ಫ್ಯಾಕ್ಟ್‌ಚೆಕ್: ಸಿನಿಮಾದ ದೃಶ್ಯವನ್ನು ನಿಜ ಘಟನೆ ಎಂದು ಹಂಚಿಕೊಂಡ ನಿವೃತ್ತ IPS ಅಧಿಕಾರಿ

ನಿವೃತ್ತ IPS ಅಧಿಕಾರಿ, ಪುದುಚೆರಿಯ ಮಾಜಿ ರಾಜ್ಯಪಾಲೆ ಮತ್ತು BJP ನಾಯಕರಾದ ಕಿರಣ್‌ ಬೇಡಿ ತಮ್ಮ ಟ್ವಿಟರ್‌ನಲ್ಲಿ ವಿಡಿಯೊವೊಂದು ಪೋಸ್ಟ್‌ ಮಾಡಿದ್ದು ಅವರ ವಿಡಿಯೊಗೆ ಹಲವರು ರಿ ಟ್ವಿಟ್ ಮಾಡಿದ್ದಾರೆ. ಆ ವಿಡಿಯೊ ದೃಶ್ಯದಲ್ಲಿ ಅಂತಾದ್ದು ಏನಿದೆ ಅಂತೀರಾ ?  ಈ ವಿಡಿಯೊ ಪೋಸ್ಟ್‌ ನೋಡಿ. ದೈತ್ಯ ಮೀನೊಂದು ನೀರಿನಿಂದ ಹಾರಿ ಹೆಲಿಕಾಪ್ಟರ್ ಮೇಲೆ ದಾಳಿ ಮಾಡುವ 15 ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಯೂ ಈ “ಅಪರೂಪದ ವೀಡಿಯೊ” ಗಾಗಿ ಮಿಲಿಯನ್ ಡಾಲರ್‌ಗಳನ್ನು ಪಾವತಿಸಿದೆ. ಎಂದು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಕಿರಣ್‌ ಬೇಡಿ ಹಂಚಿಕೊಂಡಿರುವ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

https://twitter.com/thekiranbedi/status/1524275966930944000

ಫ್ಯಾಕ್ಟ್‌ಚೆಕ್:

InVid ಎಂಬ ವೀಡಿಯೊ ಪರಿಶೀಲನಾ ಸಾಫ್ಟ್‌ವೇರ್ ಬಳಸಿಕೊಂಡು Yandex ನಲ್ಲಿ  ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ಕಿರಣ್‌ ಬೇಡಿ ಮಾಡಿರುವ ವಿಡಿಯೊ ಪೋಸ್ಟ್‌ನಲ್ಲಿರುವ ದೃಶ್ಯಗಳು 2017 ರಲ್ಲಿ ರಿಲೀಸ್‌ ಆಗಿದ್ದ ‘ ಫೈವ್‌ (5) ಹೆಡೆಡ್ ಶಾರ್ಕ್ ಅಟ್ಯಾಕ್‘ ನಲ್ಲಿ ಕಂಡು ಬರುವ ದೃಶ್ಯಗಳಾಗಿವೆ ಎಂದು ತಿಳಿದು ಬಂದಿದೆ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಇದನ್ನು ಸುಳಿವಿನಂತೆ ಬಳಸಿಕೊಂಡು, ನಾವು ಯೂಟ್ಯೂಬ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ ವೇಳೆ ಮತ್ತು ಚಿತ್ರದ ಅಧಿಕೃತ ಟ್ರೇಲರ್ ಅನ್ನು ಯೂಟ್ಯೂಬ್ ಮೂವೀಸ್ ಸೆಪ್ಟೆಂಬರ್ 2017 ರಂದು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಟ್ರೈಲರ್‌ನಲ್ಲಿ 1:05 ನಿಮಿಷಗಳಲ್ಲಿ, ಶಾರ್ಕ್‌ವೊಂದು ಸಮುದ್ರದಿಂದ ಹಾರಿ ಹೆಲಿಕಾಪ್ಟರ್ ಮೇಲೆ ದಾಳಿ ಮಾಡುವ ದೃಶ್ಯವನ್ನು ನೋಡಬಹುದು.

ಅಲ್ಲದೆ ಈ ವೈರಲ್ ವಿಡಿಯೊ ಸುಮಾರು ಎರಡು ಮೂರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು 2020 ರಲ್ಲಿ Altnews ಇದನ್ನು ಫ್ಯಾಕ್ಟ್‌ಚೆಕ್ ಮಾಡಿದೆ, ಅದನ್ನು ಇಲ್ಲಿ ನೋಡಬಹುದು. ಹಾಗಾಗಿ ಕಿರಣ್‌ ಬೇಡಿ ಮಾಡಿರುವ ವಿಡಿಯೋ ಪೋಸ್ಟ್‌ಗೆ ಸಂಬಂಧಿಸಿದಂತೆ ಹೇಳುವುದಾದ,ರೆ ಅದೊಂದು ಸಿನಿಮಾದಲ್ಲಿ ಕಂಡುಬರುವ ದೃಶ್ಯವಾಗಿದೆ ಆದರೆ ಈ ವಿಡಿಯೋವನ್ನು ನಿಜವೆಂದು ನಂಬಿ ಕಿರಣ್‌ ಬೇಡಿಯು  “ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಒಂದು ಮಿಲಿಯನ್ ಡಾಲರ್ ಪಾವತಿಸಿದೆ” ಎಂಬ ಸುಳ್ಳನ್ನು ಪರಿಶೀಲಿಸದೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಇಂಟರ್‌ನೆಟ್‌ನಲ್ಲಿ ಸಿಗುವ ಯಾವುದೇ ವಿಡಿಯೊದಲ್ಲಿ ಈ ವಿಡಿಯೋಗಾಗಿ “ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಒಂದು ಮಿಲಿಯನ್ ಡಾಲರ್ ಪಾವತಿಸಿದೆ” ಎಂದು ಬರೆದಿದ್ದರೆ ಅದೊಂದು ಇಂಟರ್ನೆಟ್ ನಲ್ಲಿ ಮಾಡಲಾಗುತ್ತಿರುವ ದೊಡ್ಡ ವಂಚನೆಯಾಗಿದೆ. 2017 ರಲ್ಲಿ, ಯುಎಸ್ ಮೂಲದ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಸ್ನೋಪ್ಸ್ ವರದಿಯೊಂದನ್ನು ಮಾಡಿದ್ದು ‘ಇನ್‌ಟು ದಿ ಸ್ಟಾರ್ಮ್’ ಚಲನಚಿತ್ರದ ಕ್ಲಿಪ್‌ನೊಂದಿಗೆ ಇದನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನಿವೃತ್ತ IPS  ಅಧಿಕಾರಿ ಕಿರಣ್‌ಬೇಡಿಯು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ನೈಜ ಘಟನೆಯಲ್ಲ ಮತ್ತು ಅದಕ್ಕೆ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಒಂದು ಮಿಲಿಯನ್ ಡಾಲರ್ ಪಾವತಿ ಮಾಡಿದೆ ಎಂಬುದೆಲ್ಲಾ ಸುಳ್ಳು ಸುದ್ದಿ ಈ ವಿಷಯಗಳನ್ನು ಪರಿಶೀಲಿಸದೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಧನುಷ್‌ರವರ ‘ಕೊಲವೆರಿ ಡಿ’ ಹಾಡನ್ನು ಬೇರೆ ಜಾಹಿರಾತಿನಿಂದ ಕದಿಯಲಾಗಿದೆ ಎಂಬುದು ಸತ್ಯವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಸಿನಿಮಾದ ದೃಶ್ಯವನ್ನು ನಿಜ ಘಟನೆ ಎಂದು ಹಂಚಿಕೊಂಡ ನಿವೃತ್ತ IPS ಅಧಿಕಾರಿ

  • May 11, 2022 at 7:53 pm
    Permalink

    Kiran Bedi is a fraud. She for wrong reasons always wanted to be in limelight

    Reply

Leave a Reply

Your email address will not be published.

Verified by MonsterInsights