Fact check: ಉತ್ತರ ಪ್ರದೇಶದಲ್ಲಿ BJP ಅಧಿಕಾರಕ್ಕೆ ಬರುತ್ತಿದಂತೆ ಕೋಮು ಸಂಘರ್ಷ ಪ್ರಾರಂಭವಾಗಿದೆಯೆ?

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ತನ್ನ ಅಧಿಕಾರವನ್ನ ಮರಳಿ ಪಡೆದಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಲು ಪ್ರಾರಂಭಿಸಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.  ಒಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಯ ಮುಂದೆಯೇ ಇನ್ನೊಬ್ಬನನ್ನು ಥಳಿಸುವ ಒಂದು ನಿಮಿಷದ ವಿಡಿಯೋವನ್ನ ಸಮಾಜವಾದಿ ಪಕ್ಷದ ಸದಸ್ಯೆ ಅದಿತಿ ಯಾದವ್ ಹಂಚಿಕೊಂಡು, ಚುನಾವಣೋತ್ತರ ಕೋಮು ಹಿಂಸಾಚಾರಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಹಲವಾರು ಟ್ವಿಟರ್ ಮತ್ತು ಫೇಸ್‌ಬುಕ್ ಬಳಕೆದಾರರು ಈ ವಿಡಿಯೊವನ್ನು ಅನ್ನು ಪೋಸ್ಟ್ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್:

ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊ

2019 ರಲ್ಲಿ  ಈ ವೀಡಿಯೊ ಕೋಮು ಪ್ರಚೋದನೆಯ ಹೇಳಿಕೆಯೊಂದಿಗೆ  ವ್ಯಾಪಕವಾಗಿ ಹರಡಿದಾಗ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಸತ್ಯವನ್ನು ತಿಳಿಸಿತ್ತು. ಈ ಘಟನೆಯು ಅಕ್ಟೋಬರ್ 2, 2019 ರಂದು ಬಿಹಾರದ ಜಿಲ್ಲೆಯ ಕೈಮೂರ್‌ನ ಭಬುವಾ ನಗರದಲ್ಲಿ ನಡೆದಿದೆ. ಅದೇ ವೀಡಿಯೊವನ್ನು ಅಕ್ಟೋಬರ್ 5, 2019 ರಂದು ಸಿಪಿಐ(ಎಂ) ಪಾಲಿಟ್‌ಬ್ಯೂರೋ ಸದಸ್ಯ-ಎಂಡಿ ಸಲೀಂ ಅವರು ಹಂಚಿಕೊಂಡಿದ್ದಾರೆ. ನಂತರ ಸಲೀಂ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದರು.

ಹಲ್ಲೆಗೊಳಗಾದ ಯುವಕನ ಹೆಸರು ಶಾಹಿದ್ ರೈನ್. ಸಿಖತಿ ಗ್ರಾಮದ ನಿವಾಸಿ ಈ ಶಾಹಿದ್ ರೈನ್ ಎಂಬ ಯುವಕ ಮಾಧವ್ ಸಿಂಗ್ ಎಂಬಾತನನ್ನು ಕೊಲೆ ಮಾಡಿದ ಆರೋಪ ಆತನ ಮೇಲಿತ್ತು ಹಾಗಾಗಿ  ಅವನ ಹತ್ಯೆಗೊಳಗಾದ ವ್ಯಕ್ತಿಯ ಸಂಬಂಧಿಕರು ಈ ಯುವಕನನ ಮೇಲೆ ಹಲ್ಲೆ ಮಾಡಿದ್ದಾರೆ.  ಪ್ರಕರಣಕ್ಕೆ ಯಾವುದೆ ಕೋಮು ಸಂಘರ್ಷದ ಹಿನ್ನಲೆಯಿಲ್ಲ. ಈ ಘಟನೆಗೆ ಜಮೀನು ವಿವಾದ ಕಾರಣ ಎಂದು ಎಸ್‌ಎಚ್‌ಒ ಶಶಿಭೂಷಣ್ ಆಲ್ಟ್ ನ್ಯೂಸ್‌ಗೆ ತಿಳಿಸಿದ್ದಾರೆ. ಕೈಮೂರ್ ಎಸ್ಪಿ ದಿಲ್ನವಾಜ್ ಅಹ್ಮದ್ ಕೂಡ ಘಟನೆಯಲ್ಲಿ ಯಾವುದೇ ಕೋಮು ಸಂಘರ್ಷದ ಹಿನ್ನಲೆಯಿಲ್ಲ ಎಂದು ತಿಳಿಸಿದ್ದಾರೆ. ಶಾಹಿದ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2019 ರಲ್ಲಿ ಇಂಡಿಯಾ ಟುಡೇ ಈ ಘಟನೆಯ ಬಗ್ಗೆ ವರದಿಯನ್ನು ಪ್ರಕಟಿಸಿತು.

ಕಳೆದ ವರ್ಷ, ಯುಪಿ ಪೊಲೀಸರು ಇಂಡಿಯಾ ಟುಡೆ ಮಾಡಿದ್ದ ಫ್ಯಾಕ್ಟ್‌ಚೆಕ್ ಅನ್ನು ಹಂಚಿಕೊಂಡಿದ್ದರು ಮತ್ತು ವೀಡಿಯೊ ಹಳೆಯದು ಮತ್ತು ಬಿಹಾರದ್ದು ಎಂದು ಸ್ಪಷ್ಟಪಡಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಯುಪಿ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಒಂದು ದಿನದ ನಂತರ, ಎಸ್‌ಪಿ ಸದಸ್ಯೆ ಅದಿತಿ ಯಾದವ್ ಬಿಹಾರದ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದು, ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಬಿಜೆಪಿಯ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ.

ಕೃಪೆ:ಆಲ್ಟ್‌ನ್ಯೂಸ್


ಇದನ್ನು ಓದಿರಿ: Fact check: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಪುಟಿನ್ ಎಚ್ಚರಿಕೆ ನೀಡಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights