ಫ್ಯಾಕ್ಟ್‌ಚೆಕ್: ಈ ಸಾಧನಗಳು ದರೋಡೆ ಮಾಡುವವರಿಗೆ ಅನೂಕೂಲ ಮಾಡಿಕೊಡುತ್ತವೆಯೇ?

ಪೆಟ್ರೋಲ್ ಬಂಕ್‌ಗಳು ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಕೀ ರಿಂಗ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಹೇಳಿಕೊಳ್ಳುವ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಈ ಸಾಧನಗಳನ್ನು ಬಳಸಿಕೊಂಡು ವಾಹನಗಳನ್ನು ಹಿಂಬಾಲಿಸಿ ದರೋಡೆ ಮಾಡಲು ಇದು ಅವಕಾಶ ಮಾಡಿಕೊಡುತ್ತದೆ ಎಂದು ಪ್ರತಿಪಾದಿಸಲಾಗಿದೆ.

ಯಾರಾದರೂ ನಿಮಗೆ ಈ ಸಾಧನಗಳನ್ನು ಉಚಿತವೆಂದು ನೀಡಲು ಬಂದರೆ ದಯಮಾಡಿ ಸ್ವೀಕರಿಸಬೇಡಿ, ಇದನ್ನ ಒಮ್ಮೆ ನೀವು  ಸ್ವೀಕರಿಸಿದರೆ, ನೀವು ಎಲ್ಲಿದ್ದೀರಿ ಎಂದು ವಂಚಕರಿಗೆ ಟ್ರಾಕ್ ಮಾಡಲು ಸುಲಭವಾಗುತ್ತದೆ. ನಿಮ್ಮ ಬಳಿ ಇರುವ ಹಣ ಮತ್ತು ಪ್ರಾಣ ಎರಡಕ್ಕೂ ಸಂಚಕಾರ ತರುತ್ತಾರೆ ಎಂದು ಹೇಳಿಕೊಂಡು ಪೋಸ್ಟ್‌ ಮಾಡಿದ್ದಾರೆ.

ಇದೇ ರೀತಿಯ ಹಲವು ಸಂದೇಶಗಳನ್ನು ಕೆಲ ಸಾಮಾಜಿಕ ಮಾಧ್ಯಮದ ಬಳಕೆದಾರರು ಏನ್‌ಸುದ್ದಿ.ಕಾಂಗೂ ರವಾನಿಸಿ, ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, 30 ಆಗಸ್ಟ್ 2008 ರಂದು ದಕ್ಷಿಣ ಆಫ್ರಿಕಾ ಮೂಲದ ‘ಇಂಡಿಪೆಂಡೆಂಟ್ ಆನ್‌ಲೈನ್‘ ಸುದ್ದಿ ವೆಬ್‌ಸೈಟ್  ಪ್ರಕಟಿಸಿದ “ಕ್ಯಾಲ್ಟೆಕ್ಸ್ ಹಿಟ್ ಬೈ ಅರ್ಬನ್ ಮಿಥ್” ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಲೇಖನವನ್ನು ಲಭ್ಯವಾಗಿದೆ.

ಈ ಲೇಖನದ ಪ್ರಕಾರ, 2008 ರಲ್ಲಿ ಚೆವ್ರಾನ್ ಕಾರ್ಪೊರೇಶನ್‌ನ ಪೆಟ್ರೋಲಿಯಂ ಬ್ರಾಂಡ್ ಕ್ಯಾಲ್ಟೆಕ್ಸ್ ತಮ್ಮ ಗ್ರಾಹಕರಿಗೆ ಇಂಧನ ಕೇಂದ್ರಗಳಲ್ಲಿ ಉಚಿತ ಕ್ಯಾಲ್ಟೆಕ್ಸ್ ಬ್ರಾಂಡ್ ಕೀ ರಿಂಗ್ ನೀಡಲು ಪ್ರಾರಂಭಿಸಿದಾಗ ಈ ವದಂತಿಗಳು ಪ್ರಾರಂಭವಾದವು. ಈ ಕೀ ರಿಂಗ್‌ಗಳು ಬ್ರ್ಯಾಂಡ್ ಹೆಸರನ್ನು ಹೈಲೈಟ್ ಮಾಡಲು ಮಿನುಗುವ ಸಾಧನವನ್ನು ಹೊಂದಿರುತ್ತವೆ.

Caltex branded key ring. Source: Snopes
Caltex branded key ring. Source: Snopes

ಕ್ಯಾಲ್ಟೆಕ್ಸ್ ಬ್ರಾಂಡ್ ಕೀ ರಿಂಗ್ ಮೂಲ: ಸ್ನೋಪ್ಸ್

ಈ ಹಿಂದೆಯೂ ಇದೇ ರೀತಿ ಕೀ ರಿಂಗ್‌ಗಳ ಒಳಗೆ ಟ್ರ್ಯಾಕಿಂಗ್ ಸಾಧನಗಳನ್ನು ಇಡಲಾಗಿದೆ ಎಂದು ಜನರಿಗೆ ಎಚ್ಚರಿಕೆ ನೀಡುವ ಹಲವಾರು ಇಮೇಲ್‌ಗಳು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದವು. ಆದರೆ ಪೊಲೀಸ್  ಅಧೀಕ್ಷಕ ವಿನ್ಸೆಂಟ್ ಮ್ಡುಂಗೆ ಅಂತಹ ಹೇಳಿಕೆಗಳು ಸುಳ್ಳು ಮತ್ತು ಅಂತಹ ಇಮೇಲ್‌ಗಳ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಈ ಕೀ ರಿಂಗ್‌ಗಳಲ್ಲಿ ಟ್ರ್ಯಾಕಿಂಗ್ ಸಾಧನವಿಲ್ಲ ಎಂದು ಕ್ಯಾಲ್ಟೆಕ್ಸ್ ವಕ್ತಾರ ಮಿರಾಂಡಾ ಆಂಥೋನಿ ಗ್ರಾಹಕರಿಗೆ ಭರವಸೆ ನೀಡಿದ್ದರು. ನಂತರ 2016 ರಲ್ಲಿ ಮಯಾಲ್ಸಿಯಾದಲ್ಲಿ ಅದೇ ವದಂತಿಯು ಮರುಕಳಿಸಿದಾಗ, ಮಲೇಷಿಯಾದ ಪೊಲೀಸರು ಇದು ಸುಳ್ಳು ಎಂದು ಹೇಳಿಕೆಯನ್ನು ನೀಡಿದರು ಮತ್ತು ಈ ವಿಷಯದ ಬಗ್ಗೆ ಪೊಲೀಸರು ಯಾವುದೇ ವರದಿಗಳನ್ನು ಸ್ವೀಕರಿಸಿಲ್ಲ ಎಂದು ನ್ಯೂ ಸ್ಟ್ರೈಟ್ ಟೈಮ್ಸ್ ವರದಿ ಮಾಡಿದೆ.

ಇದಲ್ಲದೆ, ವೈರಲ್ ಪೋಸ್ಟ್‌ನಲ್ಲಿ ಕಂಡುಬರುವ ಟ್ರ್ಯಾಕರ್ ಕೀ ರಿಂಗ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಇದು ಸುಮಾರು ₹150 ವೆಚ್ಚವಾಗುತ್ತದೆ ಮತ್ತು ಬ್ಲೂಟೂತ್ ತಂತ್ರಜ್ಞಾನದೊಂದಿಗೆ ಸಾಮಾನ್ಯವಾಗಿ 10 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಸಂಗೀತ ಕೇಳಲು ಬಳಸಲಾಗುತ್ತದೆ. ಆದರೆ ಈ ಸಾಧನಗಳಿಂದ ಮತ್ತೊಬ್ಬ ವ್ಯಕ್ತಿಯನ್ನಾಗಲಿ ಟ್ರಾಕ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ಜನರನ್ನು ದರೋಡೆ ಮಾಡಲು ಟ್ರ್ಯಾಕ್ ಮಾಡಬಹುದಾದ ಕೀ ಚೈನ್‌ಗಳನ್ನು ವಂಚಕರು ನೀಡುತ್ತಿದ್ದಾರೆ ಎಂಬ ವದಂತಿಗಳು ಹಳೆಯದಾಗಿದ್ದು, ಮತ್ತೆ ಇದೇ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್‌ ಪಕ್ಷದ ಹಸ್ತದ ಚಿನ್ಹೆ ಮುಸ್ಲಿಂ ಧರ್ಮದಿಂದ ಬಂದಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights