ಫ್ಯಾಕ್ಟ್‌ಚೆಕ್: ಕಾಬಾದಲ್ಲಿ ಪವಾಡ ನಡೆದಿದ್ದು ನಿಜವೆ? ವಾಸ್ತವವೇನು?

ಕಾಬಾದಲ್ಲಿ ಒಂದು ಪವಾಡ ಸಂಭವಿಸಿದೆ, ಕಾಬಾದ ಬಾಗಿಲು ತೆರೆಯುತ್ತಿದ್ದಂತೆ “ಒಳಗೆ ಏನೂ ಕಾಣಿಸಲಿಲ್ಲ” ಆದರೆ ಅಶರೀರ ಪ್ರಾರ್ಥನೆಗಳು ಕೇಳಿಬಂದಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೊ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕಾಬಾದಲ್ಲಿ ಏನು ಪವಾಡ ನಡೆದಿದೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದೆಯನ್ನು ಪರಿಶೀಲಿಸೋಣ.


ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಕಾಬಾದ ಬಳಿ ಮೊಬೈಲ್ ಕ್ಯಾಮೆರಾಗಳನ್ನು ಹಿಡಿದಿರುವ ಜನರ ಒಂದೇ ರೀತಿಯ ಚಿತ್ರವಿರುವ ಹಲವು ಫೇಸ್‌ಬುಕ್ ಪೋಸ್ಟ್ ಕಂಡುಬಂದಿದೆ. ‘ವಿಲ್ ಆಫ್ ಅಲ್ಲಾ‘ ಹೆಸರಿನ ಫೇಸ್‌ಬುಕ್ ಗ್ರೂಪ್‌ನ ಫೇಸ್‌ಬುಕ್ ಪೋಸ್ಟ್, ‘ಕಾಬಾದಲ್ಲಿನ  ಬಾಗಿಲು ತೆರೆದಾಗ ಪವಾಡ ನಡೆದಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊ ಸುಳ್ಳು’ ಎಂದು ಹೇಳಿದೆ. ಇದು ರಂಜಾನ್‌ ಸಂದರ್ಭದ ವೀಡಿಯೊ ಎಂದು ಹೇಳುತ್ತದೆ.

ಸೌದಿ ಅರೇಬಿಯಾದ ಮಾಧ್ಯಮವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅದೇ ವೀಡಿಯೊವನ್ನು ಪರಿಶೀಲಿಸಿದ್ದು ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾಗಿರುವ ಕಾಬಾ ಪವಾಡದ ಪ್ರತಿಪಾದನೆ ಸುಳ್ಳು ಎಂದು ದೃಢಪಡಿಸಿದೆ. ರಂಜಾನ್ ಸಂದರ್ಭದಲ್ಲಿ ವಿಡಿಯೋ ಸೆರೆಹಿಡಿಯಲಾಗಿದೆ. ತಹಜ್ಜುದ್ (ರಾತ್ರಿ) ನಮಾಝಿನ ಸಮಯದಲ್ಲಿ ರಾಜಕೀಯ ನಿಯೋಗಕ್ಕಾಗಿ ಕಾಬಾದ ಪ್ರವೇಶದ್ವಾರವನ್ನು (ಬಾಗಿಲು ತೆರೆಯುವುದು) ತೆರೆಯುವ ವೀಡಿಯೊ ತೋರಿಸಲಾಗಿದೆ. ಕಾಬಾದ ಬಾಗಿಲು ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ‘ಉಮ್ರಾ’ ಮಾಡಲು ತೆರೆಯಲಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಂಜಾನ್ ಸಂದರ್ಭದಲ್ಲಿ ಕಾಬಾದ ಬಾಗಿಲನ್ನು ತೆಗೆಯುವ ವೇಳೆ ಮಾಡಲಾದ ಪ್ರಾರ್ಥನೆಯನ್ನು ವಿಡಿಯೋ ಮಾಡಿ ಇದು ಪವಾಡ ಎಂದು ತಿರುಚಿ ತಪ್ಪು ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ – ವಾಟ್ಸಾಪ್‌ಲ್ಲಿ ಹರಿದಾಡುತ್ತಿದೆ ನಕಲಿ ಸಂದೇಶ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights