ಫ್ಯಾಕ್ಟ್‌ಚೆಕ್: ಮೌಲ್ವಿಯೊಬ್ಬರು ಆಹಾರಕ್ಕೆ ಊದುವ ಹಳೆಯ ದೃಶ್ಯಗಳನ್ನು ಉಗುಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡ BJP

ವ್ಯಕ್ತಿಯೊಬ್ಬರು ದೊಡ್ಡ ಅಡುಗೆ ಪಾತ್ರೆಯಿಂದ ಸ್ವಲ್ಪ ಆಹಾರವನ್ನು ಹೊರತೆಗೆದು, ಅದರ ಮೇಲೆ ಉಗುಳಿ ಮತ್ತು ಪಾತ್ರೆಯಲ್ಲಿನ ಆಹಾರದೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ, ವ್ಯಕ್ತಿಯೊಬ್ಬರು ಆಹಾರದ ತಟ್ಟೆಯಲ್ಲಿ ಉಗುಳುತಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು BJP ಬೆಂಬಲಿಗರು ಹಂಚಿಕೊಳ್ಳತ್ತಿದ್ದಾರೆ.

https://twitter.com/MajorPoonia/status/1613751144429555712?ref_src=twsrc%5Etfw%7Ctwcamp%5Etweetembed%7Ctwterm%5E1613751144429555712%7Ctwgr%5E7e54b6191ee2836f2cc3b93bc6fa758c4e0df049%7Ctwcon%5Es1_&ref_url=https%3A%2F%2Fwww.altnews.in%2Fhindi%2Ffact-check-does-this-video-show-a-maulana-spitting-on-food%2F

BJP ಬೆಂಬಲಿಗರಾದ ಸುರೇಂದ್ರ ಪುನಿಯಾ ಅವರು ಜನವರಿ 13, 2023 ರಂದು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಆಹಾರದಲ್ಲಿ ‘ಉಗುಳುವುದು’ ಇವರ ಪದ್ದತಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2021 ರಿಂದ ಈ ವಿಡಿಯೊ ಹರಿದಾಡುತ್ತಿದ್ದು ಇದು ಸುಳ್ಳು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ನವೆಂಬರ್ 2021 ರಲ್ಲಿ ಈ ವೀಡಿಯೊವನ್ನು ಹಂಚಿಕೊಂಡವರಲ್ಲಿ ಬಿಜೆಪಿ ಸದಸ್ಯೆ ಪ್ರೀತಿ ಗಾಂಧಿ ಕೂಡ ಸೇರಿದ್ದಾರೆ.

ಆಲ್ಟ್ ನ್ಯೂಸ್ ವರದಿಯ ಪ್ರಕಾರ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಗಳ್ ಸಹಾಯಕರಾದ ಹಾಜಿ ಹನೀಫ್ ಉಳ್ಳಾಲ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಕೇರಳದ ತಾಜುಲ್ ಉಲೇಮಾ ದರ್ಗಾದಲ್ಲಿ 2021 ನವೆಂಬರ್ 6 ರಿಂದ 8 ರವರೆಗೆ ಆಚರಿಸಲಾಗುವ ಉರ್ಸ್ ಸಂದರ್ಭದಲ್ಲಿ ಆಹಾರ ವಿತರಣೆ ಕಾರ್ಯಕ್ರಮವನ್ನು (ಲಂಗರ್) ಆಯೋಜಿಸಲಾಗಿದೆ ಎಂದು ಹಾಜಿ ಹನೀಫ್ ಉಲ್ಲಾ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ತಾಜುಲ್ ಉಲಮಾ ಅವರು ಕೇರಳದಲ್ಲಿ ಸುನ್ನಿ ಮುಸ್ಲಿಂ ವಿದ್ವಾಂಸರಾಗಿದ್ದರು, ಅವರ ಪೂರ್ಣ ಹೆಸರು ಅಸಯ್ಯದ್ ಅಬ್ದುಲ್ ರಹಮಾನ್ ಅಲ್-ಬುಖಾರಿ. ದರ್ಗಾಕ್ಕೆ ಅವರ ಹೆಸರನ್ನು ಇಡಲಾಗಿದೆ, ಆದರೆ ಅವರನ್ನು ಉಳ್ಳಾಲ ತಂಗಳ್ ಎಂದು ಕರೆಯಲಾಗುತ್ತಿತ್ತು. ಅವರು ಫಝಲ್ ಕೋಯಮ್ಮ ತಂಗಲ್ ಅವರ ತಂದೆಯಾಗಿದ್ದು, ಅವರು ಆಹಾರವನ್ನು ಊದುವುದನ್ನು ವೀಡಿಯೊದಲ್ಲಿ ಕಾಣಬಹುದು.

https://twitter.com/naveenjindalbjp/status/1457592100929736704?ref_src=twsrc%5Etfw%7Ctwcamp%5Etweetembed%7Ctwterm%5E1457592100929736704%7Ctwgr%5E6097a3886a9dc27a2f7171cf52992cfe025b38ea%7Ctwcon%5Es1_&ref_url=https%3A%2F%2Fwww.altnews.in%2Fhindi%2Ffact-check-does-this-video-show-a-maulana-spitting-on-food%2F

ಉಳ್ಳಾಲ ತಂಗಳ್ ಅವರು ಫೆಬ್ರವರಿ 2014 ರಲ್ಲಿ ನಿಧನರಾದರು. ಅರೇಬಿಕ್ ಕ್ಯಾಲೆಂಡರ್ ಪ್ರಕಾರ ನವೆಂಬರ್‌ನಲ್ಲಿ ಅವರ ಮರಣ ವಾರ್ಷಿಕೋತ್ಸವ. ಉರ್ಸ್ ಎನ್ನುವುದು ಧಾರ್ಮಿಕ ಮುಖಂಡರ ಮರಣ ವಾರ್ಷಿಕೋತ್ಸವದಂದು ಆಚರಿಸಲಾಗುವ ಮೂರು ದಿನಗಳ ಕಾರ್ಯಕ್ರಮವಾಗಿದೆ. ಇದು ಸೂಫಿ ಸುನ್ನಿ ಮುಸ್ಲಿಮರಲ್ಲಿ ಪ್ರಚಲಿತವಾಗಿದೆ ಮತ್ತು ಅವರು ಆಚರಿಸುತ್ತಾರೆ. ಎಂದು ಹಾಜಿ ಹನೀಫ್ ಉಲ್ಲಾ ಹೇಳಿದ್ದಾರೆ.

“ಆಹಾರವನ್ನು ತಯಾರಿಸಿದ ನಂತರ, ಹಜರತ್ ಕುರಾನ್‌ನ ಪದ್ಯಗಳನ್ನು ಪಠಿಸುತ್ತಾರೆ ಮತ್ತು ಆಹಾರದ ಮೇಲೆ ಊದುತ್ತಾರೆ. ಈ ಪದ್ಧತಿಯನ್ನು ಮಧ್ಯಾಹ್ನದ ಆಹಾರ ತಯಾರಿಸಿದ ನಂತರ ಅನುಸರಿಸಲಾಗುತ್ತದೆ.

ಅದೇ ರೀತಿ, ಹಜರತ್ ನಿಜಾಮುದ್ದೀನ್ ಔಲಿಯಾ ದರ್ಗಾದ ನಿಜಾಮಿ ಪೀರ್ಜಾದ ಅಲ್ತಮಶ್ ಅವರ ಪ್ರಕಾರ, “ಮೌಲ್ವಿಗಳು ಆಹಾರವನ್ನು ಊದುತ್ತಿದ್ದಾರೆಯೇ ಹೊರತು ಉಗುಳುವುದಿಲ್ಲ. ನಮ್ಮ ಸಮುದಾಯದಲ್ಲಿ ಈ ಪದ್ಧತಿಯನ್ನು ಅನುಸರಿಸುವ ಕೆಲವರು ಇದ್ದಾರೆ. ಇತರ ದರ್ಗಾಗಳಲ್ಲಿಯೂ, ಕೆಲವು ಆರಾಧಕರು ದಮ್ (ಕುರಾನ್‌ನ ಪದ್ಯಗಳನ್ನು ಪಠಿಸಿದ ನಂತರ ನೀರು ಊದುವುದು) ಗಾಗಿ ವಿನಂತಿಸುತ್ತಾರೆ. ಇದನ್ನು ಬರ್ಕತ್ (ಸಮೃದ್ಧಿ) ಮತ್ತು ಯೋಗಕ್ಷೇಮಕ್ಕಾಗಿ ಮಾಡಲಾಗುತ್ತದೆ. ಅಡುಗೆ ಮಾಡಿದ ನಂತರ ಫಾತಿಹಾ ನೀಡಲು ಇದನ್ನು ಮಾಡಲಾಗುತ್ತದೆ. ನಮ್ಮ ದರ್ಗಾದಲ್ಲಿ ಫಾತಿಹಾ ಓದಿದ ನಂತರ ಆಹಾರದಲ್ಲಿ ಊದುವ ಪದ್ದತಿ ಇಲ್ಲ. ಆದರೆ ಕೆಲವು ಪಂಗಡಗಳಲ್ಲಿ ಇದನ್ನು ಅನುಸರಿಸಲಾಗುತ್ತದೆ.

ಕೋವಿಡ್ ಸಂದರ್ಭದಲ್ಲಿ ವೈರಲ್ ಆದ ಇದೇ ರೀತಿಯ ವೀಡಿಯೊವನ್ನು ಹಂಚಿಕೊಂಡು ಮುಸ್ಲಿಂ ದ್ವೇಷವನ್ನು ಹರಡುವ ಉದ್ದೇಶದೊಂದಿಗೆ ಬಲಪಂಥೀಯರು  ಮುಸ್ಲಿಂ ಸಮುದಾಯಗಳು ಆಹಾರದ ಮೇಲೆ ಉಗುಳುವ ಮೂಲಕ ವೈರಸ್ ಅನ್ನು ಹರಡುತ್ತಿವೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಲವು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಕೋಮು ದ್ವೇಷವನ್ನು ಬಿತ್ತುವ ಕೆಲಸ ಮಾಡುತ್ತಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಕೂರಾ ತಂಙಳ್‌ ರವರ ತಂದೆ ಸೈಯದ್‌ ಅಬ್ದುರ್ರಹ್ಮಾನ್‌ ಅಲ್‌ ಬುಖಾರಿ ತಂಙಳ್‌ ರವರ ಉರೂಸ್‌ ನಡೆದ ಸಂದರ್ಭದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ. ಆಹಾರ ವಿತರಣೆಗೂ ಮುಂಚೆ ಕುರ್‌ ಆನ್‌ ಸೂಕ್ತಗಳನ್ನು ಓದಿ ಊದಲಾಗಿದೆ. ಇದನ್ನು ಉಗುಳಿದ್ದಾರೆ ಎಂದು ಬಿಂಬಿಸಲಾಗಿದೆ ಎಂದು ವರದಿ ತಿಳಿಸಿದೆ.

ಆಹಾರದ ಮೇಲೆ ಊದುವ ಪದ್ಧತಿಯನ್ನು ನೈರ್ಮಲ್ಯದ ದೃಷ್ಟಿಯಿಂದ ಹಾನಿಕಾರಕವೆಂದು ಪರಿಗಣಿಸಬಹುದಾದರೂ, ವಿಡಿಯೊದಲ್ಲಿ ಮೌಲಾನಾ ಆಹಾರದ ಮೇಲೆ ಉಗುಳುತಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಇದನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಆಹಾರದ ಮೇಲೆ ಉಗುಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಆನೆಯ ದಾಳಿಯಿಂದ ಪಾರಾಗುವ ವಾಹನ ಸವಾರರು! ಈ ಘಟನೆ ಕೇರಳದಲ್ಲಿ ನಡೆದಿಲ್ಲ


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights