ಫ್ಯಾಕ್ಟ್‌ಚೆಕ್: ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯ ಪ್ರಜ್ಞೆ ತಪ್ಪಿಸಿದ ಮೌಲ್ವಿ – ಇದು ನಾಟಕೀಯ ವಿಡಿಯೋ
ಚಿಕಿತ್ಸೆಗಾಗಿ ಬಂದ ಹಿಂದೂ ಮಹಿಳೆಯ ಮೇಲೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದ ಮೌಲ್ವಿಯೊಬ್ಬರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
https://twitter.com/AnchalTv/status/1570615315830308866/
ಸುದರ್ಶನ್ ನ್ಯೂಸ್ ಚಾನೆಲ್‌ನ ಆಂಕರ್ ‘ಅಂಚಲ್ ಯಾದವ್ ‘ಅವರು ವೀಡಿಯೊವನ್ನು ಹಂಚಿಕೊಂಡಿದ್ದು, “ಇದನ್ನು ನೋಡಿ, ಚಿಕಿತ್ಸೆಗಾಗಿ ಮಸೀದಿಗಳಿಗೆ ಹೋಗುವ ಮಹಿಳೆಯರನ್ನು, ದೇವರ ಜನರು ಹೀಗೆ ನಡೆಸಿಕೊಳ್ಳುತ್ತಾರೆ” ಎಂಬ ಒಕ್ಕಣೆಯೊಂದಿಗೆ ತಮ್ಮ ಟ್ವಿಟರ್ ಅಕೌಂಟ್‌ನಿಂದ ಹಂಚಿಕೊಂಡಿದ್ದಾರೆ.
झाड़-फूंक के नाम पर लोग मजारों में मौलवियों के पास जाते हैं। देखिए पूरा #Video .. वहां क्या होता है, यह कौम कभी काफिरो का अच्छा कर सकती है क्या ??
ये बात सबको समझनी चाहिए pic.twitter.com/nac30eyTHb— योगी विशालानंद Yogi Vishalanand (Baba Boys Hostel) (@yogivishalnand6) September 15, 2022
ಮೌಲ್ವಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕೋಣೆಗೆ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವ ವೀಡಿಯೊವನ್ನುಹಂಚಿಕೊಂಡು, ಇವರು ಭೂತೋಚ್ಚಾಟನೆಯ ಹೆಸರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ? ಎಂದು ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
BOOM ಫ್ಯಾಕ್ಟ್‌ಚೆಕ್ ತಂಡ ವೈರಲ್ ಪ್ರತಿಪಾದನೆಯನ್ನು ಸುಳ್ಳು ಎಂದು ವರದಿ ಮಾಡಿದೆ. ವೈರಲ್ ಕ್ಲಿಪ್‌ನ ಪೂರ್ಣ ವಿಡಿಯೋ ಲಭ್ಯವಾಗಿದ್ದು ಇದು ಸಂಪೂರ್ಣ ಸ್ಕ್ರಿಪ್ಟ್ ಮಾಡಲಾದ (ನಾಟಕೀಯ) ವಿಡಿಯೋ ಎಂದು ಕಂಡುಹಿಡಿದಿದೆ.
ಈ ವಿಡಿಯೋದಲ್ಲಿ ಬರುವ ಎಲ್ಲಾ ಸನ್ನಿವೇಷಗಳು ಕಾಲ್ಪನಿಕವಾಗಿದೆ ಎಂದು ವಿಡಿಯೋದ ಕೊನೆಯಲ್ಲಿ ಅದರ ಡಿಸ್‌ಕ್ಲೈಮರ್‌ನಲ್ಲಿ ತೋರಿಸಲಾಗಿದೆ. ಅಲ್ಲದೆ ‘ಮೌಲ್ವಿ’ ಪಾತ್ರವನ್ನು ನಿರ್ವಹಿಸುವ ವೃದ್ದನು ಅದೇ ರೀತಿಯ ಸ್ಕ್ರಿಪ್ಟ್ ಮಾಡಿದ ಇತರ ವೀಡಿಯೊಗಳಲ್ಲಿ ನಟಿಸಿದ್ದಾರೆ ಎಂದು ಬೂಮ್ ಪತ್ತೆ ಮಾಡಿದೆ.

InVID ಉಪಕರಣವನ್ನು ಬಳಸಿಕೊಂಡು ವೀಡಿಯೊವನ್ನು ವಿವಿಧ ಕೀಫ್ರೇಮ್‌ಗಳಲ್ಲಿ ವಿಂಗಡಿಸಿ Google ಇಮೇಜ್ ಸರ್ಚ್ ಮಾಡಿದಾಗ Facebook ಮತ್ತು Twitter ನಲ್ಲಿ ವಿವಿಧ ಹ್ಯಾಂಡಲ್‌ಗಳಲ್ಲಿ ಮೂಲ ವಿಡಿಯೋ ಲಭ್ಯವಾಗಿದೆ.
Facebook ಪೇಜ್ ಒಂದರಲ್ಲಿ, ಅದೇ ವೀಡಿಯೊದ ದೀರ್ಘ ಆವೃತ್ತಿಯು ಕಂಡುಬಂದಿದ್ದು, 11:52 ನಿಮಿಷಗಳ ವೀಡಿಯೊದ ಕೊನೆಯಲ್ಲಿ ಡಿಸ್‌ಕ್ಲೈಮರ್ ಇದ್ದು, “ಈ ವೀಡಿಯೊದಲ್ಲಿರುವ ಎಲ್ಲವೂ ಕಾಲ್ಪನಿಕವಾಗಿದೆ” ಎಂದು ಉಲ್ಲೇಖಿಸಲಾಗಿದೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ ಮತ್ತೊಂದು ಸ್ಕ್ರಿಪ್ಟ್ ವೀಡಿಯೊ ಲಭ್ಯವಾಗಿದ್ದು, ಹುಡುಗನೊಬ್ಬ ತನ್ನ ಗೆಳತಿ ಮದುವೆಯಾದ ನಂತರ ಹುಚ್ಚನಾಗಿ ಅಲೆಯುತ್ತಿರುತ್ತಾನೆ, ಆತನಿಗೆ ಸಾಂತ್ವನ ಹೇಳುವ ವೃದ್ದನ ಪಾತ್ರವನ್ನು ವೈರಲ್ ವಿಡಿಯೋದಲ್ಲಿ ಮೌಲ್ವಿ ಪಾತ್ರವನ್ನು ನಿರ್ವಹಿಸಿದ ವ್ಯಕ್ತಿಯೇ ವೃದ್ದನ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೃದ್ದನು ಇನ್ನು ಹಲವು ಈ ರೀತಿಯ ನಾಟಕೀಯ ವಿಡಿಯೋದಲ್ಲಿ ನಟಿಸಿರುವುದನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ನಾಟಕೀಯ ದೃಶ್ಯಗಳನ್ನು ಹಂಚಿಕೊಂಡು ಮೌಲ್ವಿಯಿಂದ ಮಹಿಳೆಯ ಮೇಲೆ ಅತ್ಯಾಚಾರ ಎಂಬ ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಪರಿಶೀಲಿಸದೆ ಇಂತಹ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನವೂ ನಡೆಯುತ್ತವೆ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತೊಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಬ್ರೆಜಿಲ್‌ನಲ್ಲಿ ನಡೆದ ಹತ್ಯೆಯನ್ನು ‘ಮುಸ್ಲಿಮರಿಂದ ಹಿಂದೂ ಯುವತಿಯ ಅತ್ಯಾಚಾರ ಮತ್ತು ಹತ್ಯೆ’ ಎಂದು ತಪ್ಪಾಗಿ ಹಂಚಿಕೆ

