಬ ಹೆಸರು ಪರದೆಯ ಮೇಲೆ ಮಿನುಗುತ್ತಲೇ ಇರುತ್ತದೆ. ಇದು ಎಡಿಟೆಡ್ ವೀಡಿಯೊ ಎಂದು ಸಾಬೀತುಪಡಿಸುತ್ತದೆ.
#BurjKhalifa welcomes the #ChineseNewYear! Catch the special LED and laser show dedicated to the Lunar New Year every evening till February 4th at 7:45 & 9:45 pm. pic.twitter.com/6osYiZZWFL
— Burj Khalifa (@BurjKhalifa) January 31, 2022
ಹಾಗಾಗಿ ಕೇಸರಿ ಗುಂಪಿನ ವಿರುದ್ಧ ಸೆಟೆದು ನಿಂತಿದ್ದ ವಿದ್ಯಾರ್ಥಿನಿ ಮುಸ್ಕಾನ್ ಅವರ ಧೈರ್ಯವನ್ನು ಗೌರವಿಸಲು ಬುರ್ಜ್ ಖಲೀಫಾದ ಕಟ್ಟಡದ ಮೇಲೆ ಮುಸ್ಕಾನ್ ಅವರ ಹೆಸರು ಮತ್ತು ಫೋಟೋವನ್ನು ಬೆಳಗಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಂಡಿದ್ದಾರೆ.
ಇದನ್ನು ಓದಿರಿ: Fact check: ಉಡುಪಿ ಕಾಲೇಜಿನಲ್ಲಿ ಕೇಸರಿ ಶಾಲು, ಪೇಟ ಹಂಚಿದ್ದು ಮುಸ್ಲಿಮರಲ್ಲ, ಹಿಂದುತ್ವವಾದಿಗಳು

