Fact check: 2008ರ ಸರಣಿ ಬಾಂಬ್ ಸ್ಪೋಟ ಪ್ರಕರಣ ‘ಸಮಾಜವಾದಿ ಪಕ್ಷದ’ ಕೈವಾಡ ಎಂದು ತಪ್ಪಾಗಿ ಬಿಂಬಿಸಿದ ಮೋದಿ

ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಚುನಾವಣಾ ಪ್ರಚಾರ ಜೋರಾಗಿದೆ. BJP ಮತ್ತು SP ಬಿರುಸಿನ ಪ್ರಚಾರ ಮಾಡುತ್ತಿವೆ.  ಭಾನುವಾರ (ಫೆಬ್ರವರಿ 20) ಬಿಜೆಪಿ  ಸಭೆಯನ್ನುದ್ದೇಶಿಸಿ ಮಾತನಾಡಿರುವ ನರೇಂದ್ರ ಮೋದಿ , 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಅಪರಾಧಿಗಳಾಗಿರುವ 49 ಜನರನ್ನು ಉಲ್ಲೇಖಿಸಿ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯ ಸೈಕಲ್ ಅನ್ನು ಭಯೋತ್ಪಾದಕರಿಗೆ ಹೋಲಿಸುವ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷದವರು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

“ಇಂದು ನಾನು ಇದನ್ನು ಪ್ರಸ್ತಾಪಿಸುತ್ತಿದ್ದೇನೆ ಏಕೆಂದರೆ ಕೆಲವು ರಾಜಕೀಯ ಪಕ್ಷಗಳು ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತೋರುತ್ತಿವೆ. ಎರಡು ರೀತಿಯಲ್ಲಿ ಸ್ಫೋಟಗಳನ್ನು ನಡೆಸಲಾಯಿತು. ಮೊದಲನೆಯದು ನಗರದ 50-60 ಸ್ಥಳಗಳಲ್ಲಿ ಮತ್ತು ಎರಡು ಗಂಟೆಗಳ ನಂತರ, ಆಸ್ಪತ್ರೆಯ ವಾಹನದಲ್ಲಿ ಸ್ಫೋಟ ಸಂಭವಿಸಿತು, ಅದರಲ್ಲಿ ಸಂಬಂಧಿಕರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಗಾಯಗೊಂಡವರನ್ನು ನೋಡಲು ಅಲ್ಲಿಗೆ ಹೋಗುತ್ತಿದ್ದರು. ಆ ಸ್ಫೋಟದಲ್ಲಿ ಅನೇಕ ಜನರು ಸತ್ತರು” ಎಂದು ಮೋದಿ ತಿಳಿಸಿದ್ದಾರೆ.

“ಆರಂಭಿಕ ಸ್ಫೋಟಗಳಲ್ಲಿ, ಬಾಂಬ್‌ಗಳನ್ನು ಸೈಕಲ್‌ಗಳ ಮೇಲೆ ಇರಿಸಲಾಗಿತ್ತು. ಅವರು (ಭಯೋತ್ಪಾದಕರು) ಬಾಂಬ್ ಇಡಲು  ಸೈಕಲ್‌ಗಳನ್ನು ಏಕೆ ಆರಿಸಿಕೊಂಡರು ಎಂದು ನನಗೆ ಆಶ್ಚರ್ಯವಾಗುತ್ತಿದೆ” ಎಂದು ಪ್ರಧಾನಿ ಹೇಳಿದ್ದಾರೆ. ಅಷ್ಟೇ ಅಲ್ಲ, 2006ರಲ್ಲಿ ವಾರಣಾಸಿ ಮತ್ತು 2007ರಲ್ಲಿ ಅಯೋಧ್ಯೆ ಮತ್ತು ಲಖನೌ ಸ್ಫೋಟದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಸಮಾಜವಾದಿ ಪಕ್ಷ ಹಿಂಪಡೆದಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

“ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಾಯಕರ ವರ್ತನೆ ಅಪಾಯಕಾರಿಯಾಗಿದೆ. ಈ ಜನರು ಒಸಾಮಾ (ಬಿನ್ ಲಾಡೆನ್) ನಂತಹ ಭಯೋತ್ಪಾದಕನನ್ನು ಜೀ (ಗೌರವಾನ್ವಿತ) ಎಂದು ಕರೆಯುತ್ತಾರೆ. ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಸಾವಿನ ಬಗ್ಗೆ ಈ ಜನರು ಕಣ್ಣೀರು ಹಾಕಿದರು. ಅಂತಹವರ ಬಗ್ಗೆ ಮತ್ತು ರಾಜಕೀಯ ಪಕ್ಷಗಳ ಬಗ್ಗೆ ನಾವು ಎಚ್ಚರದಿಂದಿರಬೇಕು, ಅವರು ಕುರ್ಚಿಗಾಗಿ ದೇಶವನ್ನು ಪಣಕ್ಕಿಟ್ಟು,  ದೇಶದ ಭದ್ರತೆಯೊಂದಿಗೆ ಆಟವಾಡುತ್ತಾರೆ ಎಂದಿದ್ದಾರೆ.

ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿರುವಂತೆ 2008 ರ ಗುಜರಾತ್ ನ ಅಹಮದಾಬಾದ್ ಸ್ಪೋಟ ಪ್ರಕರಣದಲ್ಲಿ ಸಮಾಜವಾದಿ ಪಕ್ಷ ಭಾಗಿಯಾಗಿತ್ತೆ? ಒಂದು ವೇಳೆ ಸಮಾಜವಾದಿ ಪಕ್ಷದವರ ಮೇಲೆ ಆರೋಪ ಕೇಳಿ ಬಂದಿದ್ದರೆ ಅವರ ಕೈವಾಡ ಇರುವುದು ನಿಜವೇ ಆಗಿದ್ದರೆ  ಅವರ ಮೇಲೆ ಕೇಸ್ ದಾಖಲಿಸಬಹುದಾಗಿತ್ತಲ್ಲವೆ?

ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಆರೋಪ ಸುಳ್ಳಾಗಿದ್ದು ಕೇವಲ ಚುನಾವಣಾ ಪ್ರಚಾರಕ್ಕಾಗಿ ಈ ರೀತಿ ಮಾತನಾಡಿದ್ದರೆ ಅದು ಅಕ್ಷಮ್ಯ, ಒಂದು ದೇಶದ ಪ್ರಧಾನಿಯಾಗಿ ಉನ್ನತ ಸ್ಥಾನದಲ್ಲಿದ್ದು ಈ ರೀತಿ ಸುಳ್ಳು ಸುಳ್ಳು ಆರೋಪಗಳನ್ನು ಮಾಡುವುದು ಸರಿಯೇ ?  ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು ದೇಶದ ಭದ್ರತೆಯ ವಿಚಾರದಲ್ಲಿ ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುವುದು ಸರಿಯಲ್ಲ ಎಂದು ದೇಶದ ಜನ ಸಾಮಾನ್ಯ ಪ್ರಶ್ನೆ ಮಾಡುತ್ತಿದ್ದಾನೆ. ಮೋದಿಯವರು ಮಾಡುತ್ತಿರುವ ಆರೋಪದಂತೆ ಸಮಾಜವಾದಿ ಪಕ್ಷ ಭಯೋತ್ಪಾದಕರಿಗೆ ಬೆಂಬಲ ನೀಡಿತ್ತೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

“ಭಯೋತ್ಪಾದಕರು ಸೈಕಲ್ ಆಯ್ಕೆ ಮಾಡುತ್ತಾರೆ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಿರುಗೇಟು ನೀಡಿದ್ದಾರೆ.

“ಸೈಕಲ್ ಅನ್ನು ಅವಮಾನಿಸುವುದು ಇಡೀ ದೇಶಕ್ಕೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ. ಪ್ರಧಾನಿಯವರ ದಾಳಿಗೆ ಪ್ರತಿಕ್ರಿಯೆಯಾಗಿ, ಅಖಿಲೇಶ್ ಅವರು ತಮ್ಮ ಪಕ್ಷದ ಚುನಾವಣಾ ಚಿಹ್ನೆಯ ಸೈಕಲ್‌ ಬಗ್ಗೆ ಹಿಂದಿಯಲ್ಲಿ ಕವಿತೆಯನ್ನು ಬರೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ, “ಅದು ಸಾಮಾನ್ಯ ಮನುಷ್ಯನ ಸವಾರಿ ಮತ್ತು ಹಳ್ಳಿಗಳ ಹೆಮ್ಮೆ” ಎಂದು ವಿವರಿಸಿದ್ದಾರೆ.

 

 “ಕೃಷಿ ಮತ್ತು ರೈತನನ್ನು ಸಂಪರ್ಕಿಸುವ ಮೂಲಕ, ಅವನ ಏಳಿಗೆಗೆ ಅಡಿಪಾಯ ಹಾಕುತ್ತದೆ ನಮ್ಮ ಸೈಕಲ್,

ಸಾಮಾಜಿಕ ಬಂಧಗಳನ್ನು ಮುರಿದು ಹುಡುಗಿಯನ್ನು ಶಾಲೆಗೆ ಬಿಡುತ್ತದೆ ನಮ್ಮ ಸೈಕಲ್,

ಹಣದುಬ್ಬರವು ಅದರ ಮೇಲೆ ಪರಿಣಾಮ ಬೀರುವುದಿಲ್ಲ, ನಾಗಾಲೋಟದಲ್ಲಿ ಓಡುತ್ತದೆ ನಮ್ಮ ಸೈಕಲ್,

ಸೈಕಲ್ ಸಾಮಾನ್ಯ ಜನರ ವಿಮಾನ, ಗ್ರಾಮೀಣ ಭಾರತದ ಹೆಮ್ಮೆ, ಸೈಕಲ್ ಅವಮಾನ ಇಡೀ ದೇಶಕ್ಕೆ ಅಪಮಾನ ಎಂದಿದ್ದಾರೆ.

2008 ರಲ್ಲಿ ಗುಜರಾತ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮತ್ತು ಸಿಮಿ ಉಗ್ರ ಸಂಘಟನೆ ಕೈವಾಡವಿದೆ ಎಂದು ಹೆಳಲಾಗಿದೆ. ಸ್ಪೋಟ ಸಂಭವಿಸಿದ ಹಲವು ಕಡೆ ಕಾರು, ಬೈಕ್, ಆಸ್ಪತ್ರೆ ವಾಹನಗಳಲ್ಲಿ ಮತ್ತು ಸೈಕಲ್‌ಗಳಲ್ಲಿ ಸ್ಪೋಟಕಗಳನ್ನು ಇರಿಸಿ ಸ್ಪೋಟಿಸಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವಂತೆ ‘ಸಮಾಜವಾದಿ ಪಕ್ಷದ’ ಚಿಹ್ನೆ ಸೈಕಲ್‌ನಲ್ಲಿ ಮಾತ್ರ ಬಾಂಬ್ ಸ್ಪೋಟಿಸಲಾಗಿದೆ ಎಂಬುದು ನಿಜವಲ್ಲ. ಈ ಕೃತ್ಯದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಚುನಾವಣಾ ಸಂದರ್ಭವನ್ನು ಬಳಸಿಕೊಂಡು ಈ ರೀತಿ ಸುಳ್ಳು ಹೇಳುವ ಮೂಲಕ ರಾಜಕಾರಣಕ್ಕೆ ಕೈಹಾಕಿದೆ.

ಸಮಾಜವಾದಿ ಪಾರ್ಟಿಯ ಚಿಹ್ನೆ ‘ಸೈಕಲ್’ ಗುರುತು ಇದನ್ನೆ ಅಸ್ತ್ರವಾಗಿ ಬಳಸಿಕೊಂಡು BJP ಪಕ್ಷವು ಜನರಿಗೆ ಸುಳ್ಳು ಹೇಳುವ ಮೂಲಕ ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿದೆ ಎಂದು  ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

ಉತ್ತರ ಪ್ರದೇಶದ ಚುನಾವಣಾ ಪಲಿತಾಂಶ ದೇಶದ ರಾಜಕೀಯ ದಿಕ್ಸೂಚಿ ಎಂದು ಹೇಳಲಾಗುತ್ತಿದ್ದು, ನಂತರ ಏನೆಲ್ಲ ಬೆಳವಣಿಗೆಗೆ ದೇಶ ಸಾಕ್ಷಿಆಗಲಿದೆ ಎಂಬುದನ್ನು ನೋಡಬೇಕೆಂದರೆ ಮಾರ್ಚ್ 10 ರ ವರೆಗೆ ಕಾಯಬೇಕಿದೆ.


ಇದನ್ನು ಓದಿರಿ:Fact Check: ಅಖಿಲೇಶ್ ಯಾದವ್ ತನ್ನನ್ನು ‘ರಾವಣ’ನಿಗೆ ಹೋಲಿಸಿ ಟ್ವೀಟ್ ಮಾಡಿದ್ದು ನಿಜವೇ?


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights